ಬೆಳ್ಕೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಸಹಕಾರಿ ಸೌದದ ಲೋಕಾರ್ಪಣೆಗೆ ಕ್ಷಣಗಣನೆ

ನಾಮದಾರಿ ಕುಲಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳ ಅಮೃತ ಹಸ್ತದಿಂದ ಸಹಕಾರಿ ಸೌದ ಲೋಕಾರ್ಪಣೆ

ಭಟ್ಕಳ: ತಾಲೂಕಿನ ಬೆಳ್ಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ನೂತನ ಕಟ್ಟಡ ಸಹಕಾರಿ ಸೌದದ ಉದ್ಗಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಸಲಕ ತಯಾರಿಗಳು ವಿಜ್ರಂಬಣೆಯಿಂದ ನಡೆಸಲಾಗುತ್ತಿದೆ

ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ಹೆಸರೇ ಹೇಳುವಂತೆ ಈ ಸಂಸ್ಥೆ ಸಹಕಾರ ಮನೊಬಾವದಿಂದ ತಲೆ ಎತ್ತಿರುವ ಸಂಸ್ಥೆ ಈ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘವಾಗಿದೆ. ಈ ಸಂಘವು 28/01 1952 ರಲ್ಲಿ ಬೆಳ್ಕೆ ಗ್ರೂಪ್‌ ಸೇವಾ ಸಹಕಾರಿ ಸಂಘ ನಿ. ಬೆಳಕೆ ತಾಲೂಕ ಭಟ್ಕಳ ಎಂಬ ಹೆಸರಿನೊಂದಿಗೆ ದಿವಂಗತ ಕ್ರಷ್ಣಪ್ಪ ವೆಂಕಟರಮಣ ನಾಯ್ಕ ಅಬ್ಬಿತ್ಲು ಎಂಬವರ ಅಧ್ಯಕ್ಷತೆಯೊಂದಿಗೆ ಪ್ರಾರಂಬವಾಯಿತು ಪ್ರಥಮವಾಗಿ ಸಂಘದ ಕಛೇರಿ ಬೆಳಕೆ ಅಬ್ಬಿತ್ಲಇನ ಬಾಡಿಗೆ ಕಟ್ಟಡ ವೊಂದರಲ್ಲಿ ಕಾರ್ಯಾರಂಬ ಪ್ರಾರಂಬಿಸಿದ್ದು ನಂತರ ಸೊಡಿಗದ್ದೆ ಮಹಾಸತಿ ದೇವಸ್ಥಾನದ ಪಕ್ಕದ ಭಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತದೆ ನಂತರದ ದಿನಗಳಲ್ಲಿ ಅಂದರೆ ಕರ್ನಾಟಕ ಸಹಕಾರ ಸಂಘಗಳ 1959 ರ ಸಮಗ್ರ ಕಾಯಿದೆ ಮತ್ತು ನಿಯಮಾವಳಿಗಳು ಜಾರಿಗೆ ಬಂದ ಹಿನ್ನೆಲೆಯಲ್ಲಿ ಸಂಘವು ಬೆಳಕೆ ಗ್ರೂಪ್‌ ಸೇವಾ ಸಹಕಾರಿ ಸಂಘ ನಿ ಬೆಳಕೆ ಎಂಬ ಹೆಸರಿನೊಂದಿಗೆ ಪುನರ್‌ ರಚನೆಗೊಂಡಿತು ನಂತರ ಭಾರತಿಯ ರಿಜರ್ವ ಬ್ಯಾಂಕಿನ ಕ್ರಷೀ ಪತ್ತಿನ ಪುನರ್ಘಟನೆಯ ಯೋಜನೆ ಅನ್ವಯ ಸಂಘವು 1976 77 ನೇ ಸಾಲಿನಲ್ಲಿ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ನಿ ಬೆಳಕೆ ಎಂಬ ಹೆಸರಿನಲ್ಲಿ ಪುನರ್‌ ನಾಮಕರಣದೊಂದಿಗೆ ಕಾರ್ಯಾರಂಭ ಮಾಡಿತು ಈ ಸಂದರ್ಬದಲ್ಲಿ ಎಮ್‌ ಎಸ್‌ ನಾಯ್ಕ ಅಧ್ಯಕ್ಷತೆಯ ಸಂದರ್ಬದಲ್ಲಿ ಬೇಳ್ಕೆಯಲ್ಲಿ ಅಂದರೆ ಈಗಿನ ಹಳೆಯ ಕಟ್ಟಡಕ್ಕೆ ಅಂದು ಅಡಿಗಲು ಹಾಕಲಾಯಿತು ಈ ಸಂಘಕ್ಕೆ ದಿವಂಗತ ಎಮ್‌ ಎಸ್‌ ನಾಯ್ಕ ಸೇವೆ ಅಭೂತ ಪೂರ್ವ ಎಂದು ಈ ಸಂದರ್ಬದಲ್ಲಿ ಹೇಳಬೇಕಾಗುತ್ತದೆ ಸಂಘಕ್ಕೆ ಅನೇಕ ದಿಗ್ಗಜರು ಅಧ್ಯಕ್ಷರಾಗಿ ಹೋಗಿರುತ್ತಾರೆ ಎಮ್‌ ಎಸ್‌ ನಾಯ್ಕ ಲಚ್ಮಯ್ಯ ನಾಯ್ಕ ಶೇಕರ್‌ ಎಲ್‌ ನಾಯ್ಕ ಹೀಗೆ ಅನೇಕ ದಿಗ್ಗಜರುಗಳು ಸಂಘದ ಅಭಿವೃದ್ದಿಗೆ ಶ್ರಮಿಸಿದ್ದರು

