ಇಂದು ಗಾಣಿಗ ಸಮಾಜ ದಿಂದ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಆರಂಭ..!

ಉನ್ನತ ಹುದ್ದೆಯ ಕನಸು ಕಾಣುವ ಮಕ್ಕಳ ಗೂರಿ ತಲುಪಿಸುವುದೆ ಈ ಟ್ರಸ್ಟ್ ಮುಖ್ಯ ಉದ್ದೇಶ…!

ದಕ್ಷಿಣ ಕನ್ನಡ :ಗಾಣಿಗ ಸಮಾಜವನ್ನು ಶೈಕ್ಷಣಿಕವಾಗಿ ಮೇಲೆತ್ತಬೇಕು ಎನ್ನುವ ಸದುದ್ದೇಶದಿಂದ ಪ್ರಥಮವಾಗಿ ಉಡುಪಿ, ಶಿವಮೊಗ್ಗ , ಉತ್ತರ ಕನ್ನಡ ಜಿಲ್ಲೆಯ ಗಾಣಿಗ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಇನ್ನಿತರ ಉನ್ನತ ಹುದ್ದೆಗಳಿಗೆ ತರಬೇತಿ, ಸರಿಯಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಶಿವಮೊಗ್ಗ ಹೆಚ್. ಸುಬ್ಬಯ್ಯ ಗಾಣಿಗರ ಕನಸಿನ ಕೂಸು ಯುವ ಮಾನಸ ಗಾಣಿಗ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಏಪ್ರಿಲ್ 14 ರಂದು ಗುರುವಾರ ಹೆಮ್ಮಾಡಿ ರಾಮ ಲಕ್ಷ್ಮಣ ಸಭಾಭವನದಲ್ಲಿ ಲೋಕಾರ್ಪಣೆಗೊಂಡಿತು.

ಇದರ ಉದ್ಘಾಟನೆಯನ್ನು ವೇದಿಕೆಯಲ್ಲಿದ್ದ ಗಾಣಿಗ ಸಮಾಜದ ಎಲ್ಲಾ ಗಣ್ಯತಿಗಣ್ಯರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಮಾನಸ ಗಾಣಿಗ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷರಾದ ಶಿವಮೊಗ್ಗ ಹೆಚ್. ಸುಬ್ಬಯ್ಯ ಗಾಣಿಗ ವಹಿಸಿದ್ದರು.

ಯುವ ಮಾನಸ ಗಾಣಿಗ ಎಜುಕೇಷನಲ್ ಟ್ರಸ್ಟ್ ನ ಟ್ರಸ್ಟಿಗಳಾದ ಕೆ. ಎಮ್. ಶೇಖರ್ ಪ್ರಾಸ್ತವಿಕ ಮಾತನಾಡಿ ಟ್ರಸ್ಟ್ ನ ದ್ಯೇಯ ಮತ್ತು ಉದ್ದೇಶಗಳ ಬಗ್ಗೆ ಸವಿಸ್ತಾರವಾಗಿ ಹೇಳಿದರು.

ಮುಖ್ಯ ಅತಿಥಿಗಳಾದ ಹಂಗಾರಕಟ್ಟೆ ಚೇತನ್ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾದ ಗಣೇಶ್ ಚೆಲ್ಲಿಮಕ್ಕಿ ಮಾತನಾಡಿ ” ಮನುಷ್ಯನು ಪ್ರತಿ ನಿತ್ಯ ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು ಪ್ರತಿನಿತ್ಯದ ಅಭ್ಯಾಸಗಳಲ್ಲಿ ಬದಲಾಯಿಸಬೇಕು, ಇದರಿಂದ ನಮ್ಮ ಜೀವನ ಬದಲಾಗುತ್ತದೆ ಎಂಬ ಡಾ. ಅಬ್ದುಲ್ ಕಲಾಂ ಅವರ ಮಾತನ್ನು ನೆನಪಿಸಿದರು.

