ಭಟ್ಕಳ ಮುಟ್ಟಳ್ಳಿ ತಲಾಂದ್‌ ಕೊಲ್ಲಿಮುಲ್ಲಿ ಗುಡ್ಡದಲ್ಲಿ ಮಹಿಳಾ ಕೊಲೆಯ ಪ್ರಮುಖ ಆರೋಪಿ ವಶಕ್ಕೆ

ಸಾಗರ ಕೋಗಾರ್‌ ಮೂಲದ ಪ್ರಮುಖ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೋಲಿಸ್‌ ಇಲಾಖೆ

ಭಟ್ಕಳ : ತಾಲೂಕಿನ ಮುಟ್ಟಳ್ಳಿ ತಲಾಂದ್‌ ಕೊಲ್ಲಿಮುಲ್ಲಿ ಗುಡ್ಡದಲ್ಲಿ ಕಳೆದ ಮಂಗಳವಾರ ಮಹಿಳೆಯೊರ್ವಳು ಕೊಲೆಗಿಡಾಗಿದ್ದು ಈ ಕೊಲೆಯ ಪ್ರಮುಖ ಆರೋಪಿ ಸಾಗರ ಕೋಗಾರ್‌ ಮೂಲದ ಪ್ರಮುಖ ಆರೋಪಿಯನ್ನು ಹೆಡೆಮುರಿಕಟ್ಟಲು ಪೋಲಿಸ್‌ ಇಲಾಖೆ ಯಶಸ್ವಿಯಾಗಿದೆ .

ತಾಲೂಕಿನ ಮುಟ್ಟಳ್ಳಿ ತಲಾಂದ್‌ ಕೊಲ್ಲಿಮುಲ್ಲಿಯಲ್ಲಿ ಮಹಿಳೆಯೊರ್ವಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಮಹಿಳೆಯನ್ನು ಅತ್ಯಾಚಾರ ಗೈದು ಕೊಲೆ ಮಾಡಲಾಗಿದೆ ಎಂಬ ಶಂಕೆ ಅಂದು ವ್ಯಕ್ತ ಮಾಡಲಾಗಿತ್ತು ಈ ಕೋಲೆಯಲ್ಲಿ ಈಗ ಮಹತ್ವದ ಅಂಶ ಬೆಳಕಿಗೆ ಬಂದಿದ್ದು ಮಹಿಳೆಯ ಕೋಲೆ ಪ್ರಮುಖ ಆರೋಪಿ ಶಿವಮೊಗ್ಗ ಜಿಲ್ಲೆಯ ಸಾಗರ ಕೊಗಾರ್‌ ಮೂಲದ ವ್ಯಕ್ತಿಯೊರ್ವನನ್ನು ಪೋಲಿಸರು ಬಂದಿಸಿದ್ದು ಈತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಇನ್ನು ಕೊಲೆಯಾದ ಮಹಿಳೆ ಉಡುಪಿ ಜಿಲ್ಲೆಯ ಹೆಬ್ರಿಯವರು ಎಂದು ಅಂದಾಜಿಸಲಾಗಿತ್ತು ಆದರೆ ಹೆಬ್ರಿಯ ಮಹಿಳೆ ಜಿವಂತವಾಗಿದ್ದು ಕೊಲೆಯಾದ ಮಹಿಳೆಯು ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮಹಿಳೆ ಎಂದು ಹೇಳಲಾಗುತ್ತಿದ್ದು ಮೃತ ಮಹಿಳೆಯ ಗುರುತು ಪೋಲಿಸ್‌ ತನಿಖೆಯಿಂದಷ್ಟೆ ತಿಳಿದು ಬರಬೇಕಾಗಿದೆ .

