ಭಟ್ಕಳದಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೈವರ್‌ ಓರ್ಗನೈಜೇಷನ್‌ ವತಿಯಿಂದ ಡಿ ವೈ ಎಸ್‌ ಪಿ ಮನವಿ

ಟ್ಯಾಕ್ಸಿ ಡ್ರೈವರ್‌ ಗಣಪತಿ ಹರೀಶ ನಾಯ್ಕ ಮೇಲಿನ ಹಲ್ಲೆಯನ್ನು ವಿರೋದಿಸಿ ಮನವಿ

ಭಟ್ಕಳ ಮಂಕಿ ಠಾಣೆಯ ಪಿ ಎಸ್‌ ಐ ಅಶೋಕ ಅವರು ಟ್ಯಾಕ್ಸಿ ಡ್ರೈವರ್‌ ಗಣಪತಿ ಹರೀಶ ನಾಯ್ಕ ಅವರ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕ್ರಮಕ್ಕಾಗಿ ಟ್ಯಾಕ್ಸಿ ಡ್ರೈವರ್‌ ಓರ್ಗನೈಜೇಷನ್‌ ವತಿಯಿಂದ ಭಟ್ಕಳ ತಾಲೂಕಿನಲ್ಲಿ ಡಿ ವೈ ಎಸ್‌ ಪಿ ಬೆಳ್ಳಿಯಪ್ಪ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು .

ಮನವಿಯಲ್ಲಿ ತಡ ರಾತ್ರಿ ಗಣಪತಿ ಹರೀಶ ನಾಯ್ಕ ಕುಮಟಾ ದಿಂದ ದರ್ಮಸ್ಥಳಕ್ಕೆ ಬಾಡಿಗೆಗೆ ತೆರಳುತ್ತಿರುವ ಸಂದರ್ಬದಲ್ಲಿ ಅನಂತವಾಡಿ ಚೆಕ್‌ ಪೊಷ್ಟಿನಲ್ಲಿ ಗಾಡಿಯನ್ನು ನಿಲ್ಲಿಸಿ ಪರಿಶಿಲಿಸಿ ಗಾಡಿಯನ್ನು ಸೈಡಿನಲ್ಲಿ ನಿಲ್ಲಿಸಲು ಹೇಳುತ್ತಾರೆ ಹೆದ್ದಾರಿಯಲ್ಲಿ ರಾತ್ರಿ ವೇಳೆ ಗಾಡಿ ನಿಲ್ಲಿಸುವುದು ತಪ್ಪು ಎಂದು ಸ್ವಲ್ಯ ಮುಂದೆ ಸೈಡಿಗೆ ಗಾಡಿ ನಿಲ್ಲಿಸಲು ಹೋದಾಗ ಇದರಿಂದ ಅಶೋಕ ಎನ್ನುವವರು ಅವಾಚ್ಯ ಶಬ್ದದಿಂದ ಬೈದು ಹೋಡೆದು ಗಾಡಿ ಆರ್ಸಿ ಕಾರ್ಡ ಲೈಸೆನ್ಸ ಅನ್ನು ತೆಗೆದುಕೊಳ್ಳುತ್ತಾರೆ ನಂತರ ೬ ರಿಂದ ೮ ಸಾವಿರ ಹಂ ಕೊಡಲು ಕೇಳುತ್ತಾರೆ ನಾನು ಕೊರ್ಟಿನಲ್ಲಿ ತುಂಬುತ್ತೆನೆ ಎಂದು ಹೇಳಿದಾಗ ಪುನಃ ನನಗೆ ಅವಾಚ್ಯ ಶಬ್ದದಿಂದ ಬೈದಿದಲ್ಲದೆ ಸಿಟ್‌ ಬೆಲ್ಟ ಸಮ ವಸ್ತ್ರ ಹಾಕಿಲ್ಲ ಎಂದು ಹೇಳಿ ಹೊನ್ನಾವರ ಕೊರ್ಟಲ್ಲಿ ದಂಡ ತುಂಬಲು ಹೇಳುತ್ತಾರೆ ಟ್ಯಾಕ್ಸಿ ಚಾಲಕರ ಮೇಲೆ ನಡೆದ ಈ ದೌರ್ಜನ್ಯದ ವಿರುದ್ದ ಕ್ರಮ ಕೈಗೊಳ್ಳ ಬೇಕು ಎಂದು ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಬದಲ್ಲಿ ಜಿಲ್ಲಾಧ್ಯಕ್ಷರು:- ನವೀನ್ ನಾಯ್ಕ್ ಕುಮಟಾ ರಕ್ಷಾಧಿಕರಿ:- ಮಜೀದ್ ಭಟ್ಕಳಕಾರ್ಯದರ್ಶಿ:- ಮೋಹನ್ ಭಟ್ಕಳ ರಂಜನ್ ದೇವಾಡಿಗ ಮುರ್ಡೇಶ್ವರ ಫಾರೂಕ್ ಮುರ್ಡೇಶ್ವರಶ್ರೀಕಾಂತ್ ಹೊನ್ನಾವರಸಂದೀಪ್ ಹೊನ್ನಾವರಸಂದೀಪ್ ಯಲ್ಲಾಪುರಶ್ರೀನಿವಾಸ ಅಂಕೋಲಾ ಸುಬ್ಬು ಕುಮಟಾ ಫೈಸಲ್ ಭಟ್ಕಳ ಮಂಜು ಭಟ್ಕಳ ಫೈರೋಜ್ ಭಟ್ಕಳಫ್ರಾನ್ಸಿಸ್ ಕಾರವಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top