ರಂಜಾನ್‌ ಪ್ರಯುಕ್ತ ಭಟ್ಕಳದಲ್ಲಿ ಶಾಂತಿ ಸಭೆ: ರಂಜಾನ್‌ ಶಾಂತಿಯುತವಾಗಿ ಆಚರಿಸಿ:ತಹಶೀಲ್ದಾರ್‌ ಸುಮಂತ್

ಭಟ್ಕಳ: ರಂಜಾನ್ ಹಬ್ಬದ ಪ್ರಯುಕ್ತ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಹಾಯಕ ಆಯುಕ್ತರ ಕಚೇರಿಯಲ್ಲಿ  ರಂಜಾನ ಹಬ್ಬದ ಶಾಂತಿ ಸಭೆಯನ್ನು ನಡೆಸಲಾಯಿತು. 
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್‌ ಸುಮಂತ್ ಭಟ್ಕಳದಲ್ಲಿ ಪ್ರತಿ ವರ್ಷ ಕೂಡ ಶಾಂತಿ ಯುತವಾಗಿ ರಂಜಾನ್ ಹಬ್ಬ ಆಚರಣೆ ಮಾಡಿಕೊಂಡು ಬರುತಿದ್ದು ಅದರಂತೆ ಈ ವರ್ಷ ಕೂಡ ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಿ ತಾಲೂಕಾಢಳಿತ ಹಾಗೂ ಪೊಲೀಸ ಇಲಾಖೆಗೆ ಸಹಕಾರ ನೀಡಿ ಶಾಂತಿ ಭಂಗ ಮಾಡದಂತೆ ಹಬ್ಬ ಆಚರಣೆ ಮಾಡುವಂತೆ ಮಾನವಿ ಮಾಡಿಕೊಂಡರು 

ನಂತರ ಸಭೆಯಲ್ಲಿ ಉಪಸ್ಥಿತರಿದ್ದ ಕೆ.ಯು ಬೆಳ್ಳಿಯಪ್ಪ ಮಾತನಾಡಿ ರಂಜಾನ್ ಹಬ್ಬದ ದಿನದ ಕಾರ್ಯಕ್ರಮದ ವಿವವರ ಹಾಗೂ ಮಾಹಿತಿ ಪಡೆದುಕೊಳ್ಳಲು ಈ ಸಭೆ ಕರೆಯಲಾಗಿದೆ ಎಂದ ಅವರು.ಬೇರೆ ಬೇರೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆದರು ಭಟ್ಕಳದಂತ ಪ್ರದೇಶದಲ್ಲಿ ಹಿಂದೂ ಮುಸ್ಲಿಂರ ಹಬ್ಬ ಪ್ರತಿ ವರ್ಷ ಶಾಂತಿಯುತವಾಗಿ ನಡೆಯುತ್ತಿದ್ದು ಸದ್ಯ ನಡೆದ ಚನ್ನಪಟ್ಟಣ ಹನುಮಂತ ದೇವಸ್ಥಾನದ ಜಾತ್ರೆ ಉದಾಹರಣೆಯಾಗಿದೆ ಎಂದರು 
ತಂಜೀಂ ಸಂಸ್ಥೆ ಮುಖಂಡ ಇನಾಯತ್ ವುಲ್ಲಾ ಶಾಬಂದ್ರಿ ಮಾತನಾಡಿ  ಕಳೆದ ಬಾರಿ ರಂಜಾನ್ ಹಬ್ಬದ ದಿನ ಬೆಳಿಗ್ಗೆ ಈದ್ಗಾ ಮೈದಾನದಲ್ಲಿ ನಮಾಜ್ ಮಾಡುವ ವೇಳೆ ವಿದ್ಯುತ್ ಕಡಿತಗೊಂಡ ಹಿನ್ನೆಲೆ ನಮಾಜ್ ಮಾಡಲು ಸಮಸ್ಯೆ ಉಂಟಾಗಿ ನಂತರ ಅಲ್ಲಿ ಸೇರಿದ್ದ ಸಾರ್ವಜನಿರು ಭಟ್ಕಳ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿರುವ ಘಟನೆ ನಡೆದಿದ್ದು ಈ ಬಾರಿ ಆ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ ಅವರು ಈದ್ಗಾ ಮೈದಾನದ ಪಕ್ಕದಲ್ಲಿರುವ ಸೋನಾರಾಕೇರಿ ಹಾಗೂ ಆಸರಕೇರಿ ರಸ್ತೆ ಪಕ್ಕದಲ್ಲಿ ಕಸದ ಸಮಸ್ಯೆ ಇದೆ ಅದನ್ನು ಹಬ್ಬದ ದಿನಗೊಳಗಾಗಿ ಸ್ವಚ್ಛ ಪಡಿಸುವಂತೆ ಹೇಳಿದರು 


