ಭಟ್ಕಳ ತಾಲೂಕ ಜಾಲಿ ಪಟ್ಟಣ ಪಂಚಾಯತ್‌ ಸದಸ್ಯರಿಂದ ಸಹಾಯಕ ಆಯುಕ್ತರಿಗೆ ಮನವಿ

ಬ್ರಹ್ಮಶ್ರೀನಾರಾಯಣ ಗುರು ವಸತಿ ಶಾಲೆ ವೆಂಕಟಾಪುರ ಕಂಡೆಕೊಡ್ಲು ಮಜಿರೆಯಲ್ಲಿ ಪ್ರಾರಂಬಿಸುವಂತೆ ಮನವಿ

ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಮಂಜುರಾದ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆ ಕಟ್ಟಡವನ್ನು ವೆಂಕಟಾಪುರ ಗ್ರಾಮದ ಕಂಡೆಕೊಡ್ಲು ಮಜಿರೆಯಲ್ಲಿ ಪ್ರಾರಂಬಿಸುವ ಕುರಿತು ಜಾಲಿ ಪಟ್ಟಣ ಪಂಚಾಯತ್‌ ಸದಸ್ಯರು ತಾಲೂಕ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು .

ಮನವಿಯಲ್ಲಿ ಜಾಲಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಹಾರ್ನಗದ್ದೆ ಮಜಿರೆಯಲ್ಲಿ ಈಗಾಗಲೆ ಪದವಿ ಕಾಲೇಜಿಗೆ ಸ್ಥಳ ಮಂಜುರಾಗಿ ಕಾಮಗಾರಿ ಪ್ರಾರಂಬವಾಗಿದೆ . ಹೀಗಿರುವಾಗ ಪುನಃ ಜಾಲಿ ಜಾಲಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಜಾಲಿ ಬಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆ ಮಂಜುರಾದ ಕಟ್ಟಡ ನಿರ್ಮಿಸುವ ಬಗ್ಗೆ ಅನುಮಾನ ಇದ್ದು ಒಂದೊಮ್ಮೆ ಈ ಶಾಲಾ ಕಾಲೇಜುಗಳು ಪ್ರಾರಂಬವಾದಲ್ಲಿ ಪಟ್ಟಣದಿಂದ ಅಂದಾಜು ೭ ಕಿ ಮಿ ದೂರದ ಪ್ರದೇಶವಾಗುತ್ತದೆ ಮತ್ತು ಶಾಲಾ ಮಕ್ಕಳಿಗೆ ಮತ್ತು ಪಾಲಕರಿಗೆ ಭಟ್ಕಳ ಬಸ್‌ ನಿಲ್ದಾಣಕ್ಕೆ ಬಂದು ಪುನಃ ಬೇರೆ ಬಸ್ಸಿನಲ್ಲಿ ಅಥವಾ ಬೇರೆ ವಾಹನದಲ್ಲಿ ೭ ಕಿ ಮಿ ದೂರದ ಶಾಲಾ ಕಾಲೇಜಿಗೆ ಹೋಗಬೇಕಾಗುತ್ತದೆ ಹೀಗಾಗಿ ಈ ಪ್ರದೇಶ ಶಾಲಾ ಮಕ್ಕಳಿಗೆ ಮತ್ತು ವಿಧ್ಯಾರ್ಥಿಗಳಿಗೆ ಯೋಗ್ಯವಾಗಿರುವುದಿಲ್ಲಾ .

ಆದ್ದರಿಂದ ಮಂಜುರಾದ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಗೆ ಬೇಕಾದ ಕ್ಷೇತ್ರ ೬-೦೦–೦೦ ಜಮೀನು ಬಸ್ಸ್‌ ನಿಲ್ದಾಣದಿಂದ ಕೆವಲ 1 ಕೀಲೋ ಮೀಟರ್‌ ದೂರದ ಪೋಲಿಸ್‌ ಮೈದಾನದ ಕೆಳಗೆ ಇರುವ ವೆಂಕಾಟಪುರ ಗ್ರಾಮದ ಹಾಡಿ ನಂ 98 ಕಾಲಿ ಇದ್ದು ಈ ಜಾಗದಲ್ಲಿ ಈ ವಸತಿ ಶಾಲೆ ಪ್ರಾರಂಬ ಮಾಡಿದಲ್ಲಿ ಈ ಪ್ರದೇಶದ ಮಕ್ಕಳಿಗೆ ಪಾಲಕರುಗಳಿಗೆ ಅನೂಕೂಲವಾಗುತ್ತದೆ

ಆದ್ದರಿಂದ ವಿಧ್ಯಾರ್ಥಿಗಳ ಹಿತದ್ರಷ್ಟಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವಸತಿಶಾಲೆಯನ್ನು ವೆಂಕಾಟಾಪುರ ಕಂಡೆಕೊಡ್ಲು ಹಾಡಿ ನಂ 98 ರಲ್ಲಿ ಪ್ರಾರಂಬಿಸಲು ಅವಶ್ಯಕ ಕ್ರಮ ಕೈಗೊಳ್ಳುವ ಬಗ್ಗೆ ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಬದಲ್ಲಿ ಶೈನಾ ಶೇಕ್‌ ಮತ್ತು ಜಾಲಿ ಪಟ್ಟಣ ಪಂಚಾಯತ್‌ ಸದಸ್ಯರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top