Tuesday, June 28, 2022
Homeಭಟ್ಕಳಹೆಬ್ಳೆ ಗ್ರಾಮ‌ ಪಂಚಾಯತ‌ ಅಲ್ಲಿ ಭ್ರಷ್ಟಾಚಾರ ನಡೆದಿರುವುದು ತನಿಖಾ ವರದಿಯಲ್ಲಿ ಸಾಬಿತು

ಹೆಬ್ಳೆ ಗ್ರಾಮ‌ ಪಂಚಾಯತ‌ ಅಲ್ಲಿ ಭ್ರಷ್ಟಾಚಾರ ನಡೆದಿರುವುದು ತನಿಖಾ ವರದಿಯಲ್ಲಿ ಸಾಬಿತು

ಅಧಿಕಾರಿಗಳ ತಲೆ ದಂಡಕ್ಕೆ ದಿನಗಣನೆ : ಕ್ರಮ ಕೈಗೊಳ್ಳದ ಹೊರತು ನಾವು ವಿಶ್ರಮಿಸಲಾರೆವು: ತಾಲೂಕ ಆರ್ ಟಿ ಐ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ ಹೆಬ್ಳೆ

ಭಟ್ಕಳ ತಾಲೂಕಿನ ಹೆಬ್ಬಳೆ ಗ್ರಾಮ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ತಾಲೂಕ ಪಂಚಾಯತ್ ತನಿಖಾದಿಕಾರಿಗಳು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ

ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯ ಮಾಹಿತಿ ಹಕ್ಕುಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಾಗೇಶ ನಾರಾಯಣ ನಾಯ್ಕ ಅವರು ಅವರು ತನಿಖೆಗಾಗಿ ಹೊರಾಟಕ್ಕೆ ಇಳಿದಿದ್ದರು ಈ ಹಿನ್ನೆಲೆಯಲ್ಲಿ ತಾಲೂಕ ಪಂಚಾಯತ್ ತನಿಖಾ ತಂಡವು ಹೆಬ್ಳೆ ಗ್ರಾಮ ಪಂಚಾಯತಗೆ ಭ್ರಷ್ಟಾಚಾರ ತನಖೆಯ ಸಂಬಂದ ತೆಳಿತ್ತು ಈಗ ಆ ತನಿಖೆಯ ವರದಿ ಬಂದಿದ್ದು ಆ ವರದಿಯ ಪ್ರಕಾರ ಅರ್ಜಿದಾರರ ಹೇಳಿಕೆಯಂತೆ ಕೆಲವೋಂದು ಮುಂಗಡ ರಶೀದಿ ಹಾಗು ಚೆಕ್ ಸ್ವೀಕ್ರತಿಗಳಲ್ಲಿ ಸಹಿ ವ್ಯತ್ಯಾಸವಾಗಿರುವುದಲ್ಲದೆ ಕಾರ್ಯಾಲಯದ ದಾಖಲೆ ನಿರ್ವಹಣೆಯಲ್ಲಿ ಕ್ರಮ ಬದ್ದತೆ ಇಲ್ಲದೆ ಇರುವುದು ಕಂಡು ಬಂದಿದೆ ಎಂಬ ವರದಿಯನ್ನು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಿ ವರದಿಯನ್ನು ಸಲ್ಲಿಸಲಾಗಿದೆ ಒಟ್ಟಾರೆ ಭಟ್ಕಳ ತಾಲೂಕ ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬಿತಾದಂತಾಗಿದೆ

ಇನ್ನು ಈ ಬ್ರಷ್ಟಾಚಾರದ ಕಿಂಗ್ ಪಿನ್ ಯಾರು ಯಾರ್ಯಾರ ಕೈವಾಡ ಈ ಭ್ರಷ್ಟಾಚಾದಲ್ಲಿ ಎಂಬುದು ತಿಳಿದು ಬರಬೇಕಾಗಿದೆ.

ಈ ಬಗ್ಗೆ ರಾಜ್ಯ ಮಾಹಿತಿ ಹಕ್ಕುಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಾಗೇಶ ನಾರಾಯಣ ನಾಯ್ಕ ನಮ್ಮ ಹೊರಾಟ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗಾಗಿ ತಪ್ಪಿತಸ್ಥರಿಗೆ ಶಿಕ್ಷೇಯಾಗದ ಹೊರತು ನಾವು ಯಾವುದೆ ಕಾರಣಕ್ಕೂ ವಿಶ್ರಮಿಸಲಾರೆವು ಎಂದು ಹೇಳಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!