ಭಟ್ಕಳ ಪುರಸಭೆಯ ಅವ್ಯವಸ್ಥೆಯ ಒಳ ಚರಂಡಿ ವ್ಯವಸ್ಥೆ : ಅಕ್ಕಪಕ್ಕದ ಮನೆ ಹೋಟೆಲ್‌ ಬಾವಿಗಳಿಗೆ ನುಗ್ಗಿದ ಚರಂಡಿ ನೀರು

ಡ್ರ್ಯಾನೇಜ್‌ ಮಿಶ್ರೀತ ಬಾವಿ ನೀರನ್ನು ಕುಡಿದ ಸಾರ್ವಜನಿಕರು ಆಸ್ಪತ್ರೆಗೆ ದಾಖಲು

ಭಟ್ಕಳ: ತಾಲೂಕಿನ ಪುರಸಭಾ ವ್ಯಾಪ್ತಿಯ ಒಳ ಚರಂಡಿಗಳು ವರ್ಷಗಳಿಂದ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದ್ದು ಈ ಚರಂಡಿಗಳ ನೀರು ಸಾರ್ವಜನಿಕರ ಮನೆ ಬಾವಿ ಹಾಗು ಖಾಸಗಿ ಹೋಟೆಲ್‌ ಬಾವಿಗಳಿಗೆ ನುಗ್ಗಿ ಸಾರ್ವಜನಿಕರು ಈ ಕಲುಷೀತ ನೀರನ್ನು ಸೇವಿಸಿ ಅಸ್ವಸ್ತರಾಗಿ ಆಸ್ಪತ್ರೆಗೆ ದಾಖಲಾಗಿರುವುದು ಬೆಳಕಿಗೆ ಬಂದಿದೆ .

ನಮ್ಮ ಭಟ್ಕಳದ ಪರಿಸ್ಥಿತಿ ಯಜಮಾನನಿಲ್ಲದ ಮನೆಯಂತಾಗಿದೆ ಪುರಸಭೆ ಯಾವಾಗಲು ಒಂದಿಲ್ಲೋಂದು ಸಮಸ್ಯೆಯನ್ನು ತಾನಾಗಿಗೆ ಸ್ರಷ್ಟೀ ಮಾಡಿಕೊಂಡು ಆ ಸಮಸ್ಯೆಯಲ್ಲಿ ಯಾವಾಗಲು ನಲುಗುತ್ತಲೆ ಇರುತ್ತದೆ ದೂರದೂರದ ವರೆಗೂ ಅಭಿವೃದ್ದಿಯ ಕುರುಹುಗಳು ಕಾಣಿಸುತ್ತಿಲ್ಲಾ ಎನ್ನುವುದು ಸಾರ್ವಜನಿಕರ ಆಕ್ರೋಶವಾಗಿದೆ ಈಗ ನಮ್ಮ ಇದೆ ಪುರಸಭೆ ಮತ್ತೋಂದು ಸಮಸ್ಯೆಯನ್ನು ತಾನೆ ಹುಟ್ಟುಹಾಕಿದೆ .