ಅತ್ಯಂತ ಶಕ್ತಿಶಾಲಿಯಾದ ವಸ್ತು ಕಬ್ಬಿಣ, ಅದನ್ನು ಕರಗಿಸ ಬಲ್ಲ ಶಕ್ತಿಶಾಲಿ ಬೆಂಕಿ, ಬಿಂಕಿಯನ್ನು ಆರಿಸಬಲ್ಲ ಶಕ್ತಿಶಾಲಿ ನೀರು, ನೀರನ್ನು ಅಲ್ಲೋಲ ಕಲ್ಲೋಲ ಮಾಡಬಲ್ಲ ಶಕ್ತಿಶಾಲಿ ಗಾಳಿ. ಇದು ಎಲ್ಲಕ್ಕಿಂತಲೂ ಮಿಗಿಲಾದ ಶಕ್ತಿಶಾಲಿ ವಿದ್ಯಾಧಾನ.
ಈ ವಿದ್ಯಾಧಾನದಿಂದ ರಚನಾತ್ಮಕವಾದಂತಹ ಒಂದು ಸಮಾಜವನ್ನು ನಿರ್ಮಾಣ ಮಾಡಬಹುದಾದ ಶಕ್ತಿ ಇದೆ.
ಬೆಂಕಿ, ನೀರು, ಗಾಳಿ ಎಲ್ಲದರಲ್ಲೂ ಅಪಾಯ ಇದೆ. ಆದರೆ ಈ ಶಿಕ್ಷಣ ಧಾನದಲ್ಲಿ ಅಪಾಯ ಎಂಬುದು ಇಲ್ಲ.
ವಿದ್ಯಾಧಾನವು ಅತ್ಯಂತ ಶಕ್ತಿಶಾಲಿಯದಂತಹ ಕೆಲಸವಾಗಿದೆ. ಈ ಶಕ್ತಿಯನ್ನು ತುಂಬುವಂತಹ ಕೆಲಸ ಯುವ ಮಾನಸ ಗಾಣಿಗ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ಇನ್ನೊರ್ವ ಮುಖ್ಯ ಅತಿಥಿ ಬೆಂಗಳೂರು ಪ್ರಾಥಮಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕರಾದ ಬಿ.ಕೆ ಬಸವರಾಜ್ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯ ಚೆನ್ನಾಗಿರಬೇಕೆಂದರೆ ನೀವು ತಾಳ್ಮೆಯನ್ನು ಕಲಿಯಬೇಕು.
ತಾಳಿದವನು ಬಾಳಿಯಾನು ಎನ್ನುವಾಗೆ ನಿಮ್ಮನಿಮ್ಮ ಜೀವನದಲ್ಲಿ ತಾಳ್ಮೆ ಎನ್ನುವುದನ್ನು ಮೈಗೂಡಿಸಿಕೊಳ್ಳಬೇಕು.
ವಿದ್ಯಾರ್ಥಿಗಳು ಹುಚ್ಚು ಐಡಿಯಾಗಳ ಕನಸು ಕಾಣಬೇಕು. ಶಿಕ್ಷಣ ಇರಬಹುದು, ಸ್ವರ್ಧಾತ್ಮಕ ಪರೀಕ್ಷೆಗಳಿರಬಹುದು, ಇಂತಹ ಬೇರೆ ಬೇರೆ ಕ್ಷೇತ್ರಗಳಲ್ಲಿ ಕನಸು ಕಟ್ಟಿಕೊಳ್ಳಬೇಕು ಇದರಿಂದಾಗಿ ಮುಂದೆ ನಿಮ್ಮ ಕನಸು ನನಸಾಗಲಿದೆ ಎಂದು ಹೇಳಿ ಬಿ ಕೆ ಬಸವರಾಜ್ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ವೇದಿಕೆಯಲ್ಲಿ ಗಾಣಿಗ ಸಮುದಾಯದ ಸಾಧಕರ ಸನ್ಮಾನ:

