Tuesday, June 28, 2022
Homeಭಟ್ಕಳಪ್ರವಾದಿ ಮೊಹಮ್ಮದರ ನಿಂದನೆಯಾಗಿದೆ ಎಂದು ಆರೋಪಿಸಿ ಮುಸಿಂ ಸಂಘಟನೆಯ ವತಿಯಿಂದ ಮನವಿ

ಪ್ರವಾದಿ ಮೊಹಮ್ಮದರ ನಿಂದನೆಯಾಗಿದೆ ಎಂದು ಆರೋಪಿಸಿ ಮುಸಿಂ ಸಂಘಟನೆಯ ವತಿಯಿಂದ ಮನವಿ

ಪ್ರವಾದಿ ನಿಂದಕ ನೂಪುರ್ ಮತ್ತು ಜಿಂದಾಲ್‌ರನ್ನು ಬಂಧಿಸದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ

• ಭಟ್ಕಳದಲ್ಲಿ ತಂಝೀಮ್ ನೇತೃತ್ವದಲ್ಲಿ ವಿವಿಧಧಾರ್ಮಿಕ ವಿದ್ವಾಂಸರು, ಸಂಘಸAಸ್ಥೆಗಳ ಮುಖಂಡರಿAದ ರಾಷ್ಟçಪತಿಗಳಿಗೆ ಮನವಿ
ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಅವಹೇಳನ ಮಾಡಿರುವ ನೂಪುರ್ ಶರ್ಮಾ ಮತ್ತು ನವೀನ್‌ಜಿಂದಾಲ್‌ರನ್ನುಕೂಡಲೇ ಬಂಧಿಸಬೇಕೆAದು ಭಟ್ಕಳದ ನೂರು ವರ್ಷಇತಿಹಾಸವಿರುವ ಮಜ್ಲಿಸೆ-ಇಸ್ಲಾಹ್-ವ-ತಂಝಿಮ್ ಸರ್ಕಾರವನ್ನು ಆಗ್ರಹಿಸಿದ್ದು, ಬೇಡಿಕೆಈಡೇರದಿದ್ದರೆಜಿಲ್ಲಾಮಟ್ಟದಲ್ಲಿಉಗ್ರಪ್ರತಿಭಟನೆ ನಡೆಸಲಾಗುವುದುಎಂದು ಎಚ್ಚರಿಸಿದೆ.


ಶನಿವಾರ ಭಟ್ಕಳ ಉಪವಿಭಾಗದ ಸಹಾಯಕಆಯುಕ್ತರ ಮೂಲಕ ಭಾರತದ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದ ತಂಝೀಮ್ ಮುಖಂಡಡಾ.ಹನೀಫ್ ಶಬಾಬ್, ಪ್ರವಾದಿ ನಿಂದಕರನ್ನು ಮುಸ್ಲಿಮ್ ಸಮುದಯವಷ್ಟೇಅಲ್ಲದೇ ಈ ದೇಶವು ಸಹ ಎಂದಿಗೂ ಕ್ಷಮಿಸದು,ಇಂದು ಭಾರತದಾದ್ಯಂತ ನಡೆಯುತ್ತಿರುವ ಹಿಂಸಾಚಾರಕ್ಕೆ ನೂಪುರ್ ಶರ್ಮಾ ಮತ್ತು ನವೀನ್‌ಜುಂದಾಲ್‌ಕಾರಣನಾಗಿದ್ದುಇವರ ವಿರುದ್ಧಕಠಿಣಕ್ರಮಕೈಗೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದಕೂಡಲೆಇಬ್ಬರ ವಿರುದ್ಧಎಫ್‌ಐಆರ್ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ದೇಶದಜನಸಾಮಾನ್ಯರ ಭಾವನೆಗಳನ್ನು ಕೆರಳಿಸಿದ ನೂಪುರ್ ಶರ್ಮಾ ಮತ್ತು ನವೀನ್‌ಜಿಂದಾಲ್ ಹಾಗೂ ಇವರ ಹೇಳಿಕೆಗಳನ್ನು ಪ್ರಕಟಿಸಿದ ಟೈಮ್ಸ್ ನೌ ಟಿ.ವಿ.ಚಾನೆಲ್ ವಿರುದ್ಧ ಕ್ರಮಕೈಗೊಳ್ಳದ ಸರ್ಕಾರ, ಇವರ ವಿರುದ್ಧ ಪ್ರತಿಭಟನೆಗಿಳಿದ ಅಮಾಯಕ ನಾಗರೀಕರ ವಿರುದ್ಧ ಸರ್ಕಾರ ಮತ್ತು ಅಧಿಕಾರಿಗಳು ಅಸಮಂಜಸದAಡನಾತ್ಮಕ ಕ್ರಮಗಳನ್ನು ಅನುಸರಿಸುತ್ತಿರುವುದುಖೇದಕರಎಂದು ಮನವಿ ಪತ್ರದಲ್ಲಿಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ, ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡ ಮುಝಮ್ಮಿಲ್‌ ಖಝಿಯಾ, ಕಾನೂನು ಸುವ್ಯವಸ್ಥೆಕಾಪಾಡಲು ಹಾಗೂ ಆಡಳಿತಕ್ಕೆ ಸಂಪೂರ್ಣ ಬೆಂಬಲ ನೀಡಲು ನಾವು ಸಾರ್ವಜನಿಕ ಪ್ರತಿಭಟನೆ ನಡೆಸಿಲ್ಲ, ನಮ್ಮ ಸಹನೆಯನ್ನುಯಾರೂಪರೀಕ್ಷಿಸಬೇಡಿ, ಪ್ರವಾದಿ ವಿರುದ್ಧನೂಪುರ್ ಶರ್ಮಾ ಮತ್ತು ನವೀನ್‌ಜಿಂದಾಲ್ ಮಾತನಾಡಿರುವರೀತಿ ಭಾರತ ಮಾತ್ರವಲ್ಲದೆಇಡೀಜಾಗತಿಕ ಮುಸ್ಲಿಮರ ಭಾವನೆಯನ್ನು ಕೆರಳಿಸಿ ನೋವುಂಟು ಮಾಡಿದೆಎಂದುಅವರು ಹೇಳಿದರು.


