ಅಂಕೋಲಾ ಕೇಣಿ ದತ್ತಾತ್ರೇಯ ದೇವರ ವರ್ಧಂತಿ ಉತ್ಸಕ್ಕೆ ಕ್ಷಣಗಣನೆ: ಉತ್ಸವಕ್ಕೆ ನಡೆಯುತ್ತಿದೆ ಸಕಲ ತಯಾರಿ

ಅಂಕೋಲಾ: ತಾಲೂಕಿನ ಕೇಣಿ ಈ ಶ್ರೀ ದತ್ತಾತ್ರೇಯ ದೇವರ ವರ್ಧಂತಿ ಉತ್ಸವವು 21/03/2022 ರಂದು ನಾಳೆ ಸೋಮವಾರ ದತ್ರಾತ್ರೇಯ ಟ್ರಷ್ಟ ಕೇಣಿ ಹಾಗು ವರ್ದಂತಿ ಉತ್ಸವ ಸಮೀತಿ ಇದರ ಮುಂದಾಳತ್ವದಲ್ಲಿ ನಡೆಯುತ್ತಿದ್ದು ಜಾತ್ರೆಯ ಸಕಲ ಸಿದ್ದತೆಯು ಕೆಲವು ದಿನಗಳಿಂದ ನಡೆಯುತ್ತಿದ್ದು ಸಕಲ ಭಕ್ತವೃಂದ ದೇವಕ ಕ್ರಪಾಕಟಾಕ್ಷಕ್ಕೆ ಕಾತುರತೆಯಿಂದ ಕಾಯುತ್ತಿದ್ದಾರೆ

ಈ ದತ್ತಾತ್ರೇಯ ದೇವಸ್ಥಾನ ಪುರಾತನ ಇತಿಹಾಸವನ್ನು ಹೊಂದಿದ್ದು ತಲೆತಲಾಂತರದಿಂದ ಇಲ್ಲಿ ಭಕ್ತಾಧಿಗಳು ಇಲ್ಲಿಯ ದತ್ತಾತ್ರೇಯ ದೇವರಲ್ಲಿ ನಂಬಿಕೆ ಇಟ್ಟು ತಮ್ಮ ಉತ್ತರೋತ್ತರ ಅಭಿವೃದ್ದಿಯನ್ನು ಕಂಡುಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ

ದತ್ರಾತ್ರೇಯ ಟ್ರಷ್ಟ ಅಂಕೋಲಾ ಕೇಣಿ ಇದರ ಮುಂದಾಳತ್ವದಲ್ಲಿ ನಡೆಯುವ ಶ್ರೀ ದತ್ತಾತ್ರೇಯ ದೇವರ ವರ್ದಂತಿ ಉತ್ಸವ ದೇವಸ್ತಾನದ ಅರ್ಚಕರಾದ ಗಣಪತಿ ಭಟ್ಟ ಕೂರ್ಸೆ ಇವರ ಪೂರೋಹಿತ್ಯದಲ್ಲಿ ನಡೆಯಲಿದ್ದು ಬೆಳಿಗ್ಗೆ ವರ್ಧಂತಿ ಉತ್ಸವಾಂಗ ಹವನಗಳು ಪ್ರಾರಂಭವಾಗಿ ಮಧ್ಯಾನಃ 11.30 ಕ್ಕೆ ಪೂರ್ಣಾಹುತಿ ಮಹಾಪೂಜೆ ಪ್ರಸಾದ ವಿತರಣೆ ಹಾಗು ಹಾಗು ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನಡೆಯಲಿರುತ್ತದೆ

ಹಾಗೆ ರಾತ್ರಿ 10.30 ಸುಮಾರಿಗೆ ವರ್ಧಂತಿ ಉತ್ಸವದ ನಿಮಿತ್ತ ಮನೋರಂಜನಾರ್ಥವಾಗಿ ಶ್ರೀ ದತ್ತಾತ್ರೇಯ ನಾಟ್ಯಮಂಡಳಿಯ ಕೇಣಿ ಇವರು ಅರ್ಪಿಸುವ ಶ್ರೀ ಸುಜೀತ್‌ ಎನ್‌ ನಾಯ್ಕ ಅವರ್ಸಾ ಇವರ ವಿರಚಿತ ಪೇಮ ಸಮುದ್ರ ಎಂಬ ನಾಟಕವನ್ನು ಪ್ರದರ್ಶಿಸಲಾಗುವುದು

ದೇವರ ವರ್ಧಂತಿ ಉತ್ಸವದಲ್ಲಿ ಸರ್ವ ಭಕ್ತಾಧಿಗಳು ಪಾಲ್ಗೋಂಡು ಶ್ರೀ ದೇವರ ಕ್ರಪೇಗೆ ಪಾತ್ರರಾಗಬೇಕು ಎಂದು ