ಭಟ್ಕಳ ತಾಲೂಕಿನಲ್ಲಿ ಪುನಃ ಸದ್ದು ಮಾಡುತ್ತಿದೆ ಸಾಮಾಜಿಕ ಜಾಲತಾಣದ ನಕಲಿ ಖಾತೆಗಳು

ಕೈ ಚೆಲ್ಲಿ ಕುಳಿತುಕೊಂಡಿದೆಯೇ ಸೈಬರ್‌ ಕ್ರ್ಯೈಮ್‌ ಡಿಪಾರ್ಟಮೆಂಟ್‌ ? ಜಿಲ್ಲಾ ಪೋಲಿಸ್‌ ವರಿಷ್ಟಾಧಿಕಾರಿಗಳೇ ದಯಮಾಡಿ ಇತ್ತ ಗಮನಹರಿಸಿ : ಜನಸಾಮಾನ್ಯರ ಆಗ್ರ

ಭಟ್ಕಳ: ವಿಧಾನ ಸಭಾ ಚುನಾವಣೆಗೆ ಕೆಲವು ತಿಂಗಳುಗಳು ಮಾತ್ರ ಬಾಕಿ ಇದ್ದು ವಿಕ್ರತ ಮನಸ್ಸಿನ ವಿಕ್ರತರು ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಾಧ್ಯಂತ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸ್ರಷ್ಟಿ ಮಾಡಿಕೊಂಡು ನಾಮಧಾರಿ ಸಮಾಜದ ಕುಲಗುರುಗಳು , ಮಾಜಿ ಶಾಸಕ ಮಂಕಾಳ ವೈದ್ಯ ಉದ್ಯಮಿ ಈಶ್ವರ ನಾಯ್ಕ, ಹೀಗೆ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ರಾಜಕಾರಣಿಗಳನ್ನು ಟಾರ್ಗೇಟ್‌ ಮಾಡಿಕೊಂಡು ಕೆಲವು ಪಟ್ಟಬದ್ರ ಹಿತಾಸಕ್ತಿಗಳು ತೇಜೋವದೆಯನ್ನು ಮಾಡುವ ಕೆಲಸಕ್ಕೆ ಕೈ ಹಾಕಿರುವದು ಕಂಡು ಬಂದಿದೆ ಯಾರು ಈ ವಿಕ್ರತರು ಹೀಗೆ ಮಾಡುವುದರಿಂದ ಇವರಿಗಾಗುವ ಲಾಭಗಳೆನು ಇವರಿಗೆ ಪಂಡಿಂಗ್‌ ಮಾಡುತ್ತಿರುವ ಕೈಯಾದರು ಯಾವುದು ತಾಲೂಕಿನಲ್ಲಿ ಇಷ್ಟೇಲ್ಲಾ ನಡೆಯುತ್ತಿದ್ದರು ನಮ್ಮ ಸೈಬರ್ ಕ್ರೈಮ್‌ ಡಿಪಾರ್ಟಮೆಂಟ್‌ ಮಾಡುತ್ತಿರುವುದಾದರು ಏನು? ತಿಳಿದುಕೊಳ್ಳಬೇಕೆ ಬನ್ನಿ ಹಾಗಾದರೆ ಈ ವರದಿಯನ್ನು ನೋಡೆ ಬಿಡೋಣ.

