Pavagada Accident : ಪಾವಗಡ ಪೊಲೀಸ್ ಠಾಣೆಗೆ ಆಗಮಿಸಿ ಬಸ್ ಚಾಲಕ ರಘು ಶರಣು!

ಪಾವಗಡದ ಪಳವಳ್ಳಿ ಬಳಿ ನಡೆದ ಬಸ್ ದುರಂತ ಪ್ರಕರಣ ಇಡೀ ರಾಜ್ಯವನ್ನೇ ಆಘಾತಕ್ಕೆ ದೂಡಿದೆ. ಇದೀಗ ಘಟನೆ ಬೆನ್ನಲ್ಲೇ ಖಾಸಗಿ ಬಸ್ ಚಾಲಕ ರಘು ಪೊಲೀಸರಿಗೆ ಶರಣಾಗಿದ್ದಾನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ತುಮಕೂರು: ಪಾವಗಡದ ಪಳವಳ್ಳಿ ಬಳಿ ನಡೆದ ಬಸ್ ದುರಂತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಖಾಸಗಿ ಬಸ್‌ ಚಾಲಕ ರಘು  ಪೊಲೀಸರಿಗೆ ಶರಣಾಗಿದ್ದಾನೆ. ಪಾವಗಡ ಪೋಲಿಸ್ ಠಾಣೇಗೆ ಆಗಮಿಸಿ ಚಾಲಕ ರಘು ಶರಣಾಗಿದ್ದಾನೆ. ಈ ವೇಳೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬಳಿಕ ಚಾಲಕನ ಹೆಸರು ಬಳಸದೆ ಬಸ್ ನಂಬರ್ ಉಲ್ಲೇಖಿಸಿ FIR ದಾಖಲು ಮಾಡಲಾಗಿತ್ತು.

KA06 C8933 SVT ಬಸ್ ಚಾಲಕ A1 ಎಂದು ಉಲ್ಲೇಖ ಮಾಡಿ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಇದೀಗ ಚಾಲಕ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನೆ ಬಳಿಕ ಚಾಲಕ ತಲೆ ಮರಸಿಕೊಂಡಿದ್ದ, ಇದೀಗ ರಘು ಪೊಲೀಸರ ವಶದಲ್ಲಿದ್ದಾನೆ.

ಫೋನ್ ಬಳಸಿದ್ದರಿಂದ ಅಪಘಾತ?
ಮೂಲಗಳ ಪ್ರಕಾರ ಚಾಲನೆ ವೇಳೆ ರಘು ಫೋನ್ ಬಳಕೆ ಮಾಡುತ್ತಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಅಲ್ಲದೇ ಬಸ್ ಚಾಲಕನ ಅಜಾಗರೂಕತಯೇ ಬಸ್ ಅಪಘಾತಕ್ಕೆಕಾರಣ ಎಂದು ಕೂಡ ಹೇಳಲಾಗಿದೆ. ತಿರುವು ರಸ್ತೆಯಲ್ಲಿ ಅತಿ ವೇಗವಾಗಿ ಬಸ್ ಚಾಲನೆ ಮಾಡಲಾಗಿದೆ. ನಿಧಾನವಾಗಿ ಬಸ್ ಓಡಿಸುವಂತೆ ಪ್ರಯಾಣಿಕರು‌ ಹೇಳಿದ್ದರೂ ವೇಗದ ಚಾಲನೆ ಮಾಡಲಾಗಿದೆ. ಕಂಟ್ರೋಲ್ ಸಿಗದೆ ಬಸ್ ಪಲ್ಟಿ ಆಗಿದೆ ಎನ್ನಲಾಗಿದೆ.

ಘಟನೆ ವಿವರ!
ಶನಿವಾರ ಬೆಳಗ್ಗೆ 8-20ಕ್ಕೆ ವೈಎನ್‌ ಹೊಸಕೋಟೆಯಿಂದ ಬಸ್‌ ಹೊರಟಿತ್ತು. ಇದಕ್ಕೂ ಮುಂಚೆ ಬರಬೇಕಿದ್ದ ಎರಡು ಬಸ್‌ಗಳು ಬರಲೇ ಇಲ್ಲ. ಹೀಗಾಗಿ ಇಡೀ ಬಸ್‌ ತುಂಬಿ ತುಳುಕುತ್ತಿತ್ತು. ಟಾಪ್‌ನಲ್ಲಿ ಸುಮಾರು 40 ಮಂದಿ ಇದ್ದರು. ನಿಧಾನ, ನಿಧಾನ ಎಂದು ಜನರು ಕೂಗುತ್ತಿದ್ದರೂ ಬಸ್‌ ಚಾಲಕ ರಘು ವೇಗವಾಗಿ ಓಡಿಸುತ್ತಿದ್ದ.

ಹೊಸದುರ್ಗ, ಪೋತನಗನಹಳ್ಳಿ ಸೇರಿದಂತೆ 9 ತಂಗುದಾಣಗಳಿಂದ ಪ್ರಯಾಣಿಕರು ಹತ್ತಿಸಿಕೊಂಡ. ಕೆಲವರು ಹಾದಿ ಮಧ್ಯದಲ್ಲೇ ಇಳಿಯಲು ಮನಸು ಮಾಡಿದರು. ಹೊಸಕೋಟೆಯಿಂದ 30 ನಿಮಿಷದ ಪ್ರಯಾಣದ ನಂತರ ಬಸ್‌ ಉರುಳುವ ಮುನ್ನವೇ ತಡೆಗೋಡೆಗೆ ಉಜ್ಜಿಕೊಂಡು ಸಾಗಿತ್ತು. ಕೆಲವರು ಹೋ ಎಂದು ಕೂಗಿದರು. ಇದರ ಪರಿವೇ ಇಲ್ಲದೆ ಕೆರೆ ಕಟ್ಟೆ ಬಳಿ ಬಂದಾಗ ಅಲ್ಲೊಂದು ತಿರುವು ಸಿಕ್ಕಿತು. ಅಲ್ಲೇ ಬಸ್‌ ಉರುಳಿ ಬಿತ್ತು. ಟಾಪ್‌ನಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಬಿದ್ದರು. ಬಸ್‌ ಒಳಗೆ ಇದ್ದವರು ಕೂಗಿ ಕೊಂಡರು

WhatsApp
Facebook
Telegram
error: Content is protected !!
Scroll to Top