ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ/ಪಂಗಡ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದ ವತಿಯಿಂದ ತಾಲೂಕ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ:ತಾಲೂಕ ಕೊರಗರ ಕೇರಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಪಂಗಡದ ಗೃಹಭಾಗ್ಯ ಯೋಜನೆಯ ಮನೆಗಳ ವಿಲೇವಾರಿಯಲ್ಲಿ ತಾರತಮ್ಯ ನೀತಿ ಮತ್ತು ನಿವೃತ್ತ/ದಿನಗೂಲಿ/ನೇರಪಾವತಿ/ಸಮಾನವೇತನ ಪೌರಕಾರ್ಮಿಕರು ಅವರ ಅವಲಂಬಿತರಿಗೆ ಬದಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸದೆ ಮನೆಯಿಂದ ಒಕ್ಕಲೆಬ್ಬಿಸುತ್ತಿರುವದನ್ನು ತಡೆಯುವ ಕುರಿತು ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ/ಪಂಗಡ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದ ವತಿಯಿಂದ ತಾಲೂಕ ಸಹಾಯಕ ಆಯುಕ್ತರು ಮತ್ತು ಪುರಸಭಾ ಅಧ್ಯಕ್ಷ ಪರ್ವೇಜ್‌ ಖಾಶಿಂ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು

ಭಟ್ಕಳದ ಕೊರಗರ ಕೇರಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಪಂಗಡದ ಪೌರಕಾರ್ಮಿಕರು ಮತ್ತು ಅವರ ಅವಲಂಬಿತರು ಕಳೆದ ನೂರಾರು ವರ್ಷಗಳಿಂದ ಸದರಿ ಕ್ವಾರ್ಟರ್ಸಗಳಲ್ಲಿ ವಾಸಿಸುತ್ತಿದ್ದು ಭಟ್ಕಳ ಪುರಸಭೆಯಲ್ಲಿ ಒಂದಿಲ್ಲ ಒಂದು ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ. ಇವರು ಇವರ ಕುಟುಂಬವು ನಗರ ನೈರ್ಮಲ್ಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಇಲ್ಲಿನ ಸಾರ್ವಜನಿಕ ಸೇವೆಯಲ್ಲಿಯೆ ತಮ್ಮ ಬದುಕನ್ನು ಕಾಣುತ್ತಾ ಬಂದಿರುತ್ತಾರೆ. ಇಲ್ಲಿನ ನಿವಾಸಿಗಳನ್ನು ಅಂದರೆ ಕೊರಾರ/ಕೊರಗ ಜಾತಿಯ ಜನರನ್ನು ಎರಡನೆ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುವ ಪುರಸಭೆಯ ಅಧಿಕಾರಿಗಳು ಇವರ ಹಾಗೂ ಇವರ ಅವಲಂಬಿತರ ವಸತಿ ಮತ್ತು ಅವರ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ಇನ್ನೂ ಕೂಡ ರೂಪಿಸಿರುವುದಿಲ್ಲ. ಇವರಿಗೆ ಸುಸಜ್ಜಿತ ಮನೆಗಳಾಗಲಿ ಒಂದು ಮಾದರಿ ಕಾಲೋನಿಯನ್ನಾಗಲಿ ರೂಪಿಸಿರುವುದಿಲ್ಲ. ತೆರಿಗೆಯಲ್ಲಿ ಪರಿಶಿಷ್ಟರಿಗೆ ಮೀಸಲಿರುವ ಅನುದಾನಗಳನ್ನು ಕೇವಲ ನೆಪಮಾತ್ರಕ್ಕೆ ವಿವಿಧ ಕಾಮಗಾರಿಗಳನ್ನು ನಡೆಸಿ ಗುತ್ತಿಗೆದಾರರ ಹೊಟ್ಟೆ ತುಂಬಿಸುವ ಕಾರ್ಯ ಭಟ್ಕಳ ಪುರಸಭೆಯಲ್ಲಿ ನಡೆಯುತ್ತಿದ್ದು ಇಲ್ಲಿನ ನಿವಾಸಿಗಳ ನಿಜವಾದ ಅಭಿವೃದ್ದಿಯ ಕಾರ್ಯಕ್ರಮಗಳು ಜಾರಿಗೆ ಬರುತ್ತಿಲ್ಲ.

ಈಗ ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಲ್ಲಿ ಪೌರಕಾರ್ಮಿಕರ ಅನೇಕ ಮನೆಗಳು ಅಗಲಿಕರಣಕ್ಕೆ ಹೋಗುತ್ತಿರುವುದರಿಂದ ಅವರಿಗೆ ಪರಿಹಾರವಾಗಲಿ ಬದಲಿ ವ್ಯವಸ್ಥೆಯಾಗಲಿ ಆಗಿದ್ದು ಇರುವುದಿಲ್ಲ ಆದ್ದರಿಂದ ಅವರಿಗೆ ಈ ಕೂಡಲೆ ಬದಲಿ ಮನೆಯ ವ್ಯವಸ್ಥೆಯನ್ನು ಕಲ್ಪಿಸಿ ಅವರನ್ನು ಅಲ್ಲಿಂದ ಸ್ಥಳಾಂತರಿಸಬೇಕೆಂದು ಆಗ್ರಹಿಸುತ್ತಿದ್ದೇವೆ. ತಾಲೂಕಿನಲ್ಲಿ ಗೃಹಭಾಗ್ಯದ ಮನೆ ಹಂಚಿಕೆಯಲ್ಲಿ ಎರಡು ಸಮುದಾಯದವರಿಗೆ ಒಟ್ಟಿಗೆ ಮನೆಯನ್ನು ವಿಲೇವಾರಿ ಮಾಡದೆ ಅವರಿಗೆ ಬೇರೆ ಬೇರೆಯಾಗಿ ವಿಲೇವಾರಿ ಮಾಡಿದಲ್ಲಿ ಮುಂದಾಗ ಬಹುದಾದ ತೊಂದರೆಯನ್ನು ತಪ್ಪಿಸ ಬಹುದಾಗಿದೆ ಎಂದು ಈ ಮೂಲಕ ತಿಳಿಸಲು ಬಯಸುತ್ತೇವೆ. ಎಂದು ಮನವಿ ಸಲ್ಲಿಸಲಾಯಿತು

WhatsApp
Facebook
Telegram
error: Content is protected !!
Scroll to Top