ಭಟ್ಕಳ ಬೀನಾ ವೈದ್ಯ ಇಂಟರ್‌ ನ್ಯಾಶನಲ್‌ ಸ್ಕೂಲ್‌ ಪ್ರಾರಂಬೋತ್ಸವ

ಸಾದಿಸುವ ಮನಸ್ಸಿದ್ದರೆ ನಾವು ಏನನ್ನು ಸಾದಿಸಬಹುದು .” ಶ್ರೀಮತಿ ಪುಷ್ಪಲತಾ ವೈದ್ಯ ಹೇಳಿಕೆ

ಭಟ್ಕಳ : ವೈದ್ಯ ಇಂಟರ್‌ನ್ಯಾಶನಲ್ ಸ್ಕೂಲ್‌ನ ಶೈಕ್ಷಣಿಕ ಅಧಿವೇಶನ 2022-23 ರ ಪ್ರಾರಂಭೋತ್ಸವವು ಬೀನಾ ವೈದ್ಯ ಕ್ಯಾಂಪಸ್ಸಿನಲ್ಲಿ ಹಮ್ಮಿಕೊಳ್ಳಲಾಯಿತು

ಸಮಾರಂಭದ ಅಧ್ಯಕ್ಷತೆಯನ್ನು ಬೀನಾ ವೈದ್ಯ ಎಜುಕೇಶನಲ್ ಟ್ರಸ್ಟ್‌ನ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಪುಷ್ಪಲತಾ ವೈದ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ರವಿಶಂಕರ್.ಸಿ, ಡಿಎಫ್ ಒ ಹೊನ್ನಾವರ, ಶ್ರೀ ಬೋರಯ್ಯ ಕೆ ಟಿ ಎಸಿಎಫ್ ಭಟ್ಕಳ ಮತ್ತು ಶ್ರೀಮತಿ ಸವಿತಾ ದೇವಾಡಿಗ ಆರ್ ಎಫ್ ಓ ಮಂಕಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಇಡೀ ಕಾರ್ಯಕ್ರಮವನ್ನು ಅತ್ಯಂತ ಶಿಸ್ತು, ಶ್ರದ್ಧೆ ಮತ್ತು ಉತ್ಸಾಹದಿಂದ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ನೂತನವಾಗಿ ರಚನೆಯಾದ ಪಾಣಿನಿ ಕೌಟಿಲ್ಯ ಆರ್ಯಭಟ, ಚರಕ ಗುಂಪಿನ ನಾಯಕರಿಗೆ ಆಯಾ ಗುಂಪಿನ ಬಾವುಟ ಹಸ್ತಾಂತರಿಸುವ ಮೂಲಕ ನಾಯಕರಿಗೆ ಜವಾಬ್ದಾರಿಯನ್ನು ವಹಿಸಲಾಯಿತು, ವಿಧ್ಯಾರ್ಥಿ ವಿಧ್ಯಾರ್ಥಿನಿ ನಾಯಕ ನಾಯಕಿ ಕ್ರಿಡಾ ನಾಯಕ ನಾಯಕಿಯರಿಗೆ ಪ್ರತಿಜ್ಞಾ ವಿದಿಗಳನ್ನು ಬೋದಿಸಲಾಯಿತು ಹಾಗು ನಾಯಕ ನಾಯಕಿಯರಿಗೆ ಪ್ರಮಾಣ ಪತ್ರ ಮತ್ತು ಭಾವುಟಗಳನ್ನು ವಿತರಿಸಲಾಯಿತು

ಈ ಸಂದರ್ಬದಲ್ಲಿಆಡಳಿತ ಮಂಡಳಿಯ ಶ್ರೀಮತಿ ಪುಷ್ಪಲತಾ ವೈದ್ಯ ಮಾತನಾಡಿ ಸಾದಿಸುವ ಮನಸ್ಸಿದ್ದರೆ ನಾವು ಏನನ್ನು ಸಾದಿಸಬಹುದು ಸಾದಿಸುವ ಮನಸ್ಸಿರ ಬೇಕಷ್ಟೆ ವಿಧ್ಯಾರ್ಥಿಗಳಾದ ನೀವು ಯಾವಾಗಲು ಕ್ರೀಯಾಶಿಲರಾಗಿರ ಬೇಕು ಕ್ರಿಯಾತ್ಮಕವಾಗಿ ಯೋಚನೆಗಳನ್ನು ಮಾಡ ಬೇಕು ಆಗಲೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಿದರು

WhatsApp
Facebook
Telegram
error: Content is protected !!
Scroll to Top