ಭಟ್ಕಳ ಪುರಸಭೆಗೆ ವಿರೋದದ ನಡುವೆಯು ಉರ್ದು ಬೊರ್ಡ ಅಳವಡಿಸಿ ಅಧ್ಯಕ್ಷ ಪರ್ವೆಜ್ ಕಾಶಿಮ್

ಕನ್ಮಡ ಸಂಘಟನೆ ಹಾಗು ಹಿಂದೂ ಸಂಘಟನೆಗಳಿಂದ ತಿವೃವಿರೋದ

ವಿರೋದದ ನಡುವೆಯು ಪುರಸಭೇಗೆ ಉರ್ದು ಬೊರ್ಡ: ಭಟ್ಕಳದಲ್ಲಿ ಮತ್ತೊಂದು ವಿವಾದ ಬುಗಿಲು ?

ಭಟ್ಕಳ : ತಾಲೂಕಿನ ಪುರಸಭೆಗೆ ಉರ್ದು ಬೋರ್ಡ ಹಾಕಲು ಪುರಸಭೆ ಮುಂದಾಗಿದ್ದು ಈ ಸಂದರ್ಬದಲ್ಲಿ ಕನ್ನಡ ಸಂಘಟನೆ ಮತ್ತು ಹಿಂದೂ ಸಂಘಟನೆ ತಿವೃತರದ ವಿರೋದ ವ್ಯಕ್ತ ಪಡಿಸಿದ್ದು ಆದರೂ ಕೂಡ ಪುರಸಭಾ ಅಧ್ಯಕ್ಷ ಪುರಸಭೆ ಬಲವಂತವಾಗಿ ಉರ್ದು ಬೋರ್ಡ ಹಾಕಿದ್ದು ತಾಲೂಕ ತಹಶಿಲ್ದಾರರನ್ನು ಕೇಳಿ ಬೋರ್ಡ ಹಾಕಿ ಎಂದ ಕಂದಾಯ ನಿರಿಕ್ಷರಿಗೆ ಪುರಸಭಾ ಅಧ್ಯಕ್ಷ ಪರ್ವೇಜ್‌ ಕಾಶಿಮ್‌ ಅವಾಜ್‌ ಹಾಕಿದ್ದು ಉರ್ದು ಬೋರ್ಡ ಕಾರಣ ಭಟ್ಕಳ ತಾಲೂಕಿನಾಧ್ಯಂತ ಗೊಂದಲದ ವಾತಾವರಣ ನಿರ್ಮಾಣವಾಗಿದೆ .

ಭಟ್ಕಳ ಪುರಸಭೆ ಮೊದಲಿನಿಂದಲು ವಿವಾದಗಳನ್ನೆ ಸೃಷ್ಟಿಸಿಕೊಂಡು ಸಾರ್ವಜನಿಕ ವಲಯದ ಆಕ್ರೋಶಕ್ಕೆ ತುತ್ತಾಗುತ್ತಲೆ ಬರುತ್ತಿದೆ ಈ ಇದೆ ಪುರಸಭೆ ಮತ್ತೊಂದು ವಿವಾದವನ್ನು ತನ್ನ ಮೈಮೇಲೆ ಎಳೆದುಕೊಂಡಿದ್ದು ಅದೆ ಪುರಸಭೆಗೆ ಉರ್ದು ಬೊರ್ಡ ಹಾಕಲು ಮುಂದಾಗಿರುವುದಾಗಿದೆ . ಈ ಬಗ್ಗೆ ಕನ್ನಡ ಸಂಘಟನೆ ಮತ್ತು ಹಿಂದೂ ಸಂಘನೆಗಳು ತಿವೃತರದ ವಿರೋದ ವ್ಯಕ್ತಪಡಿಸಿದೆ ಈ ಮಧ್ಯ ಭಟ್ಕಳ ಕಂದಾಯ ನಿರಿಕ್ಷಕರು ತಾಲೂಕ ತಹಶಿಲ್ದಾರರನ್ನು ಕೇಳಿ ಬೋರ್ಡ ಹಾಕಿ ಎಂದು ಹೇಳಿದ್ದಾರೆ ಇದಕ್ಕೆ ಪುರಸಭಾ ಅಧ್ಯಕ್ಷರಾದ ಪರ್ವೇಜ್‌ ಕಾಶಿಮ್‌ ಅವರು ಕಂದಾಯ ಇಲಾಖೆಯವರು ಪುರಸಭೆಯ ವಿಷಯಕ್ಕೆ ತಲೆ ಹಾಕಬಾರದು ನನಗೆ ಏನು ಮಾಡ ಬೇಕು ಎಂದು ತಿಳಿದಿದೆ ಪುರಸಭೇ ನಮಗೆ ಸೇರಿದ್ದು ಎಂದು ಕಂಧಾಯ ನಿರಿಕ್ಷಕರಿಗೆ ಅವಾಜ್‌ ಹಾಕಿದ್ದಾರೆ ಎಲ್ಲರ ವಿರೋದಗಳ ನಡುವೆಯೂ ನಮ್ಮ ಪುರಸಭಾ ಅಧ್ಯಕ್ಷರು ಉರ್ದು ಬೋರ್ಡನ್ನು ಹಾಕಿಸಿಯೆ ಬಿಟ್ಟಿದ್ದಾರೆ .

