ಉತ್ತರ ಕನ್ನಡ ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನಿಡುವಿಕೆಯ ಬಗ್ಗೆ ಸಮೀತಿಯನ್ನು ರಚಿಸಲು ಮುಂದಾದ ಸರಕಾರ

ಪ್ರತಿಭಟನೆ ಕೈ ಬಿಟ್ಟು ಮೂರು ತಿಂಗಳು ಕಾದು ನೋಡುವಂತೆ ಕೇಳಿಕೊಂಡ ಕರ್ನಾಟಕ ಸರಕಾರ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಗೇರ್‌ ಸಮಾಜವು ತಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು ಈ ಪ್ರತಿಭಟನೆಯ ಬೀಸಿ ಸರಕಾರಕ್ಕೆ ತಟ್ಟಿರುವ ಹಿನ್ನೆಲೆಯಲ್ಲಿ ಸರಕಾರ ಈ ಬಗ್ಗೆ ಒಂದು ಸಮೀತಿಯನ್ನು ರಚಿಸಲು ಮುಂದಾಗಿದ್ದು ಸಮಿತಿಯ ವರದಿ ಬರುವವರೆಗೆ ಅಂದರೆ ಮೂರು ತಿಂಗಳವರೆಗೆ ಮೊಗೇರ್‌ ಸಮಾಜ ಪ್ರತಿಭಟನೆಯನ್ನು ಕೈ ಬಿಟ್ಟು ಸಹಕರಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್‌ ಅವರ ಮೂಲಕ ಕೇಳಿಕೊಂಡಿದೆ .

ಮೊಗೇರ ಸಮಾಜ ಸುಮಾರು ತೊಂಬತ್ತು ದಿನಗಳಿಂದ ತಮಗೆ ಮೊದಲು ನೀಡುತ್ತಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಏಕಾಏಕಿ ನಿಲ್ಲಿಸಲಾಗಿದ್ದು ಇದು ನಮ್ಮ ಸಮಾಜಕ್ಕೆ ಸರಕಾರ ಬಗೆದ ದ್ರೋಹವಾಗಿದೆ ನಮಗೆ ಕೂಡಲೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಪ್ರತಿಭಟನೆಯ ಹಾದಿಯನ್ನು ಹಿಡಿದಿತ್ತು ಈ ಸಮಾಜ ಎಷ್ಟೆ ಹೋರಾಟ ಮಾಡಿದರು ಅಧಿಕಾರಿಗಳಾಗಲಿ ಜನ ಪ್ರತಿನಿದಿಗಳಾಗಲಿ ಸ್ಪಂದಿಸುವ ಯಾವುದೆ ಆಸಕ್ತಿಯನ್ನು ವಹಿಸಲಿಲ್ಲ ಬದಲಾಗಿ ಸರಕಾರದ ಜನ ಪ್ರತಿನಿದಿಗಳು ಈ ಸಮಾಜದ ಪ್ರತಿಭಟನೆಯನ್ನು ತಮ್ಮ ರಾಜಕಿಯದಾಳವಾಗಿಸಿಕೊಳ್ಳುವ ಎಲ್ಲಾ ಪ್ರಯತ್ನವನ್ನು ನಡೆಸಿದರು. ಇದರಿಂದ ರೋಸಿಹೋದ ಮೊಗೇರ್‌ ಸಮಾಜವು ತನ್ನಸಮಾಜದ ವಿಧ್ಯಾರ್ಥಿ ವಿಧ್ಯಾರ್ಥಿಗಳನ್ನು ಪ್ರತಿಭಟನೆಗೆ ಇಳಿಸಿ ಧಾರಾಕಾರಾ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಿತು ವಿಧ್ಯಾರ್ಥಿಗಳು ಒಂದು ದಿನ ಶಾಲಾ ಕಾಲೇಜನ್ನು ಸಂಪೂರ್ಣ ಬಹಿಷ್ಕರಿಸಿತು ಇದರಿಂದ ಇಷ್ಟು ದಿನ ಕರ್ನಾಟಕ ಸರಕಾರ ತಾನು ಗಾಡ ನಿದ್ದೆಯಲ್ಲಿಂದ ಎಚ್ಚೆತ್ತುಕೊಂಡಂತೆ ಗುರುವಾರ ಜಿಲ್ಲಾಧಿಕಾರಿ ಮುಲೈ ಮುಗಿಲ್ಲನ್‌ ಹಾಗು ಉತ್ತರ ಕನ್ನಡ ಜಿಲ್ಲಾ ಪೋಲಿಸ್‌ ವರಿಷ್ಟಾಧಿಕಾರಿ ಸುಮನ್‌ ಡಿ ಪೇನ್ನೆಕರ್‌ ಅವರ ನಾಯಕತ್ವದಲ್ಲಿ ಭಟ್ಕಳದ ತಾಲೂಕ ಸೌದದಲ್ಲಿ ಸಭೇಯನ್ನು ಕರೆಯಿಸಿ ಅವರ ಮೂಲಕ ಮೊಗೇರ್ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಒಂದು ಸಮೀತಿ ನಿರ್ಮಾಣ ಮಾಡಲಾಗುತ್ತದೆ ಈ ಸಮೀತಿಯು ಸಮಗ್ರವಾಗಿ ಪರಿಶೀಲಿಸಿ ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸುತ್ತದೆ ಅಲ್ಲಿಯ ವರೆಗೆ ಪ್ರತಿಭಟನಾ ನಿರತ ಮೊಗೇರ್‌ ಸಮಾಜ ತನ್ನ ಪ್ರತಿಭಟನೆಯನ್ನು ಕೈಬಿಟ್ಟು ಸಹಕರಿಸಬೇಕು ಎಂದು ಹೇಳಿಸುತ್ತದೆ