ಇದ್ದ ಮೂವರಲ್ಲಿ ಕದ್ದವರು ಯಾರು ಎಂಬ ಪರಿಸ್ಥಿತಿ ನಮ್ಮ ಭಟ್ಕಳ ತಾಲೂಕಿನಲ್ಲಿ ನಿರ್ಮಾಣವಾಗಿದೆ ಈ ನಕಲಿ ಖಾತೆಗಳ ಸರದಾರ ಯಾರು ಎಂಬ ಮಾಹಿತಿ ನಮ್ಮ ಪೋಲಿಸ್‌ ಇಂಟೆಲಿಜೆನ್ಸಿ ಅವರಿಗೆ ಇಲ್ಲವಾ ಸೈಬರ್‌ ಕ್ರೈಮ್‌ ಡಿಪಾರ್ಟಮೆಂಟ್‌ ಮಾಡುತ್ತಿರುವುದಾದರು ಅಥವಾ ಎಲ್ಲಾ ಗೊತ್ತಿದ್ದು ಎಲ್ಲರೂ ಜಾಣ ಕುರುಡುತನವನ್ನು ತೊರಿಸುತ್ತಿದ್ದಾರಾ ಇದೆಂತಾ ಕೆಟ್ಟ ನೀತಿಗೆಟ್ಟ ರಾಜಕಾರಣ ಸ್ವಾಮಿ ಎಂದು ಸಾಮಾನ್ಯ ಪ್ರಜೆಗಳಿಂದ ಹಿಡಿದು ಪ್ರತಿಯೊಬ್ಬರು ಅಸಹ್ಯವನ್ನು ಪಟ್ಟುಕೊಳ್ಳುತ್ತಿದ್ದಾರೆ

ಈ ನಕಲಿ ಖಾತೆಗಳ ಮೂಲಕ ಈ ವಿಕ್ರತರು ಎಷ್ಟು ನೀಚಮಟ್ಟಕ್ಕಿಳಿದಿದ್ದಾರೆ ಎಂದರೆ ಧಾರ್ಮಿಕ ಗುರು, ಪ್ರಭಾವ ಶಾಲಿ ರಾಜಕಾರಣಿ, ಉಧ್ಯಮಿಗಳು, ಮಾಧ್ಯಮಗಳು, ಎಂಬ ಬೇದಬಾವಗಳಿಲ್ಲದೆ ಅವರ ತೇಜೋವದೆಗಳನ್ನು ನಡೆಸುವುದು ಅವರ ಮನೆಯ ಮಹಿಳೆಯರ ಬಗ್ಗೆ ಇಲ್ಲ ಸಲ್ಲದ ಅವಾಚ್ಯ ಪದಗಳ ಬಳಕೆಯನ್ನು ಮಾಡುವುದು ಹೀಗೆ ಸಮಾಜ ಘಾತಕು ಶಕ್ತಿಗಳಾಗಿ ಪರಿವರ್ತನೆಯಾಗಿ ಸಮಾಜದ ಸ್ವಾಸ್ಥವನ್ನು ಹಾಳುಗೇಡುವ ಕೆಲಸಕ್ಕೆ ಕೈ ಹಾಕುವುದೆ ಇವರ ದಿನನಿತ್ಯದ ಕಸುಬಾಗಿದೆ.

ಇನ್ನು ಹಾಲಿಯಾಗಿ ಉದ್ಯಮಿಗಳು ಬಿಜೆಪಿ ಮುಖಂಡರಾದ ಈಶ್ವರ ನಾಯ್ಕ ಅವರು ಮುಂಬರುವ ವಿಧಾನ ಸಭಾ ಚುನಾವಣೆಯ ಬಿಜೆಪಿಯ ಪ್ರಬಲ ಟಿಕೇಟ್‌ ಆಕಾಂಕ್ಷಿಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ ಆದರೆ ಈ ವಿಕ್ರತ ಮನಸ್ಸಿನ ವಿಕ್ರತರು ಎಷ್ಟು ಜಾಣತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದರೆ ಈಶ್ವರ ನಾಯ್ಕ ಜಿಲ್ಲಾ ಪಂಚಾಯತ್‌ ಟಿಕೆಟ್‌ ಆಕಾಂಕ್ಷಿ ಎಂಬಂತೆ ಬಿಂಬಿಸುತ್ತಾರೆ ಇನ್ನು ಇವರ ವಿಕ್ರತ ಮನಸ್ಥಿತಿ ಎಷ್ಟು ಭಯಾನಕ ಎಂದರೆ ತಾಲೂಕಿನ ಪ್ರತಿಷ್ಟೀತ ನಾಮದಾರಿ ಸಮಾಜ ಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳ ಬಗ್ಗೆಯೆ ಅಮಾನವಿಯವಾಗಿ ಪೊಷ್ಟ ಮಾಡುವುದರ ಮೂಲಕ ಇಡಿ ನಾಮದಾರಿ ಸಮಾಜಕ್ಕೆ ಅವಮಾನ ಮಾಡುವ ದುಸ್ಸಾಹಸ ಮಾಡಿ ಸಮಾಜ ಕಂಟಕರಾಗಿ ಪರಿವರ್ತನೆಯಾಗಿದ್ದಾರೆ

