Tuesday, June 28, 2022
Homeಭಟ್ಕಳಭಟ್ಕಳ ತಾಲೂಕಿನ ವೆಲ್ಪೆರ್ ಪಾರ್ಟಿ ಆಪ್‌ ಇಂಡಿಯಾ ವತಿಯಿಂದ ಪ್ರತಿಭಟನೆ

ಭಟ್ಕಳ ತಾಲೂಕಿನ ವೆಲ್ಪೆರ್ ಪಾರ್ಟಿ ಆಪ್‌ ಇಂಡಿಯಾ ವತಿಯಿಂದ ಪ್ರತಿಭಟನೆ

ವೆಲ್ಫೇರ್ ಪಾರ್ಟಿ ಮುಖಂಡ ಜಾವೀದ್‌ ಮೊಹಮ್ಮದ್‌ ನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ


ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ನಾಯಕ ಜಾವೀದ್ ಮೊಹಮ್ಮದ್ ರನ್ನು ತಕ್ಷಣ ಬಿಡುಗಡೆ ಮಾಡ ಬೇಕು ಮತ್ತು ಸರಕಾರವು ಸರಕಾರ ಬುಲ್ಡೋಜರ್‌ ಗುಂಡಾಗಿರಿ ಮಾಡುತ್ತಿದೆ ಎಂದು ವೆಲ್ಪೇರ್‌ ಪಾರ್ಟಿ ಆರೋಪಿಸುತ್ತಿದ್ದು ಇಂತಹ ಗುಂಡಾಗಿರಿಯನ್ನು ನಿಲ್ಲಿಸ ಬೇಕು ಎಂದು ಒತ್ತಾಯಿಸಿ ವೆಲ್ಪೇರ್‌ ಪಾರ್ಟಿ ಆಪ್‌ ಇಂಡಿಯಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು


ದೇಶವು ಇಂದು ಅದರ ಪ್ರಜಾಪ್ರಭುತ್ವ ಬುನಾದಿಯಿಂದ ಹಳಿ ತಪ್ಪುತ್ತಿರುವಯೋಪಾದಿಯಲ್ಲಿರುವುದು ಆತಂಕಕಾರಿಯಾಗಿದೆ.  ಭಾಜಪ ಮುನ್ನಡೆಸುವ ಇಂದಿನ ಕೇಂದ್ರ ಸರಕಾರ ಮತ್ತು ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯ ಸರಕಾರದ ಆಡಳಿತದ ವೈಖರಿ ನಿರಕುಂಶ ಪ್ರಭುತ್ವ ಅಥವಾ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಮಾತ್ರವಲ್ಲ ಇಂದು ದೇಶದಾದ್ಯಂತ ಅಘೋಷಿತ ತುರ್ತು ಪರಿಸ್ಥಿತಿಯ ನಿರ್ಮಾಣವಾಗಿದೆ. ಇದಕ್ಕೆ ಪೂರಕವಾಗಿಯೇ ಎಂಬಂತೆ, ರಾಜಕೀಯದಲ್ಲಿಯೇ ಅಪೂರ್ವವಾದ ಕೇವಲ ಮೌಲ್ಯಾಧಾರಿತ ತಳಹದಿಯಲ್ಲಿ ಕ್ರಿಯಾಶೀಲವಾಗಿರುವ ರಾಜಕೀಯ ಪಕ್ಷವಾಗಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮುಖಂಡ ಮುಹಮ್ಮದ್ ಜಾವೇದ್ ಅವರನ್ನು,ಪ್ರವಾದಿ  ನಿಂದನೆಯ ವಿರುದ್ಧ  ಪ್ರಯಾಗ್ ರಾಜ್ ನಲ್ಲಿ  ಸಾಂವಿಧಾನಿಕವಾಗಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ, ಅವರ  ಕುಟುಂಬ ಸಹಿತ      ಬಂಧಿಸಿರುವುದು ಖಂಡನೀಯವಾಗಿದೆ.
ನಗರದ ಹಳೆಯ ತಹಸಿಲ್ದಾರ್ ಆಫೀಸ್ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದರು, ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹಿರ್ ಹುಸೇನ್ ಅವರು ಮಾತನಾಡಿದರು,ಸರಕಾರದ ವಿರುದ್ಧ ಪ್ರತಿಭಟಿಸುವ ಪ್ರಜಾಪ್ರಭುತ್ವ ಹಕ್ಕನ್ನು ಕಸಿದುಕೊಂಡಿರುವ ಭಾಜಪ ಪಟಾಲಂಗಳಿಗೆ ಇದೊಂದು ನೆಪ ಮಾತ್ರವಾಗಿದ್ದು, ಒಟ್ಟಿನಲ್ಲಿ ಸರಕಾರದ ವಿರುದ್ಧದ ಯಾವುದೇ ಪ್ರತಿಭಟನೆಯನ್ನು ಹೀಗೆ ಅಧಿಕಾರ ಬಲದಿಂದ ಹತ್ತಿಕ್ಕುವುದು ಇವರ ಸರ್ವಾಧಿಕಾರಿ ಧೋರಣೆಯ ಭಾಗವಾಗಿದೆ. ಇದೀಗ ಇದಕ್ಕೆ ಫೆಟರ್ನಿಟಿ ಮೂವ್ಮೆಂಟ್ ಇದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಫ್ರೀನ್ ಫಾತಿಮಾ ರವರ ತಂದೆ ತಾಯಿ ಮತ್ತು ತಂಗಿಯವರುಗಳಾದ ಜಾವೇದ್ ಮುಹಮ್ಮದ್ ರವರ ಕುಟುಂಬ ಬಲಿಪಶುವಾಗಿದೆ.
ಪ್ರವಾದಿ ನಿಂದನೆ ಹೇಳಿಕೆಯ ವಿರುದ್ಧದ ವಿದೇಶಿಯರ ಪ್ರತಿಭಟನೆ, ಬಹಿಷ್ಕಾರಕ್ಕೆ ಮಣಿಯುವ ಕೇಂದ್ರ ಸರಕಾರ ಸ್ವದೇಶಿ ಜನಗಳಿಗೆ ಮಾತ್ರ ಪ್ರತಿಭಟಿಸುವ ಹಕ್ಕನ್ನೇ ನಿರಾಕರಿಸುತ್ತಿರುವುದು ಸರಕಾರದ  ದ್ವಂದ್ವ ನೀತಿಯನ್ನು  ಮತ್ತು  ಎಲ್ಲಾ ಧರ್ಮಗಳ ಬಗ್ಗೆ ಸರಕಾರವು ಗೌರವ ಹೊಂದಿದೆ ಎಂಬ ಅಂತರ್ ರಾಷ್ಟ್ರೀಯ ಹೇಳಿಕೆಯ ಅಪ್ರಾಮಾಣಿಕತೆಯನ್ನೂ ತೋರಿಸುತ್ತದೆ ಮಾತ್ರವಲ್ಲ ಇಂದು ಸರಕಾರದ ಪ್ರತಿಯೊಂದು ಹೇಳಿಕೆಗಳು ಮತ್ತು ಅದಕ್ಕೆ ವಿರುದ್ಧವಾಗಿ ಅದು ಅನುಸರಿಸುತ್ತಿರುವ ನೀತಿಯು ವಿಪರ್ಯಾಸದ ಪರಮಾವಧಿಯಾಗಿದೆ.
ಈ ಸಂದರ್ಭದಲ್ಲಿ: ಪಕ್ಷದ ರಾಜ್ಯಾಧ್ಯಕ್ಷರಾದ ಅಡ್ವೊಕೇಟೆ ತಾಹಿರ್ ಹುಸೇನ್, ಜಿಲ್ಲಾಧ್ಯಕ್ಷರಾದ ಡಾ ನಸೀಮ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಕ್, ಪಕ್ಷದ ಮುಖಂಡರಾದ ಅಸ್ಲಂ ಶೇಕ್, ಮಾಜಿದ್ ಕೋಲ, ಜಬ್ಬಾರ್ ಅಸದಿ, ಜಹೂರ್,  ಶೌಕತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!