ಬಿಜೆಪಿ ಆಂತರಿಕ ಸಮಿಕ್ಷೇಯಲ್ಲಿ ಭಟ್ಕಳ ಶಾಸಕ ಸುನಿಲ್ ನಾಯ್ಕ ಕುಮಟಾ ಶಾಸಕ ದಿನಕರ್ ಶೆಟ್ಟಿ ಪೇಲ್

ಜೆಡಿಎಸ್ ಪಕ್ಷದಿಂದ ವಲಸೆ ಬಂದ ಇಬ್ಬರ ಮೇಲು ಮೂಲ ಕಾರ್ಯಕರ್ತರ ಮುನಿಸು. ಭಟ್ಕಳದಲ್ಲಿ ಹೊಸ ಮುಖಕ್ಕಾಗಿ ಬಿಜೆಪಿ ಹುಡುಕಾಟ

ಭಟ್ಕಳ: ರಾಜಕಿಯ ಪಕ್ಷಗಳು ಮಂಬರುವ ವಿಧಾನ ಸಭಾ ಚುನಾವಣೆಗೆ ಪೂರ್ವ ತಯಾರಿ ನಡೆಸುತ್ತಿದ್ದು ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಯ ಹಿನ್ನೆಲೆಯಲ್ಲಿ ಹಾಲಿ ಶಾಸಕರುಗಳ ಬಗ್ಗೆ ಜನಾಬಿಪ್ರಾಯ ಮತ್ತು ಕಾರ್ಯಕರ್ತರ ಅಭಿಪ್ರಾಯದ ಬಗ್ಗೆ ಆಂತರಿಕ‌ ಸಮಿಕ್ಷೇ ನಡೆಸಿದೆ ಸಮಿಕ್ಷೇಯಲ್ಲಿ ಭಟ್ಕಳ ಶಾಸಕ ಸುನಿಲ್ ನಾಯ್ಕ ಕುಮಟಾ ಶಾಸಕ ದಿನಕರ್ ಶೆಟ್ಟಿ ಸಂಪೂರ್ಣ ಪೇಲ್ ಆಗಿರುವುದು ರಾಜಕಿಯ ಮೂಲಗಳಿಂದ ತಿಳಿದುಬಂದಿದೆ.

ವಿಧಾನ ಸಭಾ ಚುನಾವಣೆಗೆ ಇನ್ನು ಹಲವು ತಿಂಗಳುಗಳಿದ್ದು ಈಗಾಗಲೆ ರಾಜಕಿಯ ಪಕ್ಷಗಳು ಭರ್ಜರಿ ತಯಾರಿಗಳನ್ನು ನಡೆಸುತ್ತಿದ್ದು ಚುನಾವಣಾ ತಯಾರಿ ನಡೆಸುವ ಪಕ್ಷಗಳಗಳಲ್ಲಿ ಬಿಜೆಪಿ ಮುಂಚುಣಿಯಲ್ಲಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ . ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 150 ರ ಗುರಿಯನ್ನು ಇಟ್ಟುಕೊಂಡಿದ್ದು ಬಿಜೆಪಿ ಪಕ್ಷದಲ್ಲಿ ಸತ್ವ ಇಲ್ಲದ ಜೊಳ್ಳಿನ ರೂಪದಲ್ಲಿರು ಅಭ್ಯರ್ಥಿಗಳಿಗೆ ಕೋಕ್‌ ಕೊಡುವ ಬಗ್ಗೆ ಬಿಜೆಪಿ ಹೈಕಮಾಂಡ್‌ ಈಗಾಗಲೆ ನಿರ್ಧಾರ ಮಾಡಿದೆ. ಅಲ್ಲದೆ ಅರ್ಹ ಅಭ್ಯರ್ಥಿಗಾಗಿ ಬಿಜೆಪಿ ಆಂತರಿಕ ಸಮಿಕ್ಷಯನ್ನು ಕೂಡಾ ನಡೆಸಿದೆ. ಮತ್ತು ಈ ಸಮಿಕ್ಷೇಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನಿಲ್‌ ನಾಯ್ಕ ಮತ್ತು ಕುಮಟಾ ಹೊನ್ನಾವರ ಕ್ಷೇತ್ರದ ಅಭ್ಯರ್ಥಿ ದಿನಕರ್‌ ಶೆಟ್ಟಿ ಸಂಪೂರ್ಣ ಪೇಲ್‌ ಎಂಬ ಅಂಶ ತಿಳಿದು ಬಂದಿದೆ.

