ಭಟ್ಕಳ ತಾಲೂಕಿನಲ್ಲಿ ಹೊಸದಾಗಿ ಕೈಗಾರಿಕಾ ಘಟಕ ಸ್ಥಾಪಿಸಬೇಕೆಂದು ಆಗ್ರಹಿಸಿ ತಾಲೂಕಿನ ಯುವಕ-ಯುವತಿಯರಿಂದ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ:ತಾಲೂಕಿನಲ್ಲಿ ಅತಿ ಅವಶ್ಯಕ ಇರುವ ಉದ್ಯೋಗ ಸೃಷ್ಟಿಯ ಹಿನ್ನೆಲೆ ಹಾಗೂ ಸ್ಥಳಿಯವಾಗಿ ಇಲ್ಲಿನ ಯುವಕ ಯುವತಿಯರಿಗೆ ಉದ್ಯೋಗ ಸಿಗಲಿರುವ ಹಿನ್ನೆಲೆಯಲ್ಲಿ ಹೊಸದಾಗಿ ಕೈಗಾರಿಕಾ ಘಟಕ ಸ್ಥಾಪಿಸಬೇಕೆಂದು ಆಗ್ರಹಿಸಿ ತಾಲೂಕಿನ ಯುವಕ-ಯುವತಿಯರು ಸೋಮವಾರದಂದು ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಸಾವಿರಾರು ಜನರು ಐ.ಟಿ.ಐ. ಡಿಪ್ಲೋಮಾ, ಇಂಜಿನಿಯರ ಆಗಿ ಬೇರೆ ಬೇರೆ P್ಪಡೆಯಲ್ಲಿ ಉದ್ಯೋಗ ಹುಡುಕಿಕೊಂಡು ಹೋಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಮಹಾಮರಿ ಕೋವಿಡ್ ೧೯- ನಿಂದಾಗಿ ತಮ್ಮ ಉದ್ಯೋಗವನ್ನು ಬಿಟ್ಟು ಊರಿಗೆ ಮರಳುವ ಅನಿವಾರ್ಯತೆ ಬಂದೊದಗಿದ್ದು, ಇಂದು ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ತಾಲೂಕಿನಲ್ಲಿ ನಿರುದ್ಯೋಗಿಗಳು ಸೃಷ್ಠಿಯಾಗುವುದಲ್ಲದೇ ನಮ್ಮ ದೇಶಕ್ಕೆ ಮಾನವ ಸಂಪನ್ಮೂಲ ನಷ್ಟವಾಗುವುದು.ಭಟ್ಕಳದ ತಾಲೂಕಿನ ಬೆಳಲಖಂಡ ಗ್ರಾಮದಲ್ಲಿ ಈಗಾಗಲೇ ಕೈಗಾರಿಕೆ ಸ್ಥಾಪನೆಗೆ ಜಾಗ ಮಂಜೂರಿಯಾಗಿದ್ದು, ಒಂದು ಖಾಸಗಿ ಸಹಭಾಗಿತ್ವದ ಉದ್ದಿಮೆಯನ್ನು ಸ್ಥಾಪಿಸಿದ್ದಲ್ಲಿ ಯುವ ಜನತೆಗೆ ಅವರು ಬದುಕು ಕಟ್ಟಿಕೊಳ್ಳಲು ಸಂಜೀವಿನಿAತಾಗುತ್ತದೆ. ಇಲ್ಲವೇ ಯಾವುದೇ ಖಾಸಗಿ ಕಂಪನಿ ಮುಂದೆ ಬಂದರು ಸಹ ಸ್ಥಳಿಯ ಆದ್ಯತೆ ನೀಡುವ ಷರತ್ತಿನೊಂದಿಗೆ ಉದ್ದಿಮೆ ಆರಂಭಿಸಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.ಮನವಿಯನ್ನು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಸ್ವೀಕರಿಸಿದರು.ಈ ಸಂಧರ್ಭದಲ್ಲಿ ಸಚಿನ್ ಎಮ್. ಆಚಾರಿ, ಮೋಹನ ಹೊನ್ನೆಗದ್ದೆ, ರಾಜೇಶ ಮಡಿವಾಳ, ಶಶಿಧರ ನಾಯ್ಕ, ಶ್ರೀಧರ ನಾಯ್ಕ, ತಿರುಮಲ ಮೊಗೇರ, ಜಯಂತಿ, ಭಾಸ್ಕರ ಗೊಂಡ, ಹೇಮಂತ ನಾಯ್ಕ ಇದ್ದರು. 

WhatsApp
Facebook
Telegram
error: Content is protected !!
Scroll to Top