ಹಾಗೆ ಸೈಲಂಟಾಗಿದ್ದ ಸಾಮಾಜಿಕ ಕಾರ್ಯಕರ್ತ ಶಂಕರ್‌ ನಾಯ್ಕ ಚೌತನಿ ಅವರು ಜೆಡಿಎಸ್‌ ಸೆರ್ಪಡೆಯಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹರಡಿದ್ದಾರೆ ಹೀಗೆ ಒಂದೆ ಎರಡೆ ಹೇಳಲು ಹೋದರೆ ಇವರ ಕುಕ್ರತ್ಯ ಸಾಲುಸಾಲೆ ಹೊರಬರುತ್ತದೆ.

ಇಷ್ಟೇಲ್ಲಾ ಮಾಡುವ ವಿಕ್ರತರು ಯಾರು ಅವರಿಗೆ ಅದರಿಂದಾಗುವ ಲಾಭವಾದರು ಏನು ಎಂಬ ಪ್ರಶ್ನೇಯು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದಲ್ಲವೆ ಇದನ್ನು ಮಾಡುವವರು ಯಾವುದೆ ಬ್ರಹ್ಮಾಂಡ ಪಿ ಎಚ್‌ ಡಿ ಮಾಡಿದವರಲ್ಲಾ ಮನೆ ಮಂದಿಯನ್ನು ನೋಡಿಕೊಳ್ಳಲಾಗದ ಕೆಲಸವಿಲ್ಲದ ತಿರುಬೋಕಿಗಳು ಒಂದು ಹೊತ್ತಿನ ಊಟಕ್ಕಾಗಿ ಯಾವುದೊ ರಾಜಕಾರಣಿಗಳ ಮುಂದೆ ಕೈಯೊಡ್ಡುವ ಬಿಕಾರಿಗಳೆಂದರೆ ತಪ್ಪಾಗಲಿಕ್ಕಿಲ್ಲಾ ವೀಕ್ಷಕರೆ ನಮ್ಮ ಶಬ್ದಗಳು ಸ್ವಲ್ಪ ಕಟು ಏನಿಸಿದರು ಇಂತಹ ಮನಸ್ಥಿತಿಯ ವಿಕ್ರತರಿಗೆ ಇದೆ ಸರಿಯಾದ ಶಬ್ದವಲ್ಲವೆ ವೀಕ್ಷಕರೆ ಇಂತ ವಿಕ್ರತರ ಸಮಾಜ ಕಂಟಕ ಕೆಲಸಕ್ಕೆ ಅದ್ಯಾರೋ ದೊಣ್ಣಿ ನಾಯಕರೊಬ್ಬರು ಪಂಡಿಗ್‌ ಮಾಡುತ್ತಿದ್ದಾರೆ ಎಂಬ ಗುಸುಗುಸು ತಾಲೂಕಿನಾಧ್ಯಂತ ಹರಿದಾಡುತ್ತಿದೆ ಇದರಿಂದ ಆ ದೊಣ್ಣೆ ನಾಯಕನಿಗೆ ಆಗುವ ಲಾಭವಾದರು ಏನು ಎಂಬ ಪ್ರಶ್ನೇಯೆ? ರಾಜಕೀಯ ಸ್ವಾಮಿ ರಾಜಕಿಯ ಇವರು ಸಾಮಾಜಿಕ ಜಾಲತಾಣದಲ್ಲಿ ಸಮಾಜ ಗುರುಗಳ, ಪ್ರತಿಷ್ಟೀತ ರಾಜಕಾರಣಿಗಳ, ಮಾಧ್ಯಮಗಳ, ತೇಜೋವದೆಯನ್ನು ಮಾಡುವುದರ ಮೂಲಕ ತಾನು ರಾಜಕಾರಣ ಮಾಡಬಹುದು ಅಧಿಕಾರ ಹಿಡಿಯಬಹುದು ಎಂಬ ಭ್ರಮೆಯಲ್ಲಿದ್ದಂತೆ ಕಾಣುತ್ತದೆ ಇದು ಶುದ್ದ ಮೂರ್ಖತನವಲ್ಲವೆ ಈಗ ನಿಮ್ಮ ಮುಂದೆ ಯಾರಾ ದೊಣ್ಣೆನಾಯಕ ಎಂಬ ಪ್ರಶ್ನೇ ಮೂಡುವುದು ಸ್ವಾಭಾವಿಕ ಅದನ್ನು ನಮ್ಮ ವಾಹಿನಿ ಸದ್ಯದಲೆ ಅನಾವರಣ ಮಾಡುವುದರಲ್ಲಿದೆ.