ಈಗಾಗಲೆ ಬಿಜೆಪಿ ಎರಡು ಭಾರಿ ಆಂತರಿಕ ಸಮಿಕ್ಷೇ ನಡೆಸಿದ್ದು. ಗೆದ್ದು ಅಧಿಕಾರಕ್ಕೆ ಬಂದ ಮೇಲೆ, ಈ ಇಬ್ಬರು ಶಾಸಕರು ಸಂಘ ಪರಿವಾರದವರನ್ನು ಸಂಪೂರ್ಣ ನಿರ್ಲಕ್ಷಿದ ಆರೋಪ ಎದುರಿಸುತ್ತಿದ್ದಾರೆ. ಪಕ್ಷ ಸಂಘಟನೆಗೆ ಒತ್ತು ನಿಡದೇ ಇರುವುದು ಸಂಘಟನೆಯಲ್ಲಿ ಶಕ್ತಿ ಇದೆ ಎಂಬುವುದನ್ನು ಮರೆತು, ವಯಕ್ತಿಕವಾಗಿ ವಿಜ್ರಂಬಿಸಿಕೊಳ್ಳುತ್ತಿರುವುದು, ಹಾಗು ಮೂಲ ಕಾರ್ಯಕರ್ತರನ್ನು ಕಡೆಗಣಿಸಿರುವ ಬಗ್ಗೆ ಸಮೀಕ್ಷೇಯಲ್ಲಿ ತಿಳಿದು ಬಂದಿದ್ದು, ಹೈಕಮಾಂಡ ಸಂಪೂರ್ಣ ಅಸಮಾದನದಲ್ಲಿದೆ ಎಂಬುವುದು ತಿಳಿದು ಬಂದಿದೆ. ಪಕ್ಷ ಸಂಘಟನೆಗೆ ಹೆಚ್ಚಿನ ಮಹತ್ವ ನೀಡುವ ಸಂಘ ಪರಿವಾರದವರನ್ನು ನಿರ್ಲಕ್ಷಿಸಿದಲ್ಲದೆ ತಮ್ಮದೆ ಆದ ಒಂದು ಗುಂಪನ್ನು ಕಟ್ಟಿಕೊಂಡು ಆ ಗುಂಪಿಗೆ ಮಾತ್ರ ಮಹತ್ವ ನೀಡುತ್ತಿರುವ ಆರೋಪಗಳನ್ನು ಶಾಸಕರುಗಳಾದ ಸುನಿಲ್‌ ನಾಯ್ಕ ಮತ್ತು ದಿನಕರ್‌ ಶೆಟ್ಟಿ ಅವರ ಮೇಲೆ ಹೊರಿಸಲಾಗಿದ್ದು ಕೇವಲ ಹಿಂದೂತ್ವದ ಅಲೆಯಲ್ಲಿ ಗೆದ್ದಿರುವ ಈ ಇಬ್ಬರು ಶಾಸಕರು ಹಿಂದೂತ್ವವನ್ನು ಮರೆತು ಕೆಲವೆಡೆ ಅಲ್ಪಸಂಖ್ಯಾತರ ಓಲೈಕೆಗೂ ತೊಡಗಿದ್ದಾರೆ ಎಂದು ಹೇಳಲಾಗಿದೆ.

ಭಟ್ಕಳ ಕುಮಟಾ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ನಡೆಸಿದ ಆಂತರಿಕ ಸಮಿಕ್ಷೇಗಳ ಮಾಹಿತಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ ಎಲ್‌ ಸಂತೋಷ ಅವರಿಗೆ ರವಾನೆಯಾಗಿದ್ದು ಎಲ್ಲವನ್ನು ತಿಳಿದುಕೊಂಡಿರುವ ಅವರು ಚುನಾವಣೆಗೆ ಹೊಸ ಮುಖಗಳಿಗೆ ಅವಕಾಶ ನೀಡುವುದು ಬಿಜೆಪಿಯ ಮೊದಲ ಆದ್ಯತೆ ಎಂದು ಹೇಳುತ್ತಿದ್ದಾರೆ . ಒಟ್ಟಾರೆ ಭಟ್ಕಳ ಮತ್ತು ಕುಮಟಾಗಳಲ್ಲಿ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕುತ್ತದೆ ಎಂಬುವುದು ಬಹುತೇಕ ಖಚಿತವಾಗಿದ್ದು ಇನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆ ದೊರೆಯಲಿದೆ ಎಂಬುವುದು ಕಾದು ನೋಡ ಬೇಕಾಗಿದೆ

WhatsApp
Facebook
Telegram
error: Content is protected !!
Scroll to Top