ಈ ಪುರಸಬೆಯು ಸಾರ್ವಜನಿಕರಿಗೆ ಯಾವಾಗಲು ಸ್ವಚ್ಚತೆಯ ಪಾಠವನ್ನು ಮಾಡುತ್ತಲೆ ಬರುತ್ತಿದೆ ಆದರೆ ಇದೆ ಪುರಸಭೆ ತನಗೂ ಸ್ವಚ್ಚತೆಗೂ ಸಂಬಂದವೆ ಇಲ್ಲವೆನೋ ಎಂಬಂತೆ ವರ್ತಿಸುತ್ತದೆ ಇದಕ್ಕೆ ಸ್ಪಷ್ಟ ಉದಾಹರಣೆ ಪುರಸಭಾ ವ್ಯಾಪ್ತಿಯಲ್ಲಿ ಬರುವ ಒಳ ಚರಂಡಿಯನ್ನು ವರ್ಷಗಳಿಂದ ನಿರ್ವಹಣೆ ಮಾಡದೆ ಈ ಒಳ ಚರಂಡಿ ಸಂಪೂರ್ಣ ಕೆಟ್ಟುಹೋಗಿ ಚರಂಡಿಯ ತ್ಯಾಜ್ಯಗಳು ಅಕ್ಕ ಪಕ್ಕದ ಮನೆಯ ಬಾವಿ ಹೊಟೆಲ್ಗಳ ಭಾವಿಯನ್ನು ಸೇರಿಕೊಂಡಿದೆ ಇದನ್ನು ತಿಳಿಯದ ಸಾರ್ವಜನಿಕರು ಅದೆ ಭಾವಿಯ ನೀರನ್ನು ಕುಡಿದಿದ್ದಾರೆ ಪರಿಣಾಮವಾಗಿ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಯನ್ನು ಸೇರುವಂತಾಗಿದೆ ಇಂಟಾರೆ ಊರಿಗೆ ಬುದ್ದಿ ಹೇಳುವ ಭಟ್ಕಳ ಪುರಸಭೆ ತಾನು ಮಾಡುತ್ತಿರುವುದಾದರು ಏನು ಎಂಬುದನ್ನು ಅವಲೋಕನೆ ಆಡುತ್ತದೆಯೋ ಅದನ್ನು ಕೂಡಾ ಮಾಡುತ್ತಿಲ್ಲಾ . ಸಾರ್ವಜನಿಕರು ಪುರಸಭೆಗೆ ಬಂದು ಒಳ ಚರಂಡಿ ಅವ್ಯವಸ್ಥೆಯ ಕಾರಣ ತಾವು ಕಕ್ಕುಸಿನ ನೀರನ್ನು ಕುಡಿಯುವಂತಾಗಿದೆ ಸಮಸ್ಯೆ ಬಗೆಹರಿಸಿ ಸ್ವಾಮಿ ಎಂದರೆ ನಮ್ಮ ಪುರಸಭೆ ಎಂಜಿಯರ್‌ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆ ಹರಿಸುವುದನ್ನು ಬಿಟ್ಟು ಶ್ರೀದರ್ ಎಂಬ ಪುರಸಭಾ ಕೆಲಸಗಾರರೊಬ್ಬರ ಕಡೆ ಕೈತೋರಿಸುವ ಮಹಾ ಬೇಜವಬ್ದಾರಿ ತನವನ್ನು ತೋರಿಸುತ್ತಿದೆ ಈ ಪುರಸಭೆ ಭಟ್ಕಳದಲ್ಲಿ ಮಾಡುತ್ತಿರುವುದಾದರು ಏನು ಕೇವಲ ಸಾರ್ವಜನಿಕರ ಟ್ಯಾಕ್ಸ ವಸೂಲಿಗೆ ಮಾತ್ರ ಪುರಸಭೆ ಸಿಮಿತವಾಗಿ ಹೋಯಿತೆ ಪುರಸಭೆಗೆ ಜವಾಬ್ದಾರಿಗಳೆನು ಇಲ್ಲವೆ ಎಂಬ ಆಕ್ರೋಶವನ್ನು ಸಾರ್ವಜನಿಕರು ತೋರಿಸುತ್ತಿದ್ದಾರೆ

ಈ ಬಗ್ಗೆ ಸಾರ್ವಜನಿಕರೊಬ್ಬರು ಮಾತನಾಡಿ ನಮ್ಮ ಪುರಸಭೆ ಒಳ ಚರಂಡಿ ಸಂಪೂರ್ಣ ಕೆಟ್ಟುಹೊಗಿದೆ ಈ ಬಗ್ಗೆ [ಪುರಸಭಾ ಇಂಜಿಯರ್‌ ಅವರಲ್ಲಿ ಹೇಳಿದರೆ ಶ್ರೀದರ್‌ ಅವರಲ್ಲಿ ಹೇಳಿ ಎಲ್ಲಾ ಸರಿ ಮಾಡುತ್ತಾರೆ ಎಂಬ ಬೆಜವಬ್ದಾರಿ ತನದಿಂದ ಮಾತನಾಡುತ್ತಾರೆ ವರ್ಷಗಳಿಂದ ಇದೆ ಪರಿಸ್ಥಿತಿ ನಿಮಾರ್ಣವಾಗಿದೆ ನಮ್ಮ ಬಾವಗಳಿಗೆ ಒಳಚರಂಡಿ ನೀರು ನುಗ್ಗಿ ಆ ನೀರನ್ನು ಕುಡಿದ ಕಾರಣ ನಮ್ಮ ಮನೆ ಸದಸ್ಯರೆಲ್ಲರೂ ಆಸ್ಪತ್ರೆ ಸೇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು

ಒಟ್ಟಾರೆ ಭಟ್ಕಳದಲ್ಲಿ ಪುರಸಭೆ ನಗರ ನೈರ್ಮಲ್ಯವನ್ನು ನೊಡಿಕೊಳ್ಳಲು ಸಂಪೂರ್ಣ ವಿಪಲವಾಗಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲಾ ಭಟ್ಕಳ ಪುರಸಭೆ ಆಡಕ್ಕುಂಟು ಲೆಕ್ಕಕ್ಕಿಲ್ಲಾ ಎಂಬಂತಾಗಿದೆ ಇನ್ನಾದರು ಈ ಬಗ್ಗೆ ಸಂಬಂದಿಸಿದ ಅಧಿಕಾರಿಗಳು ಗಮನಹರಿಸಿಯಾರೆ ಎಂದು ಕಾದು ನೋಡ ಬೇಕಾಗಿದೆ

WhatsApp
Facebook
Telegram
error: Content is protected !!
Scroll to Top