ಭಟ್ಕಳ ತಾಲೂಕಿನ ತಲಾಂದನಲ್ಲಿ ಅಪರಿಚಿತ ಮಹಿಳಾ ಶವ ಪತ್ತೆ

ಅತ್ಯಾಚಾರಮಾಡಿ ಕೊಲೆಗೈದಿರುವ ಶಂಕೆ

ಭಟ್ಕಳ ತಾಲೂಕ ತಲಾಂದ ಗುಡದಲ್ಲಿ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅತ್ಯಾಚಾರಗೈದು ಕೊಲೆ ಮಾಡಿರುವ ಶಂಕೆ ಉಂಟಾಗಿದೆ .

ಭಟ್ಕಳದ ಮುಟ್ಟಳ್ಳಿ ಗ್ರಾ.ಪಂ ತಲಾಂದ ಕೊಲ್ಲಿಮುಲ್ಲಿ ಗುಡ್ಡ ಪ್ರದೇಶದಲ್ಲಿ  ಮಹಿಳೆ ಶವ ಪತ್ತೆ ಕೊಳೆತ ಸ್ಥಿತಿಯಲ್ಲಿರುವ ಅಂದಾಜು 38-40 ವರ್ಷದ ಮಹಿಳೆ ಶವ ಮಾಲ್ಕಿ ಜಾಗದಲ್ಲಿ ಪತ್ತೆಯಾಗಿದೆ ಹೊಲಕ್ಕೆ ಸೊಪ್ಪು ತರಲು ಹೊದ ಮಹಿಳೆಯರು ತಲಾಂದ್‌ ಗುಡ್ಡದಲ್ಲಿ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿರುವುದನ್ನು ಗ್ರಾಮಸ್ಥರಿಗೆ ಮಾಹಿತಿ ನೀಡಿದರು ಸುದ್ದಿ ತಿಳಿದ ಪೊಲಿಸ್‌ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ ಮಹಿಳೆಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ
ಡಿ.ವೈ.ಎಸ್.ಪಿ ಕೆ.ಯು ಬೆಳ್ಳಿಯಪ್ಪ, ಸಿಪಿಐ ಮಹಾಬಲೇಶ್ವರ ನಾಯ್ಕ, ಪಿ ಎಸೈ ರತ್ನ ಕೆ ಸ್ಥಳಕ್ಕೆ ತೆರಳಿ ತನಿಖೆಯನ್ನು ಕೈಗೊಂಡಿದ್ದಾರೆ ಮಹಿಳೆಯ ಗುರುತು ಪತ್ತೆ ಪೋಲಿಸ್‌ ತನಿಖೆಯಿಂದ ತಿಳಿದು ಬರಬೇಕಾಗಿದೆ

WhatsApp
Facebook
Telegram
error: Content is protected !!
Scroll to Top