ಇನ್ನು ತಾಲೂಕಿನಲ್ಲಿ ಇಷ್ಟೇಲ್ಲಾ ಅವ್ಯವಸ್ಥೆ ನಡೆಯುತ್ತಿದ್ದರೆ ನಮ್ಮ ಸೈಬರ್‌ ಕ್ರ್ಯೈಮ್‌ ಡಿಪಾರ್ಟಮೆಂಟ ಪೋಲಿಸ್‌ ಇಂಟೆಲಿಜೇನ್ಸಿ ಗಾಡ ನಿದ್ರೆಯಲ್ಲಿದೆಯೆನೋ ಎಂಬ ಅನುಮಾನ ಮೂಡುವುದು ಮಾತ್ರ ಸುಳ್ಳಲ್ಲಾ ತಾಲೂಕಿನಲ್ಲಿ ಈ ನಕಲಿ ಖಾತೆಗಳ ಮೂಲಕ ದಾರ್ಮಿಕ ಗುರು ಉದ್ಯಮಿಗಳು ರಾಜಕಾರಣಿಗಳು ಸಂವಿಧಾನದ ಐದನೆ ಅಂಗವೆಂದು ಹೇಳಲಾಗುವ ಮಾಧ್ಯಮ ಹೀಗೆ ಒಂದೆ ಏರಡೆ ಎಲ್ಲರ ತೇಜೋವದೆಗಳನ್ನು ಮಾಡಲಾಗಿದೆ. ಈ ನಕಲಿ ಖಾತೆಗಳ ವಿರುದ್ದ ನಾಮದಾರಿ ಸಮಾಜದಿಂದ ಹಿಡಿದು ಮಾಧ್ಯಮಗಳು ರಾಜಕಾರಣಿಗಳು ಕೂಡ ಪೋಲಿಸರಿಗೆ ದೂರನ್ನು ಸಲ್ಲಿಸಿದ್ದಾರೆ ಆದರೆ ಪಲಿತಾಂಶ ಮಾತ್ರ ಶೂನ್ಯ ಇಲಾಖೆ ಮಾಡುತ್ತಿರುವುದಾದರು ಏನು ನಕಲಿ ಖಾತೆಗಳಿಂದ ಅವಘಡಗಳು ಸಂಬವಿಸಲಿ ಎಂದು ಕಾಯುತ್ತ ಕುಳಿತುಕೊಂಡಿದೆಯೆ ಅಧವಾ ಇಲಾಖೆಗಳ ಮೇಲೆ ಯಾವುದಾದರು ಪಟ್ಟಬದ್ರ ಹಿತಾಸಕ್ತಿಗಳಿಂದ ಒತ್ತಡಳೆನಾದರು ಹಾಕಲಾಗಿದೆಯೆ ಇದನ್ನು ಇಲಾಖೆಯೆ ಉತ್ತರಿಸಬೇಕಾಗಿದೆ