ಬೆಂಗಳೂರು ಜಯದೇವ ಆಸ್ಪತ್ರೆ ಹೃದಯ ತಜ್ಞ ಎಸ್ ಎಂ ಜೈಕುಮಾರ್, ಕುಮಟಾ ಕೆ. ಎ. ಎಸ್. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ನಾಗಭೂಷಣ್ ಕಲ್ಮನೆ, ಯಕ್ಷ ಸಿರಿ ಪ್ರಶಸ್ತಿ ಪುರಸ್ಕೃತ ಆಜ್ರಿ ಗೋಪಾಲ ಗಾಣಿಗ, ರಾಜ್ಯ ಮಾನವ ಹಕ್ಕು ಆಯೋಗದ ಕಾರ್ಯದರ್ಶಿ ದಿನೇಶ್ ಕೋಟ, ಸಾಗರ ಹಿರಿಯ ವಕೀಲರು ಹಾಗೂ ಪತ್ರಕರ್ತರಾದ ಎಮ್ ರಾಘವೇಂದ್ರ, ಮಣಿಪಾಲ ಎಂ ಸಿ ಎ ಪಿ ಎಚ್. ಎಮ್. ಐ. ಟಿ. ಪೂರ್ಣಿಮಾ ಪಾಂಡುರಂಗ ಕುಂದಾಪುರ, ಭದ್ರಾವತಿ ನಿವೃತ್ತ ಇಂಜಿನಿಯರ್ ಕುಸುಮಾಕರ್, ಮುಂಬೈ ಮಕ್ಕಳ ತಜ್ಞರಾದ ರಕ್ಷಾ ರತ್ನಾಕರ್ ಗಾಣಿಗ, ಅಂತರಾಷ್ಟ್ರೀಯ ವೈಟ್ಲಿಫ್ಟರ್ ವಿಶ್ವನಾಥ ಬಾಳಿಕೆರೆ, ಬೈಂದೂರು ಬಿಎಂಎಸ್ ಡಾ. ಸರಸ್ವತಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶ್ರೀಧರ ಗಾಣಿಗ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಇಲಾಖೆ ಶೇಖರ ಗಾಣಿಗ ಬೀಜಮಕ್ಕಿ, ಚಿತ್ರಕಲಾ ಕಲಾವಿದ ಗಿರೀಶ್ ಗಾಣಿಗ ತಗ್ಗರ್ಸೆ ಈ ಮೊದಲಾದ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಹೆಚ್. ಸುಬ್ಬಯ್ಯ ಗಾಣಿಗ ಇವರು ಬರೆದಿರುವ ” ಉತ್ತರದ ಸನ್ನಿದಿ ” ಪುಸ್ತಕವನ್ನು ಬೆಂಗಳೂರು ಪ್ರಕಾಶಕ ಕನ್ನಡ ಪ್ರಭ ಇದರ ನಿವೃತ್ತ ಹಿರಿಯ ಸುದ್ದಿ ಸಂಪಾದಕ ಡಾ. ವಾಸುದೇವ ಎಂ ಶೆಟ್ಟಿ ಇವರು ಲೋಕಾರ್ಪಣೆ ಮಾಡಿದರು.

