ಉಗ್ರ ಪ್ರತಿಭಟನೆಯತ್ತ ಮುಖ ಮಾಡಿದ ಮೊಗೇರ್ ಸಮಾಜದ ವಿಧ್ಯಾರ್ಥಿಗಳು
ಮಾಜಿ ಶಾಸಕ ಮಂಕಾಳ ವೈದ್ಯರೊಂದಿಗೆ ತಾಲೂಕ ತಹಶಿಲ್ದಾರ್ ಅನುಚಿತ ಮಾತುಕತೆ : ಕೆಂಡಾಮಂಡಲವಾದ ಮೊಗೇರ ಸಮಾಜ

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಮೊಗೇರ್ ಸಮಾಜದ ವತಿಯಿಂದ ತಮಗೆ ಪರಿಶೀಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ 90 ದಿನಗಳಿಂದ ಪ್ರತಿಭಟನೆ ನಡೆಸುತ್ತಲೆ ಬರುತ್ತಿದೆ ಆದರೆ ಸರಕಾರವಾಗಲಿ ಜನ ಪ್ರತಿನಿದಿಗಳಾಗಲಿ ಈ ಸಮಾಜದ ಪ್ರತಿಭಟನೆಗೆ ಸರಿಯಾದ ಸ್ಪಂದನೆ ನೀಡದ ಕಾರಣ ಮಂಗಳವಾರವಾದ ಇಂದು ಮೊಗೇರ್ ಸಮಾಜವು ತನ್ನ ಸಮಾಜದ ವಿಧ್ಯಾರ್ಥಿಗಳೊಂದಿಗೆ ಪ್ರತಿಭಟನೆ ಇಳಿದಿದೆ.
ಸುಮಾರು ಮೂರು ತಿಂಗಳುಗಳಿಂದ ಮೊಗೇರ ಸಮಾಜವು ತಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ತಾಲೂಕಾಡಳಿತ ಸೌದದ ಮುಂದೆ ಪ್ರತಿಭಟನೆ ನಡೆಸುತ್ತಲೆ ಬಂದಿದ್ದು ಸರಕಾರದ ಜನ ಪ್ರತಿನಿದಿಗಳು ಈ ಸಮಾಜದ ಮೂಗಿಗೆ ತುಪ್ಪ ಒರೆಸಿ ಬರಿ ಆಶ್ವಾಸನೆಯನ್ನು ಕೊಡುತ್ತಾ ಬರುತ್ತಿದ್ದಾರೆಯೆ ಹೊರತು ಈ ಸಮಾಜಕ್ಕೆ ಯಾವುದೆ ಸ್ಪಷ್ಟವಾದ ಮಾತನ್ನು ನಿರ್ದೇಶನವನ್ನು ಕೊಡುತ್ತಿಲ್ಲಾ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಲೆ ಬಂದಿರುತ್ತಾರೆ ಈ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಲಾಗುತ್ತದೆಯೋ ಇಲ್ಲವೊ ಎಂಬ ಸ್ಪಷ್ಟತೆಯನ್ನು ಯಾರು ನೀಡುತ್ತಿಲ್ಲಾ ಈ ಜನ ಪ್ರತಿನಿದಿಗಳು ಪ್ರತಿಭಟನಾ ನಿರತರ ಸ್ಥಳಕ್ಕೆ ಬೇಟಿ ಕೋಡುವುದೆ ರಾಜಕಿಯ ಲೆಕ್ಕಾಚಾರ ತಮಗೆ ಮುಂದಿನ ಇಲೆಕ್ಷನ್ ಅಲ್ಲಿ ಎಷ್ಟು ಮತಗಳನ್ನುಗಿಟ್ಟಿಸಿಕೊಳ್ಳ ಬಹುದು ಎಂಬ ಲೆಕ್ಕಾಚಾರ ಹಾಕಿಯೆ ಬೇಟಿ ಕೊಡುತ್ತಾರೆ ಹೊದ ವಿಧಾನ ಸೌದ ಚುನಾವಣೆಯಲ್ಲಿ ಮೊಗೇರ್ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಿಸುವ ಬರವಸೆಯನ್ನು ನೀಡಿ ಚುನಾವಣೆಗೆಯನ್ನು ಗೇಲುವನ್ನು ಕಂಡುಕೊಳ್ಳಲಾಗಿದೆ ವುನಾವಣೆ ಮುಗಿದು ಇನ್ನೊಂದು ವಿಧಾನ ಸೌದ ಚುನಾವಣೆ ಹತ್ತಿರ ಬರುತ್ತಿದ್ದರು ನಮ್ಮ ಸಮಾಜಕ್ಕೆ ಇನ್ನು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲಾ ಆದರೆ ಇದೆ ಜನ ಪ್ರತಿನಿದಿಗಳು ಮುಂದಿನ ಚುನಾವಣೆಗಾಗಿ ನಮ್ಮ ಜಾತಿ ಪ್ರಮಾಣ ಪತ್ರವನ್ನು ದಾಳವಾಗಿ ಉಪಯೋಗಿಸಿಕೊಳ್ಳುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ ಈ ಎಲ್ಲಾ ಕಾರಣಗಳಿಂದ ಬೆಸತ್ತ ಮೊಗೇರ್ ಸಮಾಜವು ತಮ್ಮ ಸಮಾಜದ ವಿಧ್ಯಾರ್ಥಿಗಳೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿತು
ತಾಲೂಕ ಶಂಶುದ್ದೀನ್ ಸರ್ಕಲ್ ಇಂದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತೇರಳು ಪ್ರತಿಣಟನೆ ನಡೆಸಿ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿತು ನಂತರ ಅಲ್ಲಿದ ಮೇರವಳಿಗೆಯ ಮೂಲಕ ತಾಲೂಕ ಸಹಾಯಕ ಆಯುಕ್ತರ ಕಛೇರಿಯನ್ನು ತಲುಪಿ ಗೋ಼ಷಣೆಗಳನ್ನು ಕೂಗಿತು ಹಾಗು ಸ್ತಳಕ್ಕೆ ಜಿಲ್ಲಾಧಿಕಾರಿಗಳು ಬೇಟಿ ನೀಡ ಬೇಕು ಎಂಬ ಪಟ್ಟನ್ನು ಹಿಡಿಯಿತು ಈ ಸಂದರ್ಬದಲ್ಲಿ ತಾಲೂಕ ತಹಶಿಲ್ದಾರರು ಮಾಜಿ ಶಾಸಕ ಮಂಕಾಳ ವೈಧ್ಯರೊಂದಿಗೆ ಅನುಚಿತವಾಗಿ ಮಾತನಾಡಿ ಮೊಗೇರ್ ಸಮಾಜದ ಮತ್ತು ಮಾಜಿ ಶಾಸಕ ಮಂಕಾಳ ವೈದ್ಯರ ಕೆಂಗಣ್ಣಿಗೆ ಗುರಿಯಾದರು
ನಂತರ ಕರ್ತವ್ಯದ ನಿಮಿತ್ತ ತೆರಳಿದ್ದ ತಾಲೂಕ ಸಹಾಯಕ ಆಯುಕ್ತರು ಸ್ಥಳಕ್ಕೆ ಬೇಟಿ ನೀಡಿ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೊಗೇರ್ ಸಮಾಜದ ಮನವಿಯನ್ನು ಸ್ವಿಕರಿಸಿದರು .
ಈ ಸಂದರ್ಬದಲ್ಲಿ ಪ್ರತಿಭಟನಾ ನಿರತ ವಿಧ್ಯಾರ್ಥಿಯೋರ್ವ ಮಾತನಾಡಿ ನಮ್ಮ ಸಮಾಜದ ಕಷ್ಟವನ್ನು ಯಾರು ಆಲಿಸುವವರೆ ಇಲ್ಲವಾಗಿದ್ದಾರೆ 90 ದಿನಗಳಿಂದ ನಾವು ಪ್ರತಿಭಟನೆಯನ್ನು ನಡೆಸಿಕೊಂಡು ಬರುತ್ತಿದ್ದೆವೆ ಆದರೆ ಯಾರು ಸ್ಪಂದಿಸುತ್ತಿಲ್ಲಾ ಕೆವಲ ಆಶ್ವಾಸನೆಯನ್ನು ನೀಡುತ್ತಲೆ ಬರುತ್ತಿದ್ದಾರೆ ಕಾರಣ ಇಂಖದು ವಿಧ್ಯಾರ್ಥಿಗಳಾದ ನಾವು ಪ್ರತಿಭಟನೆಗೆ ಮುಂದಾಗಿದ್ದೆವೆ ನಮಗೆ ಇನ್ನು ಮೂರು ದಿನಗಳ ಒಳಗಾಗಿ ಜಾತಿ ಪ್ರಮಾಣ ಪತ್ರ ನೀಡದಿದ್ದಲ್ಲಿ ನಾವು ಉಗ್ರ ಹೋರಾಟಕ್ಕೆ ಮುಂದಾಗುತ್ತೆವೆ ಎಂದು ಹೇಳಿದರು
ಮೊಗೇರ್ ಸಮಾಜದ ಪ್ರತಿಭಟನೆಯ ಸಂದರ್ಬದಲ್ಲಿ ಡಿ ವೈ ಎಸ್ ಪಿ ಬೆಳ್ಳಿಯಪ್ಪ ಅವರ ನಾಯಕತ್ವದಲ್ಲಿ ಬೀಗಿ ಪೋಲಿಸ್ ಬಂದೋಬಸ್ತ ಒದಗಿಸಲಾಗಿತ್ತು
ಈ ಸಂದರ್ಬದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ , ಮಾಜಿ ಜಿಲ್ಮೊಲಾ ಪಂಚಾಯತ್ಗೇ ಅಧ್ಯಕ್ಷರಾದ ಜಯಶ್ರೀ ಮೊಗೇರ್ ಮೊಗೇರ್ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ಹೊರಾಟ ಸಮೀತಿ ಅಧ್ಯಕ್ಷ ಎಪ್ ಕೆ ಮೋಗೇರ್, ಭಾಸ್ಕರ್ ಮೊಗೇರ್ , , ವೆಂಕಟರಮಣ ಮೊಗೇರ್ , ಮುಂತಾದವರು ಹಾಜರಿದ್ದರು