ಉರ್ದು ಬೊರ್ಡ ವಿವಾದಕ್ಕೂ ಮೊದಲಿನ ಪುರಸಭೆ

ಈ ಹಿನ್ನೆಲೆಯಲ್ಲಿ ಭಟ್ಕಳದ ಕನ್ನಡ ಸಂಘಟನೆ ಮತ್ತು ಹಿಂದೂ ಸಂಗಟನೆಗಳು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದು ನಾವು ಭಟ್ಕಳದಲ್ಲಿದ್ದೇವೊ ಅಥವಾ ಪಾಕಿಸ್ತಾನದಲ್ಲಿದ್ದೆವೋ ಮೊದಲು ಪುರಸಭೆಗೆ ಯಾವುದೆ ಉರ್ದು ಬೊರ್ಡ ಹಾಕಿಲ್ಲಾ ಆದರೆ ಈಗ ಹಾಕಲಾಗಿದೆ ಭಟ್ಕಳದಲ್ಲಿ ಅನೇಕ ಭಾಷೇಗಳನ್ನು ಮಾತನಾಡುವ ಜನರಿದ್ದಾರೆ ಎಲ್ಲಾ ಭಾಷೇಗಳ ಬೋರ್ಡನ್ನು ಪುರಸಭೆಗೆ ಹಾಕಲು ಸಾಧ್ಯವೇ ಇದು ಒಂದು ಕೋಮಿನ ಓಲೈಕೆಯಾಗಿದೆ ಈ ಬಗ್ಗೆ ಸ್ಥಳಿಯಾಡಳಿತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನಾವೆ ಮುಂದೆ ನಿಂತು ಉರ್ದು ಬೋರ್ಡನ್ನು ತೆರವು ಗೊಳಿಸುತ್ತೆವೆ ಎಂದು ಕನ್ನಡ ಸಂಘಟನೆ ಹಾಗು ಹಿಂದೂ ಸಂಘಟನೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದೆ

ಎಲ್ಲರ ವಿರೋದದ ನಡುವೆ ಉರ್ದು ಬೋರ್ಡ ಹಾಕುವಾಗ ಉದ್ರಿಕ್ತವಾತಾವರಣ ಏರ್ಪಟ್ಟಿದ್ದು ಕನ್ನಡ ಪರ ಸಂಘಟನೆ ,ಹಿಂದೂ ಸಂಘಟನೆ ಹಾಗು ಮುಸಿಂ ಯುವಕರ ಮಧ್ಯ ಮಾತಿನ ಚಕಮಕಿ ನಡೆದಿದ್ದು ಪೋಲಿಸರು ಮಧ್ಯ ಪ್ರವೇಶಿಸಿ ಉದ್ರಿಕ್ತ ವಾತಾವರಣವನ್ನು ಶಮನ ಮಾಡುವ ಪ್ರಯತ್ನ ಪಟ್ಟಿದ್ದಾರೆ ಈ ಉರ್ದು ಬೋರ್ಡ ಹಾಕಿರುವ ಕಾರಣ ಭಟ್ಕಳ ಬುದಿ ಮುಚ್ಚಿರುವ ಕೆಂಡದಂತಿದ್ದು ಪುರಸಭಾ ಸುತ್ತ ಕನ್ನಡ ಸಂಘಟನೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸೆರಿದ್ದು ಉರ್ದು ಬೋರ್ಡ ತೆಗೆಸುವಂತೆ ಕನ್ನಡ ಸಂಘಟನೆ ಹಿಂದೂ ಸಂಘಟನೆಗಳು ಡಿ ವೈ ಎಸ್‌ ಪಿ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ ಪುರಸಭೆಯ ಮೇಲೆ ಪೋಲಿಸರು ಕಣ್ಗಾವಲು ಇಟ್ಟಿದ್ದಾರೆ ಒಟ್ಟಾರೆ ಭಟ್ಕಳದಲ್ಲಿ ಪುರಸಭೆ ಮತ್ತೋಂದು ವಿವಾದವನ್ನು ಹುಟ್ಟುಹಾಕಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ

WhatsApp
Facebook
Telegram
error: Content is protected !!
Scroll to Top