ಈ ಹಿಂದೆ ನಮ್ಮ ವಾಹಿನಿಯು ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಇಸ್ಪಿಟ್ ಅಡ್ಡಾದ ಬಗ್ಗೆ ವರದಿ ಮಾಡಿದಾಗ ನಮ್ಮ ಪ್ರಧಾನ ಸಂಪಾದಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು ಆಗ ನಮ್ಮ ಜಿಲ್ಲೆಯ ಪೊಲಿಸ್‌ ವರಿಷ್ಟಾಧಿಕಾರಿಗಳಾದ ಸುಮನ್‌ ಡಿ ಪೆನ್ನೆಕರ್‌ ಅವರ ಕಟ್ಟುನಿಟ್ಟಿನ ಕ್ರಮ ಜಿಲ್ಲೆಯಾಧ್ಯಂತ ಪ್ರಶಂಸೆಗೆ ಕಾರಣವಾಗಿತ್ತು ಒಬ್ಬ ಮಹಿಳಾ ಅಧಿಕಾರಿಗಳ ನಡೆ ಪುರುಷ ಅಧಿಕಾರಿಗಳನ್ನು ನಾಚಿಸುವಂತಿತ್ತು ಅಂತಹ ದಿಟ್ಟ ಕ್ರಮಕ್ಕೆ ಮುಂದಾಗಿದ್ದರು ಜಿಲ್ಲೆಯಾಧ್ಯಂತ ಮಟ್ಕಾ ಅನದಿಕ್ರತ ಇಸ್ಪೀಟ್‌ ಅಡ್ಡಾಗಳು ಸಂಪೂರ್ಣ ಮುಚ್ಚಲ್ಪಟ್ಟಿತು ಅಲ್ಲದೆ ಈಗಲು ಕೂಡ ಅಪರಾದಿಗಳು ಅನದಿಕ್ರತ ದಂದೆಕೋರರು ಸುಮನ್ ಡಿ ಪೆನ್ನೆಕರ್‌ ಎಂದರೆ ನಡುಗುವಂತಹ ಸ್ಥಿತಿಗೆ ತಲುಪಿದ್ದಾರೆ ತಾವು ಅಧಿಕಾರ ವಹಿಸಿಕೊಂಡ ಕೇವಲ ನಾಲ್ಕ ಐದು ತಿಂಗಳಲ್ಲೆ ಜಿಲ್ಲೆಯಲ್ಲಿನ ಅಪರಾದಿ ಚಟುವಟಿಕೆಗೆ ಬ್ರೇಕ್‌ ಹಾಕಿ ಅಪರಾದಿಗಳು ದಂದೆಕೋರರು ನಿದ್ದೆಯಲ್ಲೂ ಬೆಚ್ಚಿಬೀಳುವಂತೆ ಮಾಡಿದ್ದಾರೆ ಈ ನಮ್ಮ ಈ ಪೋಲಿಸ್‌ ವರಿಷ್ಟಾಧಿಕಾರಿ ಸುಮನ್‌ ಡಿ ಪೆನ್ನೆಕರ್‌ ಆದರೆ ಈಗ ಇವರು ನಮ್ಮ ಭಟ್ಕಳ ತಾಲೂಕಿನತ್ತ ಗಮನ ಹರಿಸ ಬೇಕಾದ ಅನಿವಾರ್ಯತೆ ಬಂದೋದಗಿದೆ ಕಾರಣ ಈ ಸಮಾಜ ಘಾತುಕ ಮನಸ್ತಿತಿಯ ವಿಕ್ರತರು ಸಾಮಾಜಿಕ ಜಾಲತಾಣದ ನಕಲಿ ಖಾತೆಯ ಮೂಲಕ ನಡೆಸುವ ಸಮಾಜ ಘಾತುಕ ಚಟುವಟಿಕೆ ಆದರಿಂದ ಸಾರ್ವಜನಿಕ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ನಮ್ಮ ಕರಾವಳಿ ಸಮಾಚಾರವು ಈ ಸಮಾಜ ಘಾತುಕರ ಹುಟ್ಟಡಗಿಸಬೇಕು ಎಂದು ಸಾರ್ವಜನಿಕರ ಪರವಾಗಿ ಜಿಲ್ಲೆಯ ಪೋಲಿಸ್ ವರಿಷ್ಟಾಧಿಕಾರಿ ಸುಮನ್ ಡಿ ಪೆನ್ನೆಕರ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದೆ

WhatsApp
Facebook
Telegram
error: Content is protected !!
Scroll to Top