ಈ ಬಗ್ಗೆ ಮೊಗೇರ್‌ ಸಮಾಜವು ಪ್ರತಿಕ್ರಿಯಿಸಿ ಸರಕಾರಕ್ಕೆ ಇದನ್ನು ಹೇಳಲು 90 ದಿನಗಳೆ ಬೇಕಾಯಿತೇ ಮೂರು ತಿಂಗಳು ನಮಗೆ ಕಾಯಲು ಸಾದ್ಯವಿಲ್ಲ ನಾವು ನಮ್ಮ ಪ್ರತಿಭಟನೆಯನ್ನು ಕೈ ಬೀಡುವುದಿಲ್ಲಾ ನಾವು ಜೈಲ್‌ ಬರೋ ಚಳುವಳಿಯನ್ನು ನಡೆಸುತ್ತೆವೆ ನಮ್ಮನ್ನು ಬಂದಿಸಿ ನಿಮ್ಮ ಸಮಿತಿಯಲ್ಲಿ ಒಂದು ವೇಳೆ ನಮಗೆ ಜಾತಿ ಪ್ರಮಾಣ ಪತ್ರ ನೀಡ ಬೇಕು ಎಂಬ ನಿರ್ಣಯ ಕೈಗೊಂಡರೆ ನಮ್ಮನ್ನು ಬಿಡುಗಡೆ ಮಾಡಿ ಇಲ್ಲವಾದರೆ ನಮ್ಮನ್ನು ಜೈಲಿನಲ್ಲೆ ಮುಗಿಸಿ ಬಿಡಿ ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿತು

ಒಟ್ಟಾರೆ ಸರಕಾರದ ಸಮೀತಿ ರಚಿಸುವ ನಿರ್ದಾರಕ್ಕೆ ಮೊಗೇರ್‌ ಸಮಾಜ ಎಷ್ಟು ಸ್ಪಂದಿಸುತ್ತದೆ ಎಂಬುವುದು ಕಾದು ನೋಡ ಬೇಕಾಗಿದೆ

WhatsApp
Facebook
Telegram
error: Content is protected !!
Scroll to Top