ಏಪ್ರಿಲ್ 13 ರಂದು ಕುಂದಾಪುರದಲ್ಲಿ ಗಾಣಿಗ ಸಮುದಾಯದಿಂದ ಪತ್ರಿಕಾ ಗೋಷ್ಠಿ “

ಏಪ್ರಿಲ್ 14 ರಂದು ಯುವ ಮಾನಸ ಗಾಣಿಗ ಎಜುಕೇಷನಲ್ ಟ್ರಸ್ಟ್ ಲೋಕಾರ್ಪಣೆ..!

ದಕ್ಷಿಣ ಕನ್ನಡ: ರಾಜ್ಯದಲ್ಲಿ ಗಾಣಿಗ ಸಮುದಾಯವು ತುಂಬಾ ಹಿಂದುಳಿದ ಸಮಾಜವಾಗಿದ್ದು, ಈ ಸಮಾಜವನ್ನು ಶೈಕ್ಷಣಿಕವಾಗಿ ಮೇಲೆತ್ತಬೇಕು ಎನ್ನುವ ಸದುದ್ದೇಶದಿಂದ ಪ್ರಪ್ರಥಮವಾಗಿ ಉಡುಪಿ, ಶಿವಮೊಗ್ಗ , ಉತ್ತರ ಕನ್ನಡ ಜಿಲ್ಲೆಯ ಗಾಣಿಗ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಇನ್ನಿತರ ಉನ್ನತ ಹುದ್ದೆಗಳಿಗೆ ತರಬೇತಿ ಸರಿಯಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಯುವ ಮಾನಸ ಗಾಣಿಗ ಎಜುಕೇಶನಲ್ ಟ್ರಸ್ಟ್ ನಾಳೆ ರಾಮ ಲಕ್ಷ್ಮಣ ಸಭಾಭವನ ಹೆಮ್ಮಾಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ಸಮಾರಂಭದ ಉದ್ಘಾಟನೆಯನ್ನು ಗಾಣಿಗ ಸಮುದಾಯದ ಏಕೈಕ ಕುಮಟಾ ಶಾಸಕರಾದ ಶ್ರೀ ದಿನಕರ ಶೆಟ್ಟಿ ಅವರು ಉದ್ಘಾಟನೆ ಮಾಡುವವರಿದ್ದಾರೆ.

ಸಮಾರಂಭದಲ್ಲಿ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಶಿವಮೊಗ್ಗ ಎಚ್ ಸುಬ್ಬಯ್ಯ ಗಾಣಿಗರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಾರೆ.

ಗಾಣಿಗ ಸಮುದಾಯದ ಹಲವಾರು ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಹನೀಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಅದಲ್ಲದೆ ಗಾಣಿಗ ಸಮುದಾಯದ ಮಹನೀಯರು ಹಲವಾರು ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವುದನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

ಮಂಜುನಾಥ್ ಸಾಧನ ಅಕಾಡೆಮಿ ಯುಟ್ಯೂಬ್ ಚಾನಲ್ ಶಿಕಾರಿಪುರ ಇವರು ಯುವಕ-ಯುವತಿಯರಿಗೆ ಸರಕಾರಿ ಉದ್ಯೋಗವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಉಪನ್ಯಾಸವನ್ನು ನೀಡಲಿದ್ದಾರೆ. ಶ್ರೀಯುತರಿಗೆ ಈಗಾಗಲೇ 11 ಲಕ್ಷಕ್ಕೂ ಹೆಚ್ಚು ಯುಟ್ಯೂಬ್ ಚಾನಲ್ ಪಾಲೋವರ್ಸ್ ಇದ್ದು ಇವರ ಮಾರ್ಗದರ್ಶನದಲ್ಲಿ ರಾಜ್ಯದ ಅನೇಕರು ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಮೂರು ಜಿಲ್ಲೆಯ ಸುಮಾರು 150 ಕ್ಕಿಂತಲೂ ಹೆಚ್ಚು ಯುವಕ-ಯುವತಿಯರು ಈಗಾಗಲೇ ನೊಂದಣಿ ಮಾಡಿದ್ದು ಪಾಲಕರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಸಮಾಜ ಬಾಂದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಟ್ರಸ್ಟಿನ ಮೂಲ ಉದ್ದೇಶ : ಗಾಣಿಗ ಸಮುದಾಯವು ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸ ಹಣದ ಅಡಚಣೆಯಿಂದಾಗಿ ನಿಲ್ಲಬಾರದು ಎನ್ನುವ ಉದ್ದೇಶ ನಮ್ಮದು. ಅದಕ್ಕಾಗಿ ಗಾಣಿಗ ಸಮುದಾಯದ ವಿದ್ಯಾರ್ಥಿಗಳು ಐ.ಎಸ್. ಮಾಡಲು ಇಚ್ಛೆ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಿದ್ದೇವೆ. ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಈ ಮೂರು ಜಿಲ್ಲೆಯಲ್ಲಿ ಗಾಣಿಗ ಸಮುದಾಯದ ಅತೀ ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಿ ವಿದ್ಯಾರ್ಥಿಯ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಭರಿಸಿ ಆ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವಂತಹ ಕೆಲಸವನ್ನು ಯುವ ಗಾಣಿಗ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಮಾಡಲಿದೆ. ಆದ್ದರಿಂದ ಈ ಗಾಣಿಗ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಯೋಜನೆಯನ್ನು ಹಮ್ಮಿಕೊಂಡಿದ್ದು ಟ್ರಸ್ಸಿನ ಎಲ್ಲ ಸದಸ್ಯರು ಅವಿರತವಾಗಿ ಹಗಲಿರುಳು ದುಡಿಯುವ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.

ನಾಳೆ ದಿನಾಂಕ 14/4/2022 ರ ಗುರುವಾರ ಬೆಳಿಗ್ಗೆ 9.30ಕ್ಕೆ ಘಂಟೆಗೆ ಸರಿಯಾಗಿ ಪ್ರಾರಂಭವಾಗಿ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಪುಸ್ತಕ ಲೋಕಾರ್ಪಣೆ, ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಕಾರ್ಯಗಾರ ನಡೆಯಲಿದೆ ಎಂದು
ಮಾನಸ ಗಾಣಿಗ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಕೆ. ಎಮ್. ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾನಸ ಗಾಣಿಗ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶಿವಮೊಗ್ಗ ಎಚ್. ಸುಬ್ಬಯ್ಯ, ನಿವೃತ್ತ ಇಂಜಿನಿಯರ್ ಭದ್ರಾವತಿ ಕುಸುಮಾಕರ, ಮಂಜುನಾಥ್ ಎಂ ಗಾಣಿಗ ಸೇಲಂ, ಮಂಜುನಾಥ್ ಹುಲುವಾಡಿ ಇವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top