ಕಾನೂನುನ ಬಾಹಿರ ನಡೆದ 24 ಸಿಬ್ಬಂದಿ ನೇಮಕಾತಿ ಹಾಗು ಆಡಳಿತ ಮಂಡಳಿ ವಜಾಗೊಳಿಸುವಂತೆ ಹೈಕೊರ್ಟ ಆದೇಶವಿದ್ದರು 6 ನೇ ವೇತನ ನೀಡಲು ಮುಂದಾದ ಪಿ ಎಲ್‌ ಡಿ ಬ್ಯಾಂಕ್‌ ?

ಪಿ ಎಲ್‌ ಡಿ ಭ್ಯಾಂಕ್‌ ಸಿಬ್ಬಂದಿ 6ನೇ ವೇತನ ನಿಲ್ಲಿಸುವ ಆದೇಶ ನೀಡಿ ಸಮಂಜಸ ದಾಖಲೆ ಒದಗಿಸುವಂತೆ ಕೇಳಿದ ಬೆಳಗಾವಿಯ ಸಹಕಾರಿ ಸಂಘಗಳ ಸಂಯುಕ್ತ ನಿಬಂದಕರು

ಭಟ್ಕಳ : ಪಿ ಎಲ್‌ ಡಿ ಭ್ಯಾಂಕನಲ್ಲಿ ಕಾನೂನು ಭಾಹಿರ ಸಿಬ್ಬಂದಿ ನೇಮಕಾತಿ ಹಾಗು ಆಡಳಿತ ಮಂಡಳಿಯನ್ನು ವಜಾ ಮಾಡುವಂತೆ ರಾಜ್ಯ ಉಚ್ಚನ್ಯಾಯಾಲಯ ಆದೇಶ ನೀಡಿದ್ದು ಆದರೂ ಕೂಡ ಪಿ ಎಲ್‌ ಡಿ ಬ್ಯಾಂಕ್‌ ಆಡಳಿತ ಮಂಡಳಿ ಹಾಗು ಪ್ರಧಾನ ವ್ಯವಸ್ಥಾಪಕರು ಕಾನೂನು ಭಾಹಿರವಾಗಿ ನೇಮಕಗೊಂಡ 24 ಸಿಬ್ಬಂದಿಗಳಿಗೆ 6ನೇ ವೇತನ ನೀಡುತ್ತಿರುವುದನ್ನು ನಿಲ್ಲಿಸಿ ಈ ಬಗ್ಗೆ ಸೂಕ್ತ ದಾಖಲೆ ಬದಗಿಸುವಂತೆ ಬೆಳಗಾವಿಯ ಸಹಕಾರಿ ಸಂಘಗಳ ಸಂಯುಕ್ತ ನಿಬಂದಕರು ಸೂಚನೆ ನಿಡಿರುವ ಘಟನೆ ವರದಿಯಾಗಿದೆ