ಸಭೆಯಲ್ಲಿ ಉಪಸ್ಥಿತರಿದ್ದ ಹೆಸ್ಕಾಂ ಭಟ್ಕಳ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ ಶಿವಾನಂದ ನಾಯ್ಕಮಾತನಾಡಿ ಸ್ವತಃ ನಾವಾಗಿಯೇ ಯಾವುದೇ ಉದ್ದೇಶದಿಂದ ವಿದ್ಯುತ್ ಕಡಿತ ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಹೆಚ್ಚು ವಿದ್ಯುತ್ ನೀಡಿದರೆ ನಮ್ಮ ಇಲಾಖೆಗೆ ಲಾಭ ಹೊರೆತು ಉದ್ದೇಶ ಪೂರ್ವಕವಾಗಿ ವಿದ್ಯುತ್ ಕಡಿತ ಗೊಳಿಸಿದರೆ ನಮ್ಮ ಇಲಾಖೆ ನಷ್ಟವಾಗುತ್ತದೆ. ನಮಗೆ ಕಾರವಾರದಿಂದ ವಿದ್ಯುತ್ ಪಡೆದುಕೊಳ್ಳುವುದರಿಂದ ಕಾರವಾರ ಅಂಕೋಲಾ ಕುಮಟಾ ಶಿರಸಿ ಎಲ್ಲೇ ವಿದ್ಯುತ್ ಸಮಸ್ಯೆಯಾದರೆ ಭಟ್ಕಳದಲ್ಲಿ ವಿದ್ಯುತ್ ಕಡಿತವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟ ಅವರು ಏಪ್ರಿಲ್ ಮೇ ತಿಂಗಳಲ್ಲಿ  ಹೆಚ್ಚಾಗಿ ವಿದ್ಯುತ್ ಬಳಕೆ ಯಾಗುದರಿಂದ ಈ ರೀತಿ ಸಮಸ್ಯೆಯಾಗುತ್ತದೆಯೋ ಹೊರತು ನಾವಾಗಿಯೇ ಉದ್ದೇಶ ಪೂರ್ವಕವಾಗಿ ವಿದ್ಯುತ್ ಕಡಿತಗೊಳಿಸುದ್ದಿಲ್ಲ ಎಂದು ತಿಳುವಳಿಕೆ ಮೂಡಿಸಿದರು 
ಬೈಟ್:ಹೆಸ್ಕಾಂ ಭಟ್ಕಳ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ ಶಿವಾನಂದ ನಾಯ್ಕ 
ಈ ಸಂದರ್ಭದಲ್ಲಿ ನಾಮಧಾರಿ ಸಮಾಜ ಮುಖಂಡ ಎಂ.ಆರ್ ನಾಯ್ಕ. ವೆಂಕಟೇಶ ನಾಯ್ಕ  ಆಸರಕೇರಿ,ಶಾಂತರಾಮ್ಈ ಸಂದರ್ಭದಲ್ಲಿ ಸಿಪಿಐ ರಾಮಚಂದ್ರ ನಾಯಕ,ಪುರಸಭೆ ಅಧ್ಯಕ್ಷ ಪರ್ವೇಜ್ ಖಾಸಿಂ, ಮುನೀರ್, ಸೇರಿ ಇತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top