ಸಧ್ಯ ಅಂದರೆ ಈಗಿನ ಸಂಘದ ಅಧ್ಯಕ್ಷರಾದ ಸಹಕಾರಿ ದುರಿಣರಾದ ಮಂಜುನಾಥ ಲಚ್ಮಯ್ಯ ನಾಯ್ಕ ಗರ್ಡಿತ್ಲು ಇವರು ಕಳೆದ 14 ವರ್ಷಗಳಿಂದ ನಿರಂತರ ಸಂಘದ ಆಡಳಿತ ಮಂಡಳಿಯಲ್ಲಿದ್ದು ಇವರು ಕಳೆದ 11 ವರ್ಷಗಳಿಂದ ನಿರಂತರವಾಗಿ ಸಂಘದ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಸೇವೆಯನ್ನು ಸಲ್ಲಿಸುತ್ತ ಬಂದಿದ್ದಾರೆ . ಇವರ ಅಧ್ಯಕ್ಷತೆಯ ಅವದಿಯಲ್ಲಿ ಸಘದ ಸರ್ವತೋಮುಖ ಅಭಿವೃದ್ದಿ ಆಗಿದ್ದು ಇವರು ಸರಕಾರಿ ಮನೋಭಾವನೆಗೆ ಹೇಳಿ ಮಾಡಿಸಿದ ವ್ಯಕ್ತಿತ್ವದವಾರಾಗಿದ್ದಾರೆ

ಈ ಸಂದರ್ಬದಲ್ಲಿ ಈ ಸಂಘಕ್ಕಾಗಿ ದುಡಿಯುತ್ತಿರುವ ಸಂಘದ ಕಾರ್ಯನಿರ್ವಹಣಾಧಿಕಾರಿ ಅಣ್ಣಪ್ಪ ನಾಯ್ಕ ಅವರನ್ನು ನೆನಪು ಮಾಡಿಕೊಳ್ಳದಿದ್ದಲ್ಲಿ ತಪ್ಪಾಗುತ್ತದೆ ಇವರು ಶಿಸ್ತಿನ ಮನುಷ್ಯ ಭ್ಯಾಂಕ್‌ ಸಹಕಾರಿ ಸಂಘದ ಲೆಕ್ಕಾಚಾರಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ ಸಂಘದಲ್ಲಿನ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಗಳನ್ನು ಎಲ್ಲರನ್ನು ಸಮದೂಗಿಸಿಕೊಂಡು ಸಂಸ್ಥೆಯ ಅಭಿವೃದ್ದಿಗೆ ಹಗಲಿರುಳು ಶ್ರಮೀಸಿದ ವ್ಯಕ್ತಿಗಳ ಸಾಲಿನಲ್ಲಿ ಅಣ್ಣಪ್ಪ ನಾಯ್ಕ ಅವರು ನಿಲ್ಲುತ್ತಾರೆ ಸಂಘದ ಆಡಳಿತ ಕಮೀಟಿ ಸಿಬ್ಬಂದಿವರ್ಗ ಸಾರ್ವಜನಿಕರು ಗ್ರಾಹಕರ ಸಹಕಾರ ಮನೋಭಾವನೆ ಕಾರಣ ಇಂದಿ ಬೇಳ್ಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ಅಭೀವೃದ್ದಿಯ ತುತ್ತ ತುದಿಯನ್ನು ತಲುಪಿದೆ

ಬೇಳ್ಕೆ ಗ್ರಾಮೀಣ ವ್ಯವಸಾಯ ಸೇವಾಸಹಕಾರಿ ಸಂಘದ ನೂತನ ಕಟ್ಟ ಸಹಕಾರ ಸೌದದ ಲೋಕಾರ್ಪಣೆಗೆ ಕ್ಷಣಗಣನೆ ನಡೆಯುತ್ತಿದ್ದು ಇಂದು ಅಂದರೆ ಶನಿವಾರದಿಂದಲೆ ದೇವತಾ ಪೂಜಾ ಕೈಂಕರ್ಯಗಳು ನಡೆಸಲಾಗಿದ್ದು ನಾಳೆ ಅಂದರೆ ಮೇ 15 ರ ಬೆಳಿಗ್ಗೆ ನಾಮದಾರಿ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಅಮೃತಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ ಸಾರ್ಜನಿಕರು ಹಾಗು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಚೆಂದಗಾಣಿಸಿಕೊಡಬೇಕು ಎಂದು ಬೇಳ್ಕೆ ಸಹಕಾರಿ ಸಂಘದ ಆಡಳಿತ ಕಮೀಟಿಯ ಅಧ್ಯಕ್ಷರು ಅಧಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ

WhatsApp
Facebook
Telegram
error: Content is protected !!
Scroll to Top