ಭಟ್ಕಳದಲ್ಲಿ ಪೊಲಿಸ್ ಕ್ವಾಟ್ರಸ್ಗೆ ನುಗ್ಗಿ ಪೋಲಿಸಪ್ಪನ ಮನೆಗೆ ಕನ್ನ ಹಾಕಿದ ಚಾಲಾಕಿ ಕಳ್ಳರು

ಪೋಲಿಸರ ಮನೆಯನ್ನೆ ದೋಚುವಷ್ಟು ಹದಗೆಟ್ಟು ಹೋಯಿತೆ ನಮ್ಮ ಭಟ್ಕಳದ ವ್ಯವಸ್ಥೆ ?

ಕಳ್ಳರ ಬೆನ್ನ ಹಿಂದೆ ಯಾವ ಶಕ್ತಿ ಇದೆ ಸಾರ್ವಜನಿಕರ ಕುತೂಹಲ ತಾರಕಕ್ಕೆ

ಸಾಗರ ರಸ್ತೆಯ‌ ಪೋಲೀಸ್ ವಸತಿ ಗೃಹದಲ್ಲಿರುವ ಕಾನ್ಸ್‌ಟೇಬಲ್ ಮನೆಗೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿ ಒಡವೆ ದೋಚಿದ ಘಟನೆ ನಡೆದಿದೆ.

ಪೋಲಿಸ್ ಕಾನ್ಸ್‌ಟೇಬಲ್ ಸಂಗಮೇಶ್ ಕರ್ತವ್ಯಕ್ಕೆ ತೆರಳಿದ ಬಳಿಕ ಈ ಘಟನೆ ಸಂಭವಿಸಿದ್ದು ಭಟ್ಕಳ ಜನತೆಯಲ್ಲಿ ಆತಂಕ ಹುಟ್ಟಿಸಿದೆ.ರಾತ್ರಿ ಸುಮಾರು 12.15ರ ಸಮಯಕ್ಕೆ ಬಾಗಿಲು ಬಡಿದ ಶಬ್ದ ಕೇಳಿ ಗಂಡ ಮನೆಗೆ ಬಂದಿರಬಹುದೆಂದು ಭಾವಿಸಿದ ಪತ್ನಿ ನಾಗರತ್ನ ಬಾಗಿಲು ತೆಗೆದ ತಕ್ಷಣ ಚಾಕು ಹಿಡಿದ ಇಬ್ಬರು ಮುಸುಕುಧಾರಿಗಳು ಮನೆಯೊಳಗೆ ಪ್ರವೇಶಿಸಿದರು. ಕೂಗದಂತೆ ಅವಳನ್ನು ಬೆದರಿಸಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ, ಕಿವಿಯೋಲೆ, ಉಂಗುರ ಸೇರಿ ಅಂದಾಜು 2 ರಿಂದ 2.5 ಲಕ್ಷ ಬೆಲೆಬಾಳುವ ಆಭರಣ ದೋಚಿ ಪರಾರಿಯಾಗಿದ್ದಾರೆ

ಕಳ್ಳರು ಮಂಕಿ ಕ್ಯಾಪ್, ಕೈಗೆ ಗ್ಲೌಸ್,ಕಾಲಿಗೆ ಸಾಕ್ಸ್ ಧರಿಸಿದ್ದರು ಅವರಲ್ಲಿ ಓರ್ವ ಕನ್ನಡದಲ್ಲೇ ಮಾತನಾಡುತ್ತಿದ್ದ ಎಂದು ಕಾನ್ಸ್‌ಟೇಬಲ್ ಪತ್ನಿ ನಾಗರತ್ನಾ ಹೇಳಿಕೆ ನೀಡಿದ್ದಾಳೆ. ಇದೊಂದು ಸಿನಿಮಿಯಾ ರೀತಿಯ ಕಳ್ಳತನವಾಗಿದ್ದು ಪೊಲಿಸ್ ಕ್ವಾಟ್ರಸ್ ಅಲ್ಲಿ ಕಳ್ಳತನ ಮಾಡುವಷ್ಟು ದೈರ್ಯ ಕಳ್ಳರಿಗೆ ಬಂದಿದೆ ಎಂದರೆ ಭಟ್ಕಳ ಎತ್ತ ಸಾಗುತ್ತಿದೆ ಪೊಲಿಸರ ಪರಿಸ್ಥಿತಿ ಹೀಗೆ ಆಗಿದ್ದು ಪೋಲಿಸರಿಗೆ ರಕ್ಷಣೆ ಇಲ್ಲದ ಮೇಲೆ ಸಾಮಾನ್ಯ ಜನ ಸಾಮಾನ್ಯರ ಪಾಡೆನು ಇಂತಹ ಅಪರಾದಿಗಳ ಬೆನ್ನ ಹಿಂದೆ ಯಾರಿದ್ದಾರೆ ಯಾರ ದೈರ್ಯದ ಮೇಲೆ ಹೀಗೆ ಆರಕ್ಷಕರ ಮನೆಗೆ ಕನ್ನ ಹಾಕುತ್ತಾರೆ ನಮ್ಮ ಭಟ್ಕಳದಲ್ಲು ಕೂಡ ದಂಡು ಪಾಳ್ಯದಂತ ಸಂಸ್ಕ್ರತಿ ಹುಟ್ಟಿಕೊಳ್ಳುತ್ತಿದೆಯಾ ಈ ಎಲ್ಲಾ ಪ್ರಶ್ನೇಗೆ ಸಂಬಂದಿಸಿದ ಅಧಿಕಾರಿಗಳೆ ಉತ್ತರವನ್ನು ನೀಡ ಬೇಕಾಗಿದೆ .

ಏನೆ ಆಗಲಿ ಕಳ್ಳತನದ ಸಂದರ್ಬದಲ್ಲಿ ಪಾಪದ ಪೊಲಿಸಪ್ಪನ ಪತ್ನಿ ನಾಗರತ್ನ ಅವರ ಪ್ರಾಣಕ್ಕೆ ಸಂಚಕಾರವಾಗದಿರುವುದು ಅದ್ರಷ್ಟದ ಸಂಗತಿಯಾಗಿದೆ

ಘಟನೆ ನಡೆದ ಸ್ಥಳಕ್ಕೆ ಕಾರವಾರದ ಶ್ವಾನದಳ ಆಗಮಿಸಿದ್ದು ಪೋಲಿಸರು ತನಿಖೆ ಕೈಗೊಂಡಿದ್ದಾರೆ. ಇನ್ನಾದರು ಪೊಲಿಸ್ ಇಲಾಖೆ ಭಟ್ಕಳದಲ್ಲಿ ನಡೆಯುತ್ತಿರುವ ಅಪರಾದಿ ಚಟುವಟಿಕಗಳನ್ನು ಗಂಭಿರವಾಗಿ ಪರಿಗಣಿಸಿ ಭಟ್ಕಳದಲ್ಲಿ ಮೆಲ್ಲ ಮೆಲ್ಲನೆ ಚಿಗುರೋಡೆಯುತ್ತಿರುವ ದಂಡುಪಾಳ್ಯದ ಸಂಸ್ಕ್ರತಿಯನ್ನು ಮಟ್ಟಹಾಕುತ್ತಾರೋ ಎಂದು ಕಾದು ನೋಡಬೇಕಾಗಿದೆ.

WhatsApp
Facebook
Telegram
error: Content is protected !!
Scroll to Top