ಭಟ್ಕಳ ತಾಲೂಕಿನ ಪಿ ಎಲ್‌ ಡಿ ಭ್ಯಾಂಕ್‌ ಯಾವಾಗಲು ಒಂದಿಲ್ಲೊಂದು ವಿಷಯವಾಗಿ ವಿವಾದವನ್ನು ಮಾಡಿಕೊಳ್ಳುತ್ತಿದ್ದು ಈಗ ಈ ಪಿ ಎಲ್‌ ಡಿ ಭ್ಯಾಂಕ್‌ ಪುನಃ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ ಈ ಹಿಂದೆ ಶಂಕರ್‌ ನಾಯ್ಕ ಪಿ ಎಲ್‌ ಡಿ ಬ್ಯಾಂಕಿನಲ್ಲಿ ಕಾನೂನು ಭಾಹಿರವಾಗಿ 24 ಸಿಬ್ಬಂದಿಯನ್ನು ನೇಮಿಸಲಾಗಿದೆ. ಎಂದು ಅರ್ಜಿ ಸಲ್ಲಿಸಿದ್ದರು ಕಾರಣ ಈ ಬಗ್ಗೆ ಕುಲಂಕೂಶವಾಗಿ ಪರಿಶೀಲಿಸಿ ನೇಮಕಾತಿಯನ್ನು ಅಸಿಂದು ಎಂದು ಜಿಲ್ಲಾ ಸಹಾಯಕ ನಿಬಂದಕರು ಆದೇಶವನ್ನು ಹೊರಡಿಸಿದ್ದರು ಈ ಆದೇಶವನ್ನು ಜಂಟಿ ನಿಬಂದಕರ ನ್ಯಾಯಾಲಯದಲ್ಲಿ ಪ್ರಶ್ನೀಸಲಾಗಿತ್ತು ಆದರೆ ನ್ಯಾಯಾಲಯ ಅಸಿಂದು ಆದೇಶವನ್ನು ಎತ್ತಿ ಹಿಡಿದಿತ್ತು ಇದರ ವಿರುದ್ದ ಭಟ್ಕಳ ಪಿ ಎಲ್‌ ಡಿ ಭ್ಯಾಂಕ್‌ ಅಧ್ಯಕ್ಷ ಶಾಸಕ ಸುನಿಲ್‌ ನಾಯ್ಕ ಅವರ ಆಡಳಿತ ಮಂಡಳಿ ಹೈಕೊರ್ಟ ಮೆಟ್ಟಿಲನ್ನು ಎರಿದ್ದರು ಇದೀಗ ಹೈಕೊರ್ಟ ಕೂಡಾ ಸುನಿಲ್‌ ನಾಯ್ಕ ಅಧ್ಯಕ್ಷತೆಯ ಪಿ ಎಲ್‌ ಡಿ ಬ್ಯಾಂಕ್‌ ಆಡಳಿತ ಮಂಡಳಿಯ ಮೆಲ್ಮನವಿ ಅರ್ಜಿಯನ್ನು ಸಾರಾಸಗಾಟಾಗಿ ವಜಾಗೊಳಿಸಿತು ಕಾನೂನು ಬಾಹಿರ ನಡೆದ 24 ಸಿಬ್ಬಂದಿ ನೇಮಕಾತಿ ಹಾಗು ಪಿ ಎಲ್‌ ಡಿ ಭ್ಯಾಂಕ್‌ ಆಡಳಿತ ಮಂಡಳಿ ವಜಾಗೊಳಿಸುವಂತೆ ಹೈಕೊರ್ಟ ಆದೇಶವಿದ್ದರು ನಮ್ಮ ಈ ಪಿ ಎಲ್‌ ಭ್ಯಾಂಕ್‌ ಆ ಎಲ್ಲಾ ಸಿಬ್ಬಂದಿಗಳಿಗೆ 6 ನೇ ವೇತನ ನೀಡಲು ಆಡಳೀತ ಮಂಡಳಿ ಮತ್ತು ಪ್ರಧಾನ ವ್ಯವಸ್ಥಾಪಕರು ಮುಂದಾಗಿದ್ದಾರೆ ಇದನ್ನು ತಕ್ಷಣ ತಡೆಯ ಬೇಕು ತಡೆಹಿಡಿಯ ಬೇಕು ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 29(ಸಿ) ಅಡಿ ಯಲ್ಲಿ ಆಡಳಿತ ಮಂಡಳಿ ಸದಸ್ಯರಿಗೆ ನೋಟೀಸ್‌ ಜಾರಿಯಾಗಿ ಎಪ್ರೀಲ್‌ ತಿಂಗಳಿನಲ್ಲಿ ಪ್ರಕರಣ ವಿಚಾರಣೆ ಇರುತ್ತದೆ ಹಿಗಿರುವಾಗಲೆ ಸಿಬ್ಬಂದಿಗಳಿಗೆ 6 ನೇ ವೇತನ ಮಂಜೂರು ಮಾಡುತ್ತಿರುವುದನ್ನು ತಡೆಹಿಡಿಯಲು ವಿನಂತಿಸಿರುತ್ತಾರೆ ಭ್ಯಾಂಕಿನ ಆಡಳಿತ ಮಂಡಳಿ ಮಂಡಳಿ ಸದಸ್ಯರು ಬ್ಯಾಂಕಿಗೆ ಮಂಜುರಾದ ಸಿಬ್ಬಂದಿ ವೃಂದ ಬಲದ ವಿರುದ್ದವಾಗಿ 6 ನೇ ವೇತನವನ್ನು ಮಂಜುರು ಮಾಡುತ್ತಿದ್ದಾರೆ ಹಿಗಿರುವಾಗ ಪ್ರಧಾನ ವ್ಯವಸ್ಥಾಪಕರು ದಿನಾಂಕ 31/05/ 2022 ರಂದು ವಯೋ ನಿವೃತ್ತಿ ಹೊಂದಲಿದ್ದಾರೆ ಆದ್ದರಿಂದ ಅಷ್ಟರೋಳಗಾಗಿ ಈ ಅವ್ಯವವಹಾರ ಮಾಡಲು ಕಾನೂನು ನಭಾಹಿರವಾಗಿ ನೇಮಕವಾದ 24 ಸಿಬ್ಬಂದಿಗಳಿಗೆ 6 ನೇ ವೇತನವನ್ನು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಶಂಕರ್‌ ರಾಮಕ್ರಷ್ಣ ನಾಯ್ಕ ಕಟಗಾರಕೊಪ್ಪ ಇವರು ಮಾಡಿರುತ್ತಾರೆ ಈ ಹಿನ್ನೆಲೆಯಲ್ಲಿ ಬೆಳಗಾವಿಯ ಸಹಕಾರಿ ಸಂಘಗಳ ಸಂಯುಕ್ತ ನಿಬಂದಕರು ಕಾನೂನು ಬಾಹಿರವಾಗಿ ನಡೆದ 24 ಸಿಬ್ಬಂದಿ ನೇಮಕಾತಿ ಹಾಗು ಪಿ ಎಲ್‌ ಡಿ ಭ್ಯಾಂಕ್‌ ಆಡಳಿತ ಮಂಡಳಿ ವಜಾಗೊಳಿಸುವಂತೆ ಹೈಕೊರ್ಟ ಆದೇಶವಿದ್ದರು 24 ಸಿಬ್ಬಂದಿಗಳಿಗೆ 6 ನೆ ವೇತನ ನೀಡುವುದಕ್ಕೆ ಮುಂದಾಗಿರುವುದನ್ನು ಕೂಡಲೆ ತಡೆಹಿಡಿಯುವಂತೆ ಆದೇಶ ನೀಡಿದ್ದಲ್ಲದೆ ತಕರಾರು ಅರ್ಜಿಯಲ್ಲಿರುವ ಅಂಶಗಳ ಬಗ್ಗೆ ಸೂಕ್ತ ವಿವರಣೆಯನ್ನು ಸಮಂಜಸ ದಾಖಲಾತಿಗಳೊಂದಿಗೆ ಒಂದು ವಾರದೊಳಗೆ ಸಲ್ಲಿಸ ಬೇಕು ಎಂಬ ಆದೇಶವನ್ನು ಕೂಡ ನೀಡಿದೆ

ಒಟ್ಟಾರೆ ಗ್ರಾಹಕರ ಶ್ರಮದಿಂದ ತಲೆ ಎತ್ತಿ ನಿಂತಿರುವ ಈ ಪಿ ಎಲ್‌ ಡಿ ಭ್ಯಾಂಕ್‌ ಆಡಳಿತ ಮಂಡಳಿ ದಿನ ಬೆಳಗಾದರೆ ಒಂದಿಲ್ಲೊಂದು ವಿವಾದಗಳನ್ನು ಮಾಡಿಕೊಳ್ಳುತ್ತಿದ್ದು ಸಾರ್ವಜನಿಕರು ಬ್ಯಾಂಕಿನ ಕಡೆ ಆತಂಕದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ

WhatsApp
Facebook
Telegram
error: Content is protected !!
Scroll to Top