ಭಟ್ಕಳದಲ್ಲಿ ಕೆಂದ್ರದ ಅಗ್ನಿಪಥ ಯೋಜನೆಯ ವಿರುದ್ದ ದರಣಿ ಸತ್ಯಾಗ್ರಹ

ದೇಶದ ಯುವಕರನ್ನು ಬೀದಿಗೆ ತರುವ ಕೆಲಸವನ್ನು ಕೆಂದ್ರ ಸರಕಾರ ಜಾರಿಗೆ ತರುತ್ತಿದೆ : ಐವನ್ ಡಿಸೋಜಾ

ಭಟ್ಕಳ: ಕೆಂದ್ರ ಸರಕಾರ ಸೈನ್ಯದಲ್ಲಿ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ಯುವಕರ ಬದುಕನ್ನು ಬೀದಿಗೆ ತಂದು ನಿಲ್ಲಿಸುತ್ತದೆ ಇದು ದೇಶದ ಅಭಿವೃದ್ದಿಗೆ ಮಾರಕವಾದ ಯೋಜನೆಯಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷರಾದ ಐವನ್ ಡಿಸೋಜಾ ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಂದ್ರ ಸರಕಾರ ಯಾವಾಗಲು ದೇಶಕ್ಕೆ ಮಾರಕವಾದ ಯೋಜನೆಯನ್ನೆ ಜಾರಿಗೆ ತರುತ್ತದೆ ಅದು ತನ್ನ ರೈತ ಕಾನೂನಾಗಿರಬಹುದು ಸಿ ಐ ಎ ಈಗ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯಾಗಿರ ಬಹುದು ಹೀಗೆ ಈ ಕೆಂದ್ರ ಸರಕಾರ ಜನ ವಿರೋದಿ ಯೋಜನೆಗಳನ್ನೆ ಜಾರಿಗೆ ತರುತ್ತದೆ . ಈ ಅಗ್ನಿಪಥ ಯೋಜನೆಯ ಕಾರಣ ದೇಶ ಹೊತ್ತಿ ಉರಿಯುತ್ತಿದೆ ಇದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಈ ಅಗ್ನಿಪಥ ಯೋಜನೆ ಜಾರಿಗೆ ಬಂದರೆ ದೇಶದ ಯುವಕರ ಬದುಕು ಬೀದಿಗೆ ಬರುತ್ತದೆ ಒಂದು ವೇಳೆ ಕೆಂದ್ರ ಸರಕಾರ ಈ ಯೋಜನೆ ಜಾರಿಗೆ ತಂದರೆ ಕಾಗ್ರೇಸ್ ಉಗ್ರ ಹೋರಾಟವನ್ನು ಕೈಗೊಳ್ಳುತ್ತದೆ ಕೆಂದ್ರ ಈ ಕೂಡಲೆ ಅಗ್ನಿಪಥ ಯೋಜನೆಯನ್ನು ಕೈ ಬಿಡಬೇಕು ಎಂದು ಹೇಳಿದರು.

ಈ ಸಂದರ್ಬದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಮಾಜಿ ಶಾಸಕ ಜೇಡಿ ನಾಯ್ಕ ಕಾಂಗ್ರೇಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಬೀಮಣ್ಣ ನಾಯ್ಕ , ಆರ್ ಎನ್ ನಾಯ್ಕ , ಜಿಲ್ಲಾ ಪಂಚಾತ್ ಅಧ್ಯಕ್ಷರಾದ ಜಯಶ್ರೀ ಮೊಗೇರ್, ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಷ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಅಲ್ಪ ಸಂಖ್ಯಾ ಘಟಕದ ಮಾಜಿದ್ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಮಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top