ಭಟ್ಕಳದಲ್ಲಿ ರೂಪಾಯಿ 2.25 ಲಕ್ಷ ಮೌಲ್ಯದ ವಿದೇಶಿ ಸಿಗರೇಟ್ ವಶ

ಭಟ್ಕಳ: ತಾಲ್ಲೂಕಿನ ಹೂವಿನ ಚೌಕದ ಸಮೀಪ ಅನಧಿಕೃತವಾಗಿ ವಿದೇಶಿ ವಿನ್ ಕಂಪನಿಯ ಸಿಗರೇಟ್ ಸಂಗ್ರಹಿಸಿಟ್ಟ ಗೋದಾಮಿನ ಮೇಲೆ ನಗರ ಠಾಣೆಯ ಪೆÇಲೀಸರು ದಾಳಿ ನಡೆಸಿ 7 ಬಾಕ್ಸ್ ಸಿಗರೇಟನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ತಾಲೂಕಿನಲ್ಲಿ ವಿದೇಶಿ ಸಿಗರೇಟ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ತಾಲೂಕಿನ ಯುವಕರು ಇದರ ವ್ಯಸನಿಗಳಾಗುತ್ತಿದ್ದಾರೆ. ಈ ಹಿನ್ನೆಲೆ ನಗರ ಠಾಣೆಯ ಸಿ.ಪಿ.ಐ ದಿವಾಕರ ನೇತೃತ್ವದಲ್ಲಿ ತಾಲೂಕಿನ ಚೌಕ್ ಬಜಾರನ ಅಂಗಡಿಯೊಂದರ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ.

ಕೆಲವು ಜಾಗದಲ್ಲಿ ತ್ವರಿತ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡದೆ ಅಸಮರ್ಪಕವಾಗಿರುವ ಸೀಗರೇಟ್ ವಶದಲ್ಲಿಟ್ಟುಕೊಂಡು 18 ವರ್ಷದೊಳಗಿನ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಯನ್ವಯ ನಗರ ಠಾಣೆಯ ಸಿ.ಪಿ.ಐ ದಿವಾಕರ ನೇತೃತ್ವ ತಂಡ ಏಕ ಕಾಲದಲ್ಲಿ ದಾಳಿ ನಡೆಸಿ ಸಂಗ್ರಹಿಸಿಟ್ಟ 2,25,500 ರೂಪಾಯಿ ಮೌಲ್ಯದ ಸುಮಾರು 3500 ವಿದೇಶಿ ಸಿಗರೇಟ್ ಪ್ಯಾಕೇಟುಗಳನ್ನು ವಶಪಡಿಸಿಕೊಂಡು, ಆರೋಪಿ ಬಂದರ ರೋಡ್ 2ನೇ ಕ್ರಾಸ್ ನಿವಾಸಿ ಮರಜುಕ್ ಅಹ್ಮದ್‍ನನ್ನು ಬಂಧಿಸಿದ್ದಾರೆ.

ಕೋಟ್ಪಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪಿಎಸ್‍ಐ ಸುಮಾ ಆಚಾರ್ಯ ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐಗಳಾದ ಸುಮಾ ಆಚಾರ್ಯ, ಹನುಮಂತಪ್ಪ ಕುಡುಗುಂಟಿ, ಯಲ್ಲಪ್ಪ ಮಾಹದರ್ ಹಾಗೂ ಸಿಬ್ಬಂದಿ ನಾರಾಯಣ ನಾಯ್ಕ, ಲೋಕೇಶ ಕಪ್ಪಿ, ನಾಗರಾಜ ಮೊಗೇರ, ಸಿದ್ದು ಕಾಂಬ್ಳೆ, ಸಿದ್ದು, ಈರಣ್ಣ ಪಾಲ್ಗೊಂಡಿದ್ದರು.

WhatsApp
Facebook
Telegram
error: Content is protected !!
Scroll to Top