ಭಟ್ಕಳದಲ್ಲಿ ಪ್ರತಿಭಟನಾ ನಿರತ ಮೊಗೇರ ಸಮಾಜದಿಂದ ಪತ್ರಿಕಾಗೋಷ್ಟಿ

ನಮ್ಮ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ ಶಾಲಾ ಕಾಲೇಜುಗಳಿಗೆ ನಮ್ಮ ಸಮಾಜದ ವಿಧ್ಯಾರ್ಥಿಗಳ ಮೂಲಕ ಬಹಿಷ್ಕಾರ ಹಾಕುತ್ತಿದ್ದೆವೆ : ಎಪ್‌. ಕೆ. ಮೊಗೇರ

ಭಟ್ಕಳ ನಮ್ಮ ಮೊಗೇರ್‌ ಸಮಾಜವು ತಿಂಗಳುಗಳಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಪ್ರತಿಭಟನೆ ನಡೆಸಿಕೊಂಡು ಬರುತ್ತಿದೆ ಆದರೆ ಜನ ಪ್ರತಿನಿದಿಗಳಾಗಲಿ ಅಧಿಕಾರಿಗಳಾಗಲಿ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲಾ ನಮ್ಮ ಸಮಾಜದ ಈ ಪ್ರತಿಭಟನೆ ಉಗ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು ಇದರಿಂದ ಮುಂದೆ ಉಂಟಾಗುವ ಅನಾಹುತಗಳಿಗೆ ಜನಪ್ರತಿನಿದಿಗಳು ಹಾಗು ಅಧಿಕಾರಿಗಳೆ ಕಾರಣ ಎಂದು ಮೊಗೇರ್‌ ಸಮಾಜದ ಮುಂಖಂಡರಲ್ಲೊಬ್ಬರಾದ ಎಪ್‌ ಕೆ ಮೊಗೇರ್‌ ಹೇಳಿದರು.

ಭಟ್ಕಳ ತಾಲೂಕಿನಲ್ಲಿ ಮೊಗೇರ್‌ ಸಮಾಜದ ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನಾ ನಿರತರನ್ನೊಳಗೊಂಡಂತೆ ಹಮ್ಮಿಕೊಂಡ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ನಾವು ಎಪ್ಪತ್ತುಕ್ಕೂ ಹೆಚ್ಚು ದಿನಗಳಿಂದ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಪ್ರತಿಭಟನೆ ನಡೆಸಿಕೊಂಡು ಬರುತ್ತಿದ್ದು ಅಧಿಕಾರಿಗಳು ಜನಪ್ರತಿಬಿದಿಗಳು ಸಬೆಗಳನ್ನು ನಡೆಸಿ ತಪ್ಪು ನಡೆದಿದೆ ನಿಮಗೆ ಜಾತಿ ಪ್ರಮಾಣ ಪತ್ರ ನೀಡುತ್ತೆವೆ ಎಂಬ ಮಾತನ್ನು ಹೇಳುತ್ತಾರೆ ಆದರೆ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲಾ ನಮಗೆ ತುಂಬ ನಿರಾಸೆಯನ್ನು ತಂದಿದೆ ನಮ್ಮ ಹೋರಾಟ ಇನ್ನು ಮುಂದೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ ನಾಳೆ ಅದರೆ ಶುಕ್ರವಾರದಿಂದ ಮಕ್ಕಳಿಂದ ಪ್ರಾರಂಭವಾಗುವ ಉಗ್ರ ಹೋರಾಟ ನಮ್ಮ ಸಮಾಜದ ವಿಧ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ ದೊರೆಯುವವರೆಗೂ ಶಾಲಾ ಕಾಲೇಜನ್ನು ಬಹಿಶ್ಕರಿಸುವುದರ ಮೂಲಕ ಹೊರಾಟದ ಸ್ವರೂಪ ಬದಲಾಗುತ್ತಲೆ ಹೊಗುತ್ತದೆ ಮುಂದೆ ಆಗು ಎಲ್ಲಾ ಅನಾಹುತಕ್ಕೆ ಸರಕಾರ ಜನಪ್ರತಿನಿದಿಗಳು ಅಧಿಕಾರಿಗಳೆ ಕಾರಣ ಎಂದು ಎಚ್ಚರಿಸಿದರು

ಈ ಸಂದರ್ಬದಲ್ಲಿ ಇನ್ನೊಬ್ಬ ಮುಖಂಡರಾದ ಬಾಸ್ಕರ್‌ ಮೊಗೇರ್‌ ಅವರು ಮಾತನಾಡಿ ಸರಕಾರಕ್ಕೆ ಹಿತಾಸಕ್ತಿಗಳೆ ಇಲಾ ನಮ್ಮ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ ನಮಗೆ ಹೊರಾಟ ಅನಿವಾರ್ಯ ನಾವು ನಮ್ಮ ಹೊರಾಟವನ್ನು ಮತ್ತಷ್ಟು ಬಲಗೊಳಿಸುತ್ತೆವೆ ಇದರ ಪರಿಣಾಮ ಸರಕಾರ ಎದುರಿಸಲು ಸಿದ್ದವಾಗಲಿ ಎಂದು ಹೇಳಿದರು

ಪತ್ರಿಕಾಗೋಷ್ಟಿಯಲ್ಲಿ ಕ್ರಷ್ಣ ಮೊಗೇರ್‌, ಸುಬ್ರಾಯ್‌ ಮೊಗೇರ್‌, ವೆಂಕಟ್ರಮಣ ಮೊಗೇರ್‌ , ಮಾದೇವ ಮೋಗೆರ್‌ , ಮುಕುಂದ್‌ ಮೊಗೇರ್‌ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top