ಭಟ್ಕಳ ತಾಲೂಕ ಜಾಲಿಕೋಡಿ ಅಳವೆ ಕಾಮಗಾರಿ ನೆಪದಲ್ಲಿ ಕಾನೂನು ಬಾಹಿರ ಮರಳು ಸಾಗಾಟ

ಜಾಣ ಕುರುಡುತನವನ್ನು ತೋರಿಸುತ್ತಿರುವ ತಾಲೂಕಾಡಳಿತ : ಅಧಿಕಾರಿಗಳಿಗೆ ಚಿಮಾರಿ ಹಾಕುತ್ತಿರುವ ಸಾರ್ವಜನಿಕರು

ಭಟ್ಕಳ ತಾಲೂಕಿನಲ್ಲಿ ಜಾಲಿಕೋಡಿ ಅಳವೆ ಕಾಮಗಾರಿ ನೆಪದಲ್ಲಿ ಟ್ರಕ್‌ ಮೂಲಕ ನೂರಾರು ಲೋಡ್‌ ಮರಳನ್ನು ಅಕ್ರಮವಾಗಿ ಸಾಗಟ ಮಾಡುತ್ತಿದ್ದು ತಾಲೂಕಾಡಳಿತ ಹಾಗು ತಾಲೂಕಾಡಳಿತದ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಭಟ್ಕಳ ಜಾಲಿಕೋಡಿ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ

ತಾಲೂಕಿನಲ್ಲಿ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತನ್ನು ನೀಡಲಾಗುತ್ತಿಲ್ಲಾ ಎಲ್ಲಿ ನೋಡಿದರಲ್ಲಿ ಕಳಪೆ ಕಾಮಗಾರಿ ಅಕ್ರಮಗಳು ಗುಂಡಾಗಿರಿ ಒಂದೆ ಎರಡೆ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಧ್ಯಮಗಳು ದ್ವನಿ ಎತ್ತಿದರೆ ಅಂತವರನ್ನು ಕೊಂದು ಮುಗಿಸುವ ಶಡ್ಯಂತ್ರಗಳು ನಡೆಯುತ್ತದೆ ಹಾಗು ಸಾಮಾಜೀಕ ಜಾಲತಾಣಗಳಲ್ಲಿ ದ್ವನಿ ಎತ್ತಿದವರ ತೆಜೋ ವದೆಗಳನ್ನು ಕುಂಲಂಕುಲ್ಲಾ ಮಾಡಲಾಗುತ್ತದೆ ಈ ಬಗ್ಗೆ ನಮ್ಮ ಪೋಲಿಸ್‌ ಇಲಾಖೆಗೆ ಸಂಪೂರ್ಣ ಮಾಹಿತಿಗಳಿದ್ದರು ಪೊಲೀಸ್‌ ಇಲಾಖೆ ಮಾತ್ರ ಗಾಡ ನಿದ್ರೆಯಲ್ಲಿರುವಂತೆ ವರ್ತಿಸುತ್ತದೆ ಒಟ್ಟಾರೆ ಭಟ್ಕಳ ತಾಲೂಕು ಗುಂಡಾ ರಾಜ್ಯದಂತಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಪತ್ರಕರ್ತರ ಮೇಲೆ ಹಲ್ಲೆ ಪತ್ರಕರ್ತರಿಗೆ ಸಾಮಾಜಿಕ ಜಾಲತಾಣದಲ್ಲಿ ಬೇದರಿಸುವುದು ಹೀಗೆ ಅನೇಕ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತದೆ ಈಗ ತಾಲೂಕಿನ ಜಾಲಿಕೊಡಿಯಲ್ಲಿ ಅಳವೆ ಕಾಮಗಾರಿ ನೆಪದಲ್ಲಿ ದೊಡ್ಡ ದೊಡ್ಡ ಟ್ರಕ್‌ ಮೂಲಕ ಅಕ್ರಮವಾಗಿ ನೂರಾರು ಲೋಡ ಮರಳನ್ನು ಜಾಲಿಕೊಡಿ ಸಮುದ್ರ ತೀರದಿಂದ ಅಕ್ರಮವಾಗಿ ಸಾಗಿಸುತ್ತಿದ್ದು ನಮ್ಮ ತಾಲೂಕಾಡಳಿತ ಹಾಗು ಅಧಿಕಾರಿಗಳು ದಿವ್ಯ ನಿರ್ಲಕ್ಷತನವನ್ನು ತೋರಿಸುತ್ತಿದ್ದಾರೆ ಇವರ ಈ ನಡೆಯನ್ನು ಗಮನಿಸಿದರೆ ಈ ಮರಳು ಮಾಪಿಯದ ಹಿಂದೆ ಬಹುದೊಡ್ಡ ಪ್ರಭಾವಿಗಳ ಕೈವಾಡವಿದೆ ಎಂಬುವುದಂತು ಸತ್ಯ ಸ್ಥಳಿಯ ಸಾರ್ವಜನಿಕರು ಈ ಬಗ್ಗೆ ರಾಜಕಾರಣಿಗಳ ಕಡೆ ಬೊಟ್ಟು ತೋರಿಸುತ್ತಿದ್ದಾರೆ

