ಕೇರಳದಿಂದ ಮಕ್ಕಾಗೆ ಪಾದಯಾತ್ರೆ ಹೊರಟ ಶಿಹಾಬ್‌. ಭಟ್ಕಳ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅದ್ಧೂರಿ ಸ್ವಾಗತ

ಭಟ್ಕಳ : ಕಾಲ್ನಡಿಗೆಯ ಮೂಲಕ ಕೇರಳದಿಂದ ಮಕ್ಕಾ ಹಜ್ ಯಾತ್ರೆಗೆ ಪ್ರಯಾಣ ಬೆಳೆಸಿರುವ ಮಲಪುರಂನ 30 ವರ್ಷದ ಶಿಹಾಬ್ ಚೋಟ್ಟೂರ್ ಅವರನ್ನು ಜೂನ್ ೧೪ ಮಂಗಳವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಉತ್ತರಕನ್ನಡ ಜಿಲ್ಲೆಯ ಗಡಿ ಪ್ರವೇಶಿಸಿದರು.  

ಈ ಸಂದರ್ಭದಲ್ಲಿ  ಭಟ್ಕಳ ತಾಲೂಕಿನ  ಗೊರ್ಟೆ, ಬೆಳ್ಕೆ, ಸರ್ಪನ ಕಟ್ಟಾ, ಪುರವರ್ಗಾ ಮತ್ತು  ಉಸ್ಮಾನ್ ನಗರದ ಜನರು ಅದ್ದೂರಿ ಸ್ವಾಗತ ಮಾಡಿಕೊಂಡು ಅವರೊಡನೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಶಿಹಾಬ್  ಭಟ್ಕಳ ನೂರ್ ಮಸೀದಿ ತಲುಪಿದರು.

ಯುವಕ ಶಿಹಾಬ್ನನ್ನು ಭೇಟಿ ಮಾಡಲು ನೂರಾರು ಜನರು ನೂರ್ ಮಸೀದಿಯಲ್ಲಿ ಜಮಾಯಿಸಿದರು. ಭಟ್ಕಳ ತಂಜಿಂ ಕಾರ್ಯದರ್ಶಿ ಜಿಲಾನಿ ಶಾಬಂದ್ರಿ, ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ  ಅಜೀಝುರ್ ರೆಹಮಾನ್ ರುಕ್ನುದ್ದೀನ್ ನದ್ವಿ, ನೂರ್ ಮಸೀದಿಯ ಖತೀಬ್ ಮತ್ತು ಇಮಾಮ್ ಮೌಲಾನಾ ಅಮೀನ್ ರುಕ್ನುದ್ದೀನ್ ನದ್ವಿ , ನೂರ್ ಮಸೀದಿ ಅಧ್ಯಕ್ಷ ಆಸಿಫ್ ದಾಮುದಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮೀ ಸಿದ್ದಿಕ್ ಸೇರಿದಂತೆ ಹಲವು ಮುಖಂಡರು ಇದ್ದರು.

WhatsApp
Facebook
Telegram
error: Content is protected !!
Scroll to Top