ಹೊನ್ನಾವರ;ಕಡ್ಲೆ ಗ್ರಾಮಸ್ಥರಿಂದ ವಿಶ್ವೇಶ್ವರ ಹೆಗಡೆ ಅವರಿಗೆ ಮನವಿ .!

ಅರಣ್ಯ ಭೂಮಿಯಲ್ಲಿ ಅಕೇಶಿಯ ಬದಲು ಹಣ್ಣಿನ ಗಿಡ ನೆಡಲು ಸೂಚನೆ.

ಹೊನ್ನಾವರ: ಕಡ್ಲೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕೇಶಿಯ ಗಿಡ – ಮರಗಳನ್ನು ಬೆಳೆಸುವ ಬದಲು ಹಣ್ಣಿನ ಗಿಡಗಳನ್ನು ನೆಡಬೇಕು ಎಂದು ಗ್ರಾಮಸ್ಥರು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ನೀಡಿದರು.

ಗ್ರಾಮದ ಮುಖಂಡ ಸದಾನಂದ ಭಟ್ಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ , ಕಳೆದ ಅನೇಕ ವರ್ಷಗಳಿಂದ ಕಡ್ಲೆ ಗ್ರಾಮದಲ್ಲಿ ಅಕೇಶಿಯ ಗಿಡ ಮತ್ತು ಮರ ಯಾವುದೇ ಕಾರಣಕ್ಕೂ ಬೇಡ ಎಂದು ಸಂಬಂಧಿಸಿದ ಅಧಿಕಾರಿಗಳಲ್ಲಿ ವಿನಂತಿಸಿದೆವೆ.

ಈ ಭಾಗದಲ್ಲಿ ಸುಮಾರು 380 ರಿಂದ 400 ಎಕರೆ ಭೂಮಿ ಇದೆ . ಈ ಬಾರಿ ಅಕೇಶಿಯ ಮರಗಳನ್ನು ಸಂಬಂಧಿಸಿದ ಇಲಾಖೆ ಕತ್ತರಿಸುತ್ತಿದ್ದಾರೆ ಆದರೆ ಈ ಅರಣ್ಯ ಭೂಮಿಯಲ್ಲಿ ಕಾಡು ಜಾತಿಯ ಮರಗಳು ಹಾಗೂ ಹತ್ತಿರದಲ್ಲಿ ವಸತಿ ಇರುವ ಕಾರಣ ಮಾವು , ಹಲಸು , ನೇರಳೆ ಈ ರೀತಿಯ ಹಣ್ಣಿನ ಗಿಡ ಅರಣ್ಯ ಇಲಾಖೆಯವರು ನೆಡಬೇಕು . ಇದಕ್ಕೆ ಅನುಕೂಲ ಆಗುವ ರೀತಿಯಲ್ಲಿ ಭೂಮಿ ಫಲವತ್ತತೆ ಇದೆ ಎಂದು ತಿಳಿಸಿದರು.

ಅಕೇಶಿಯದಿಂದ ಅಂತರ್ಜಲ ಮಟ್ಟ ಕಡಿಮೆ ಆಗಿ ನೀರಿನ ಕ್ಷಾಮ ಉಂಟಾಗಿದೆ . ಇದ ರಿಂದ ಜಾನುವಾರುಗಳ ಮೇವಿಗೆ ತೊಂದರೆ ಆಗಿದೆ ಎಂದು ಮನವಿಮೂಲಕ ಅರಿವು ಮೂಡಿಸಿದರು . ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಕಾಗೇರಿ , ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ .

ಈ ಸಂದರ್ಭದಲ್ಲಿ ಕಡ್ಲೆ ಗ್ರಾಪಂ ಅಧ್ಯಕ್ಷ ಗೋವಿಂದ ಗೌಡ , ಸದಸ್ಯ ಸುಬ್ರಹ್ಮಣ್ಯ ಭಟ್ , ಸೂಕ್ತ ಬಿಜೆಪಿ ಯುವ ಮುಖಂಡ ಎಚ್.ಆರ್ . ಗಣೇಶ ಹೊಸಾಕುಳಿ , ಶಕ್ತಿ ಕೇಂದ್ರದ ಅಧ್ಯಕ್ಷ ರವಿ ಹೆಗಡೆ , ಮಾಬೇಶ್ವರ ಮಡಿವಾಳ , ವಿನೋದ ಶೆಟ್ಟಿ , ಮಹೇಶ್ ಆಚಾರಿ ಇದ್ದರು .

WhatsApp
Facebook
Telegram
error: Content is protected !!
Scroll to Top