Tuesday, June 28, 2022
Homeಭಟ್ಕಳಭಟ್ಕಳ ಸರ್ಪನಕಟ್ಟೆ ಚೆಕ್ ಪೊಷ್ಟ ಬಳಿ ಲಾರಿ ಅಪಘಾತ : ತಪ್ಪಿದ ಪ್ರಾಣಾಪಾಯ

ಭಟ್ಕಳ ಸರ್ಪನಕಟ್ಟೆ ಚೆಕ್ ಪೊಷ್ಟ ಬಳಿ ಲಾರಿ ಅಪಘಾತ : ತಪ್ಪಿದ ಪ್ರಾಣಾಪಾಯ

ಭಟ್ಕಳ: ತಾಲೂಕ ಸರ್ಪನಕಟ್ಟೆ ಪೋಲಿಸ್‌ ಚೆಕ್‌ ಪೊಷ್ಟ ಬಳಿ ಕಟ್ಟಿಗೆ ತುಂಬಿದ ಲಾರಿಯೊಂದು ಮಗುಚಿ ಬಿದ್ದು ಕೂದಲೆಳೆಯ ಅಂತರದಲ್ಲಿ ಲಾರಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ .

ಶಿರೂರು ಕಡೆಯಿಂದ ಭಟ್ಕಳದ ಕಡೆ ತೆರಳುತ್ತಿದ್ದ ಕಟ್ಟಿಗೆ ತುಂಬಿದ ಲಾರಿಯೊಂದು ತಾಲೂಕಿನ ಸರ್ಪನಕಟ್ಟೆ ಪೊಲೀಸ್‌ ಚೆಕ್‌ ಪೊಷ್ಟ ಬಳಿ ಲಾರಿ ಚಾಲಕನಿಗೆ ಲಾರಿ ಬ್ಯಾಲೆನ್ಸ ಮಾಡಲು ಸಾದ್ಯವಾಗದೆ ಲಾರಿ ಧರಾಶಾಹಿಯಾಗಿದ್ದು ಲಾರಿ ಚಾಲಕ ಗಾಯಗೊಂಡು ರಕ್ತಸಿಕ್ತನಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಲಾರಿ ಕಂಡೆಕ್ಟರ್‌ ತರಚಿದ ಗಾಯಗಳಾಗಿದ್ದು ನಡೆಯಬೇಕಾಗಿದ್ದ ಪ್ರಾಣ ಅಪಾಯಗಳು ಸ್ವಲ್ಪದರಲ್ಲೆ ತಪ್ಪಿದಂತಾಗಿದೆ . ಸರ್ಪನಕಟ್ಟೆ ಪೊಲಿಸ್‌ ಚೆಕ್‌ ಪೊಷ್ಟ ಬಳಿ ಇಟ್ಟಿರುವ ಬ್ಯಾರಿಕೇಡ್‌ ಗಳ ಕಾರಣದಿಂದ ಹಾಗು ಲಾರಿಯಲ್ಲಿ ಕಟ್ಟಿಗೆಗಳ ಒವರ್‌ ಲೋಡ್‌ ಕಾರಣ ಈ ಅಫಘಾತ ಸಂಬವಿಸಿದೆ ಎನ್ನುವುದು ಕೆಲವರ ವಾದವಾದರೆ ಕೆಲವರು ಚೆಕ್‌ ಪೊಷ್ಟ ಮುಂಬಾದಲ್ಲಿ ಹಾಕಿರಿರುವ ಬ್ಯಾರಿಕೇಡ್‌ ಕಾರಣ ಚಾಲಕನಿಗೆ ಲಾರಿಯನ್ನು ಬ್ಯಾಲೆನ್ಸ ಮಾಡಲು ಸಾಧ್ಯವಾಗದೆ ಲಾರಿ ಧರಶಾಹಿಯಾಗಿದೆ ಎಂದು ಕೆಲವು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ .

ಏನೇ ಆಗಲಿ ದೇವರ ಕ್ರಪೇಯೊ ಲಾರಿ ಚಾಲಕ ಅದ್ರಷ್ಟವೋ ಯಾವುದೇ ಪ್ರಾಣಾಪಾಯ ಸಂಬವಿಸದೆ ಅಫಘಾತದ ಪ್ರಕರಣ ಸುಖಾಂತವನ್ನು ಕಂಡಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!