ಕರ್ನಾಟಕ ವಿಧಾನ ಪರಿಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ

ಉತ್ತರ ಕನ್ನಡ ಜಿಲ್ಲೆಯಾಧ್ಯಂತ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮಂದಗತಿಯಲ್ಲಿ ನಡೆದ ಚುನಾವಣೆ

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯಾಧ್ಯಂತ ಕರ್ನಾಟಕ ವಿಧಾನ ಪರಿಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ಚುನಾವಣೆ ನಡೆದಿದ್ದು ಪಶ್ಚಿಮ ಶಿಕ್ಷಕ ಕ್ಷೇತ್ರಕ್ಕೆ ನಡೆದ ಚುನಾವಣೆ ಮಂದಗತಿಯಲ್ಲಿ ನಡೆದಿರುವುದು ವರದಿಯಾಗಿದೆ

ಉತ್ತರ ಕನ್ನಡ ಜಿಲ್ಲೆಯ ಕೆಲವು ಕಡೆ ಬಿರುಸಿನ ಮತದಾನವಾದರೆ ಕೆಲವು ಕಡೆ ಮಂದಗತಿಯ ಮತದಾನ ನಡೆದಿರುತ್ತದೆ ಭಟ್ಕಳ ತಾಲೂಕಿನಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಮತದಾನ ಮಂದಗತಿಯಲ್ಲಿ ನಡೆದಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ ಬಿ ಜೆ ಪಿ ಅಭ್ಯರ್ಥಿಯಾಗಿ ಬಸವರಾಜ್‌ ಹೊರಟ್ಟಿ ಕಾಂಗ್ರೇಸ್‌ ಅಭ್ಯರ್ಥಿಯಾಗಿ ಬಸವರಾಜ್‌ ಗುರಿಕಾರರು ಚುನಾವಣೆಗೆ ಸ್ಪರ್ದೀಸಿದ್ದು ಸ್ಪರ್ದಿಗಳ ನಡೆವೆ ಜಟಾಪಟಿ ಪ್ರತಿಸ್ಪರ್ಧೆ ಎರ್ಪಟ್ಟಿದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 3605 ಮತದಾನವಿದ್ದು 15 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ ಭಟ್ಕಳ , ತಾಲೂಕಿನಲ್ಲಿ ಎಂಟು ಗಟ್ಟೆಯಿಂದಲೆ ಮತದಾನ ಪ್ರಾರಂಬವಾಗಿದ್ದು ತಾಲೂಕಾಡಳಿತ ಸೌದದಲ್ಲಿ ಮತದಾನ ನಡೆದಿದ್ದು ಮತದಾರರಿಗೆ ಜ್ವರ ತಪಾಸಣೆ ನಡೆಸಲಾಗಿದ್ದು ಮತಗಟ್ಟೆಯ 200 ಮಿಟರ್‌ ವರೆಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂದಿಸಲಾಗಿದೆ ಕಾಂಗ್ರೇಸ್‌ ಮತ್ತು ಬಿಜೇಪಿ ಪಕ್ಷದ ವತಿಯಿಂದ ಪ್ರತ್ಯೆಕ ಟೆಂಟ್‌ ಹಾಕಲಾಗಿದೆ ಭಟ್ಕಳದಲ್ಲಿ 2011 ಮತದಾರರಿದ್ದು ಎರಡು ಪಕ್ಷದ ಮುಖಂಡರು ಹಾಗು ಶಿಕ್ಷಕರು ಮತದಾರರನ್ನು ಸೇಳೆಯಲು ಶತಾಯಗತಾಯ ಪ್ರಯತ್ನವನ್ನು ನಡೆಸಿದರು .

ಇನ್ನು ಕಾರವಾರದ ಶಿಕ್ಷಕರ ಮತದಾನದ ಸಂದರ್ಬದಲ್ಲಿ ಕೆಲಕಾಲ ಗೊಂದಲದ ವಾತಾವರಣ ಏರ್ಪಟ್ಟಿತ್ತು ಎಂದು ತಿಳಿದು ಬಂದಿದೆ ಗೊಕರ್ಣ ಮುಂಡಗೋಡಿನಲ್ಲ ಬಿರುಸಿನ ಮತದಾನ ನಡೆದಿದ್ದೆ ಇನ್ನು ಜಿಲ್ಲೆಯ ಅಂಕೋಲಾ , ಯಲ್ಲಾಪುರ, ಹಳಿಯಾಳ ದಾಂಡೇಲಿ, ಮುಂತಾದವು ಕಡೆಗಳಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮತದಾನದ ನಡೆದಿದ್ದು ಗೆಲ್ಲುವ ಅಭ್ಯರ್ಥಿಯಾರು ಎನ್ನುವುದು ಇನ್ನಷ್ಟೆ ತಿಳಿದು ಬರಬೇಕಾಗಿದೆ

WhatsApp
Facebook
Telegram
error: Content is protected !!
Scroll to Top