ಈ ಮರಳು ಸಾಗಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ತಾಲೂಕಿನಾಧ್ಯಂತ ಹರಿದಾಡುತ್ತಿದ್ದು ಈ ಮರಳು ಮಾಪಿಯಾದ ಬಗ್ಗೆ ಯಾವೋಬ್ಬ ಅಧಿಕಾರಿಯು ಕೂಡ ಚಕಾರವನ್ನು ಎತ್ತದಿರುವುದು ತುಂಬ ಆಶ್ವರ್ಯವನ್ನು ತಂದಿಟ್ಟಿದೆ ಬಡ ಸಾರ್ವಜನಿಕರು ತಮ್ಮ ಮನೆ ಕಟ್ಟುವ ಸಲುವಾಗಿ ಒಂದು ಚೀಲ ಮರಳನ್ನು ತೆಗೆದರೆ ಇದೆ ಅಧಿಕಾರಿಗಳು ಗಾಂಜಾ ಆಪೀಮು ಸಾಗಟವಾಗಿದೆಯೆನೋ ಎಂಬಂತೆ ಚಡ್ಡಿಯಲ್ಲಿ ಇರುವೆ ಬಿಟ್ಟಂತೆ ವರ್ತಿಸುತ್ತಾರೆ ಆದರೆ ಈಗ ಸರಕಾರದ ಕಾಮಗಾರಿ ನೆಪದಲ್ಲಿ ಜಾಲಿ ಕೋಡಿ ಸಮುದ್ರ ತೀರದಿಂದ ನೂರಾರು ಲೋಡ ಮರಳುಗಳು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ ಆದರೂ ಕೂಡ ಈ ಅಧಿಕಾರಿಗಳಿಗೆ ಇನ್ನು ನಿದ್ರೆ ಇಂದ ಎಚ್ಚರವೆ ಆಗಿಲ್ಲಾ ಇದೆಂತಾ ಆಡಳಿತ ವ್ಯವಸ್ಥೆ ಸ್ವಾಮಿ ಭಟ್ಕಳದಲ್ಲಿ ತುಘಲಕ್‌ ದರ್ಬಾರ್‌ ನಡೆಯುತ್ತಿದೆಯಾ ಅಧಿಕಾರಿಗಳು ಯಾಕೆ ಸೋಗಲಾಡಿತನವನ್ನು ಮೇರೆಯುತ್ತಿದ್ದಾರೆ ತಾವು ತೇಗೆದುಕೊಳ್ಳುವ ಸಂಬಳಕ್ಕಾದರು ನ್ಯಾಯ ಒದಗಿಸಬೇಕು ಎಂಬ ಸ್ವಾಭಿಮಾನವಿಲ್ಲದ ಲಜ್ಜೆಗೇಡಿಗಳಾಗಿ ಹೋದರೆ ಇದೆ ರೀತಿಯ ಘಟನೆಗಳು ಪುನರಾವರ್ತನೆಯಾದರೆ ಸಾರ್ವಜನಿಕರೆ ಈ ಅಧಿಕಾರಿಗಳಿಗೆ ಬುದ್ದಿ ಕಲಿಸುವ ದಿನ ದೂರವಿಲ್ಲಾ ಎಂಬ ಆಕ್ರೋಶದ ಮಾತುಗಳು ತಾಲೂಕಿನಾಧ್ಯಂತ ಹರಿದಾಡುತ್ತಿದೆ ಇನ್ನಾದರು ಇದಕ್ಕೆ ಸಂಬಂದಿಸಿದಂತ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಪಾಲಿಸಿಯಾರೆ ಎಂದು ಕಾದುನೋಡ ಬೇಕಾಗಿದೆ

WhatsApp
Facebook
Telegram
error: Content is protected !!
Scroll to Top