ಯುವ ಮಾನಸ ಗಾಣಿಗ ಎಜುಕೇಷನಲ್ ಟ್ರಸ್ಟ್ ನ ಟ್ರಸ್ಟಿಗಳಾದ ಮಂಜುನಾಥ್ ಎನ್. ಗಾಣಿಗ ಸೇಲಂ ಇವರು ಯುವ ಮಾನಸ ಗಾಣಿಗ ಎಜುಕೇಷನಲ್ ಟ್ರಸ್ಟ್ ಗೆ ದೇಣಿಗೆಯಾಗಿ 1ಲಕ್ಷ ರೂಪಾಯಿಯ ಚೆಕ್ ನ್ನು ನೀಡಿದರು. ಅಲ್ಲದೆ ಇನ್ನೊರ್ವ ಟ್ರಸ್ಟಿನ ಉಪಾಧ್ಯಕ್ಷರಾದ ಸಂತೋಷ ಆನಂದ್ ಉಪ್ಪುಂದ ಇವರು 25 ಸಾವಿರ ರೂಪಾಯಿಯನ್ನು ಟ್ರಸ್ಟ್ ಗೆ ದೇಣಿಗೆಯಾಗಿ ಟ್ರಸ್ಟ್ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ವೇದಿಕೆಯಲ್ಲಿ ಬೆಂಗಳೂರು ನಿವೃತ್ತ ಕೆಎಎಸ್ ಅಧಿಕಾರಿ ಆರ್ ನಾಗರಾಜ್ ಶೆಟ್ಟಿ, ಬೆಂಗಳೂರು ನಿವೃತ್ತ ನಿರ್ದೇಶಕ ಪ್ರಾಥಮಿಕ ಶಿಕ್ಷಣ ಇಲಾಖೆ ಬಿ ಕೆ ಬಸವರಾಜ, ಬಾರಕೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷರಾದ ವಾಸುದೇವ ಬೈಕಾಡಿ, ಬೆಂಗಳೂರು
ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಧ್ಯಕ್ಷ ಬಿ ಎಸ್ ಮಂಜುನಾಥ್, ಕುಂದಾಪುರ ಗಾಣಿಗ ಸೇವಾ ಸಂಘದ ಅಧ್ಯಕ್ಷರಾದ ಪ್ರಭಾಕರ್ ಕುಂಬಾಶಿ, ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷರಾದ ದಾಮೋದರ ಕೆ. ಶೆಟ್ಟಿ, ಶಿವಮೊಗ್ಗ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷರಾದ ನಾಗರಾಜ, ಶಿರಸಿ ಕೆ ಡಿ ಸಿ ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಪಿ ಶೆಟ್ಟಿ, ಬೆಂಗಳೂರು ಗೋಪಾಲಕೃಷ್ಣ ಕ್ರೆಡಿಟ್ ಕೋ ಆಪ್ ಸೊಸೈಟಿಯ ಅಧ್ಯಕ್ಷರಾದ ಎಂ ಗೋಪಾಲಕೃಷ್ಣ, ಉಡುಪಿ ಸಂಪರ್ಕ ಸುಧಾ ಸಂಪಾದಕರಾದ ರಘುರಾಮ್ ಬೈಕಾಡಿ, ಚೇತನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ್ ಚೆಲ್ಲಿ ಮಕ್ಕಿ, ಬೈಂದೂರು ವಲಯ ಗಾಣಿಗ ಯುವ ಸಂಘಟನೆ ಅಧ್ಯಕ್ಷರಾದ ಗಣೇಶ್ ಗಾಣಿಗ
ಬೆಂಗಳೂರು ಉದ್ದಿಮೆಗಳು ಸೂರ್ಯನಾರಾಯಣ ಜಡ್ಡಿನಹಿತ್ಲು, ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ನಾಗರಾಜ ಮಲ್ತಾರು, ಹೊನ್ನಾವರ ಜೀವನ್ ಸುಪಾರಿ ಬಾಸ್ಕೆರಿ ಸುರೇಶ್ ಶೆಟ್ಟಿ ಮೊದಲಾದರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೇಂದ್ರ ಬಿಂದು ಮಂಜುನಾಥ್ ಶಿಕಾರಿಪುರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಇವರಿಂದ UPSC, KPSC ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವುದು ಹೇಗೆ ಎಂಬುದರ ಬಗ್ಗೆ ಉಪನ್ಯಾಸ ನಡೆಯಿತು.

ಕಾರ್ಯಕ್ರಮವನ್ನು ಯುವ ಮಾನಸ ಗಾಣಿಗ ಟ್ರಸ್ಟ್ ನ ಉಪಾಧ್ಯಕ್ಷರಾದ ಸುಭಾಸ್ ಎಮ್ ಶೆಟ್ಟಿ ಸ್ವಾಗತಿಸಿದರು.
ಯುವ ಮಾನಸ ಗಾಣಿಗ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ
ಕೆ. ಎಮ್. ಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಟ್ರಸ್ಟ್ ನ ಖಜಾಂಚಿಗಳಾದ ಯು ಅನಂತ್ ಗಾಣಿಗ ವಂದಿಸಿದರು.

WhatsApp
Facebook
Telegram
error: Content is protected !!
Scroll to Top