ಈ ಕೊಲೆಯ ಹಿನ್ನೆಲೆಯಲ್ಲಿ ಕೊಲ್ಲಿಮುಲ್ಲಿ ಗುಡ್ಡದ ಸೇರಗಿನ ಮನೆಯ ನಿವಾಸಿ 65 ವರ್ಷದ ವೃದ್ದನನ್ನು ಬಂದಿಸಿ ವಿಚಾರಿಸಿದಾಗ ಈ ವೃದ್ದ ನೀಡಿದ ಮಾಹಿತಿ ಅನ್ವಯ ಸಾಗರ ತಾಲೂಕಿನ ಕೊಗಾರ ಮೂಲದ ವ್ಯಕ್ತಿಯೊರ್ವನನ್ನು ಬಂದಿಸಲಾಯಿತು ಕೊಲೆಯಾದ ದಿನ ಆತನು ಭಟ್ಕಳದಿಂದ ಕೊಗಾರಕ್ಕೆ ಪರಾರಿಯಾಗಿದ್ದನ್ನು ಎಂದು ಹೇಳಲಾಗುತ್ತಿದೆ ಈ ಆರೋಪಿಯ ಮಾವನ ಮನೆ ಶಿರಾಲಿ ಸಾರದ ಹೊಳೆಯಾಗಿದ್ದು ಇತನು ಮಾವನ ಮನೆಗೆ ಬಂದ ಸುಳಿವನ್ನು ಬೆನ್ನತ್ತಿ ಪೊಲಿಸರು ಇತನನ್ನು ಹೆಡೆಮುರಿ ಕಟ್ಟಿದ್ದಾರೆ. ಇತನು ಸಾಗರದ ಕೊಗಾರಿನಲ್ಲಿ ಮನೆಯನ್ನು ಹೊಂದಿದ್ದು ಇತನಿಗೆ ಇಬ್ಬರು ಸೊದರರು ಇಬ್ಬರು ಸಹೊದರಿಯರು ಇದ್ದು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾನೆ ಇತನು ಕಾಮುಕನಾಗಿದ್ದು ಮಹಿಳೆಯರನ್ನು ಪಟಾಯಿಸಿ ಅವರೊಂದಿಗೆ ಸಂಪರ್ಕಹೊಂದುವುದೇ ಇತನ ಚಾಳಿ ಎಂದು ಹೇಳಲಾಗುತ್ತಿದೆ.

ಇನ್ನು ಈ ಪ್ರಮುಖ ಆರೋಪಿ ಬಸ್ ನಿಲ್ದಾಣದಲ್ಲಿ ಮೃತ ಮಹಿಳೆಯನ್ನು ಪರಿಚಯ ಮಾಡಿಕೊಂಡು ಕೊಲ್ಲಿಮುಲ್ಲಿ ಸೇರಗಿನ ಮನೆಗೆ ಕರೆದುಕೊಂಡು ಬಂದಿದ್ದಾನೆ

ಬಂದಿತ ವೃದ್ದನ ಪ್ರಕಾರ ಈ ಮುಖ್ಯ ಆರೋಪಿ ಮೃತ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿರುತ್ತಾನೆ ತಾನು ಆಕೆಯೊಂದಿಗೆ ಲೈಂಗಿಕ ಕ್ರೀಯೆ ನಡೆಸಿರುವುದಿಲ್ಲಾ ಆಕೆ ಎದೆ ನೋವಿಂದ ಮೃತ ಪಟ್ಟಿರುತ್ತಾಳೆ ಎಂದು ಹೇಳಿರುತ್ತಾನೆ ಸತ್ಯಾಸತ್ಯತೆಗಳು ಇನ್ನು ಪೋಲಿಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.

ಬಂದಿತ ವೃದ್ದನು ಕೊಲೆ ಸಾಕ್ಷಿಗೆ ಪ್ರಯತ್ನಿಸಿದ್ದಾನೆ ಎಂಬ ಅಂಶವನ್ನು ಬಾಯಿಬಿಟ್ಟಿದ್ದಾನೆ ಎಂಬ ಅಂಶ ತಿಳಿದು ಬಂದಿದೆ

ಜಿಲ್ಲಾ ಪೋಲಿಸ್ ವರಿಷ್ಟಾದಿಕಾರಿ ಸುಮನ್ ಡಿ ಪೆನ್ನೆಕರ್ ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ಬದ್ರಿನಾಥ ಡಿ ವೈ ಎಸ್ ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶದಲ್ಲಿ ಸಿಪಿಐ ಮಹಾಬಲೆಶ್ವರ ಎಸ್ ಐ ಭರತ್ ಕುಮಾರ್ ಮತ್ತು ಎಸ್ ಐ ರತ್ನ ಅವರು ತನಿಖೆಯನ್ನು ಕೈಗೊಂಡಿದ್ದಾರೆ

WhatsApp
Facebook
Telegram
error: Content is protected !!
Scroll to Top