ಭಟ್ಕಳದ ಪ್ರತಿಷ್ಟಿತ ಉದ್ಯಮಿ ರಾಜಕಾರಣಿ ಈಶ್ವರ ನಾಯ್ಕ ಕುಟುಂಬಸ್ಥರಿಂದ ಗುರುವಂದನೆ

ಸಾದುಸಂತರ ಸಾಂಗತ್ಯದಿಂದ ದೈವತ್ವ ಪ್ರಾಪ್ತಿ ನಾಮಧಾರಿ ಕುಲಗುರು ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿ

ಭಟ್ಕಳ: ಯಾರು ಗುರುಗಳ ಸಾದು ಸಂತರ ಸಾಂಗತ್ಯವನ್ನು ಪಡೆಯುತ್ತಾರೋ ಅವರು ದೈವತ್ವ ದೈವ ಸಾಂಗತ್ಯವನ್ನು ಪಡೆದುಕೊಳ್ಳುತ್ತಾರೆ ಯಾರು ಸಾದು ಸಂತರ ಗುರುಗಳ ನಿಂದನೆಯನ್ನು ಮಾಡುತ್ತಾರೋ ಅವರು ಏರಡು ಕಾಲಿನಿಂದ ನಾಲ್ಕುಕಾಲಿಗೆ ಪದೊನ್ನತಿಯನ್ನು ಪಡೆದುಕೊಳ್ಳುತ್ತಾರೆ ಎಂದು ನಾಮದಾರಿ ಸಮಾಜದ ಕುಲಗುರುಗಳಾದ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿಗಳು ಹೇಳಿದರು

ಭಟ್ಕಳ ತಾಲೂಕಿನ ಪ್ರತಿಷ್ಟೀತ ಉದ್ಯಮಿ ಬಿಜೇಪಿ ದುರಿಣರು ಆದ ಈಶ್ವರ ನಾಯ್ಕ ಅವರು ಸ್ವಗ್ರಹದಲ್ಲಿ ಕುಟುಂಬ ಸಹಿತರಾಗಿ ತಮ್ಮ ಕುಲಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಪಾದಪೂಜೆಯನ್ನು ನೇರವೇರಿಸಿದರು ಈ ಸಂದರ್ಬದಲ್ಲಿ ಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪ್ರವಚನವನ್ನು ನೀಡುತ್ತಾ ಇತ್ತೀಚೇಗೆ ದೈವ ದೇವರು ಸಾದು ಸಂತರು ಗುರುಗಳು ಎಂಬ ಭಕ್ತಿಭಾವಗಳು ತುಂಬ ಕಡಿಮೆಯಾಗುತ್ತ ಬಂದಿದೆ ಕ್ಷಣಿಕ ಸುಖ ಲೌಕಿಕ ಪ್ರಪಂಚದ ಸುಖವನ್ನಷ್ಟೆ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ ದೈವ ದೇವರ ನಿಂದನೆ ಸಾದು ಸಂತರ ಗುರುಗಳ ನಿಂದನೆ ಹೆಚ್ಚಾಗುತ್ತಿದೆ ಸಾದು ಸಂತರ ಸಾಂಗತ್ಯದಿಂದ ದೈವ ಪ್ರಾಪ್ತಿಯಾಗುತ್ತದೆ ಅದೇ ದೈವ ನಿಂದನೆ ಸಾದು ಸಂತರ ಗುರುಗಳ ನಿಂದನೆಯನ್ನು ಮಾಡಿದವರನ್ನು ಆ ಪರಮಾತ್ಮ ಕೂಡ ರಕ್ಷಿಸಲಾರ ಅಂತವರು ಎಲ್ಲವನ್ನು ಕಳೆದುಕೊಂಡು ಎರಡು ಕಾಲಿನಿಂದ ನಾಲ್ಕು ಕಾಲಿಗೆ ಪದೊನ್ನತಿ ಹೊಂದುತ್ತಾರೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಉದ್ಯಮಿಗಳು ಬಿಜೇಪಿ ದುರಿಣರು ಆದ ಈಶ್ವರ ನಾಯ್ಕ ಮಾತನಾಡಿ ಇಂದು ನನಗೆ ನನ್ನ ಕುಲಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಗುರುಗಳ ಪಾದ ಪೂಜೆ ಮಾಡುವ ಸೌಬಾಗ್ಯ ಆ ಭಗವಂತ ಕರುಣಿಸಿದ್ದಾನೆ ನಾನು ಇಂದು ನನ್ನ ಕುಟುಂಬ ಸಮೇತ ಗುರುಗಳ ಪಾದ ಪೂಜೆಯನ್ನು ನೇರವೇರಿಸಿದ್ದೆನೆ ಇದು ನನ್ನ ಬಹುದಿನದ ಬಯಕೆಯಾಗಿತ್ತು ಇಂದು ನನ್ನ ಬಯಕೆ ಇಡೇರಿದೆ ಗುರುಗಳು ನನಗೆ ಆಶಿರ್ವದಿಸಿದ್ದಾರೆ ನಾನು ಅವರಿಗೆ ಆಜೀವ ಪರ್ಯಂತ ಚೀರ ಋಣಿಯಾಗಿರುತ್ತೆನೆ ಎಂದು ಹೇಳಿದರು

ಈ ಸಂದರ್ಬದಲ್ಲಿ ನೇರೆದ ಭಕ್ತಾಧಿಗಳಿಗೆ ಉಧ್ಯಮಿ ಈಶ್ವರ ನಾಯ್ಕ ಅವರು ತಮ್ಮ ಸ್ವಗ್ರಹದಲ್ಲೆ ಬೋಜನದ ವ್ಯವಸ್ಥೆಯನ್ನು ಕಲ್ಪಿಸಿದ್ದರು

ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾರಾಯಣ ನಾಯ್ಕ ಅವರು ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು ಈ ಸಂದರ್ಬದಲ್ಲಿ ನಾಮದಾರಿ ಅಭಿವ್ರದ್ದಿ ಸಂಘದ ಅಧ್ಯಕ್ಷರಾದ ಸುಬ್ರಾಯ ನಾಯ್ಕ, ಹಳೆಕೋಟೆ ಹನುಮಂತ ದೇವಸ್ಥಾನದ ಸಮೀತಿ ಅಧ್ಯಕ್ಷ ಕ್ರಷ್ಣ ಎಸ್‌ ನಾಯ್ಕ ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಕ್ರಷ್ಣ ಆಸರಕೇರಿ ಬಿಜೇಪಿ ದುರಿಣರಾದ, ಗೊವಿಂದ ನಾಯ್ಕ, ಶಿವಾನಿ ಶಾಂತರಾಮ್‌ ಭಟ್ಕಳ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ , ಖಾದಿ ಗ್ರಾಮೋದ್ಯೋಗ ಮಂಡಳಿ ಬೆಂಗಳೂರು ಇದರ ಸದಸ್ಯರಾದ ಮುಕುಂದ ಎಂ ನಾಯ್ಕ ಸಾರದಹೋಳೆ ಶಂಕರ್‌ ನಾಯ್ಕ ನಾಗೇಂದ್ರ ನಾಯ್ಕ ಶ್ರೀನಿವಾಸ ನಾಯ್ಕ ಮುಂತಾದವರು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top