ಈ ಸಂದರ್ಭದಲ್ಲಿ ತಂಝೀಮ್‌ ಉಪಾಧ್ಯಕ್ಷ ಮೊಹ್ತೆಶಮ್ ಮುಹಮ್ಮದ್‌ಜಾಫರ್, ಜಮಾಅತುಲ್‌ಮುಸ್ಲಿಮೀನ್ ಖಾಝಿ ಮೌಲಾನಾಅಬ್ದುಲ್‌ರಬ್‌ಖತೀಬ್ ನದ್ವಿ, ಮರ್ಖಝಿಖಲೀಫಜಮಾಅತುಲ್‌ಮುಸ್ಲಿಮೀನ್ ಖಾಜಿ ಮೌಲಾನಾಕ್ವಾಜಾ ಮೊಯಿನುದ್ದೀನ್‌ಅಕ್ರಮಿ ಮದನಿ, ಸಂಘಟನೆಯ ಕಾರ್ಯದರ್ಶಿ ಜಿಲಾನಿ ಶಾಬಂದ್ರಿ, ಭಟ್ಕಳ ಮುಸ್ಲಿಂ ಯುತ್ ಫೆಡರೇಶನ್‌ಅಧ್ಯಕ್ಷಅಝೀಝರ‍್ರಹ್ಮಾನ್ ನದ್ವಿರುಕ್ನುದ್ದೀನ್, ಪ್ರಧಾನ ಕಾರ್ಯದರ್ಶಿ ಉಮೈರ್‌ರುಕ್ನುದ್ದೀನ್, ಎಸ್‌ಡಿಪಿಐಜಿಲ್ಲಾಧ್ಯಕ್ಷ ಮುಹಮ್ಮದ್‌ತೌಫಿಕ ಬ್ಯಾರಿ, ವೆಲ್ಫೇರ್ ಪಾರ್ಟಿಯಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಖ್, ಅಂಜುಮನ್‌ಹಾಮಿಯೆಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಇಸ್ಮಾಯಿಲ್, ಮಾಜಿ ಕಾರ್ಯದರ್ಶಿ ಭಟ್ಕಳ ಮುಸ್ಲಿಂ ಗಲ್ಫ್ಕೌನ್ಸಿಲ್‌ನಪ್ರಧಾನ ಕಾರ್ಯದರ್ಶಿಎಸ್‌ಜೆ ಸೈಯದ್ ಹಾಶಿಮ್, ಯುತ್‌ಫೆಡರೇಶನ್ ಮಾಜಿಅಧ್ಯಕ್ಷಇಮ್ತಿಯಾಝ್‌ಉದ್ಯಾವರ, ಅಂಜುಮಾನ್‌ಉಪಾಧ್ಯಕ್ಷ ಮುಹಮ್ಮದ್ ಸಾದಿಕ್‌ಪಿಲ್ಲೂರ್, ಜಾಮಿಯಾಇಸ್ಲಾಮಿಯಾ ಶಿಕ್ಷಣ ಸಂಸ್ಥೆಯಅಧ್ಯಕ್ಷ ಮೌಲಾನಅಬ್ದುಲ್ ಅಲೀಂ ಖಾಸ್ಮಿ, ಪ್ರಾಂಶುಪಾಲ ಮೌಲಾನಾ ಮಕ್ಬೂಲ್‌ಕೊಬಟ್ಟೆ ನದ್ವಿ, ಜಮಾತೆ ಮುಸ್ಲಿಮೀನ್ ಭಟ್ಕಳ ಕಾರ್ಯದರ್ಶಿ ಮೌಲಾನತಲ್ಹಾರುಕ್ನುದಿನ್ ನದ್ವಿ, ಅಲಿಮಿಯಾಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್‌ಇಲ್ಯಾಸ್‌ನದ್ವಿ, ಮೌಲಾನಾಅನ್ಸಾರ್‌ಖತೀಬ್ ಮದನಿ, ಮೌಲ್ವಿಅಂಜುಮ್ ಗಂಗವಾಲಿ ಮೌಲಾನಾಒಸಾಮಾ ನದ್ವಿ, ಮೌಲಾನಾಅಮೀನ್‌ರುಕ್‌ನುದ್ದೀನ್ ನದ್ವಿ, ಪುರಸಭೆ ಸದಸ್ಯರು, ಪಂಚಾಯಿತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!