ಭಟ್ಕಳದ ಪ್ರತಿಷ್ಟಿತ ಬೀನಾ ವೈಧ್ಯ ವಿಧ್ಯಾಸಂಸ್ಥೆಯಲ್ಲಿ ವಿಶ್ವ ಭೂ ದಿನಾಚರಣೆ

ಭಟ್ಕಳ: ತಾಲೂಕು ಕಾನೂನು ಸೇವಾ ಸಮಿತಿ ಭಟ್ಕಳ, ವಕೀಲರ ಸಂಘ ಅಭಿಯೋಜನೆ ಇಲಾಖೆ, ಅರಣ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಭೂಮಿ ದಿನಾಚರಣೆಯನ್ನು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗಿಡ ನಡೆಸುವುದರ ಮೂಲಕ ಆಚರಿಸಲಾಯಿತು.


ಸಿವಿಲ್ ನ್ಯಾಯಾಧೀಶರಾದ ಫವ್ವಾಜ್ ಪಿ.ಎ. ಕಾರ್ಯಕ್ರಮವನ್ನು ಉಧ್ಘಾಟಿಸಿ ವಿಶ್ವ ಭೂ ದಿನಾಚರಣೆಯ ಶುಭಾಶಯವನ್ನು ಕೋರುತ್ತಾ ಮಾತನಾಡಿ, ಸಂಸ್ಥೆಗೆ ಪರಿಸರ ಮತ್ತು ಅದರ ಸರಂಕ್ಷಣೆಯ ಬಗ್ಗೆ ಇರುವ ಕಾಳಜಿಯನ್ನು ಮತ್ತು ಜನಸಾಮಾನ್ಯರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರದ ಮಹತ್ವದ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ಸಂಸ್ಥೆಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಪ್ರತಿಷ್ಟೀತ ಬೀನಾ ವೈಧ್ಯ ವಿಧ್ಯಾ ಸಂಸ್ಥೆ ಟ್ರಸ್ಟಿ, ಪುಷ್ಪಲತಾ ಎಮ್ ವೈದ್ಯ, ಶ್ರೀ ಎಮ್.ಎಲ್.ನಾಯ್ಕ ಅಧ್ಯಕ್ಷರು, ವಕೀಲರ ಸಂಘ ಭಟ್ಕಳ, ಶ್ರೀ ಜೆ.ಡಿ.ಭಟ್, ಕಾರ್ಯದರ್ಶಿ ವಕೀಲರ ಸಂಘ ಭಟ್ಕಳ, ಶ್ರೀ ಎಸ್.ಕೆ.ನಾಯ್ಕ ಉಪಾಧ್ಯಕ್ಷರು, ವಕೀಲರ ಸಂಘ ಭಟ್ಕಳ, ನೋಟರಿ ವಕೀಲರು ಶ್ರೀ ಆರ್.ಆರ್ ಶ್ರೇಷ್ಠಿ ಮತ್ತು ಶ್ರೀ ಮಹೇಶ ಆರ್ ನಾಯ್ಕ. ಶ್ರೀ ಶರತ್ ಶೆಟ್ಟಿ ವಲಯ ಅರಣ್ಯಾಧಿಕಾರಿ ಭಟ್ಕಳ, ಅರಣ್ಯ ಇಲಾಖೆಯ ಹಲವಾರು ಸಿಬ್ಬಂದಿ ವರ್ಗದವರು ಹಾಗೂ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು , ವಿದ್ಯಾರ್ಥಿಗಳು ಹಾಜರಿದ್ದು ಈ ಕಾರ್ಯ ಕ್ರಮವನ್ನು ಯಶಸ್ವಿಯಾಗಿ ನೇರವೇರಿಸಿದರು.

WhatsApp
Facebook
Telegram
error: Content is protected !!
Scroll to Top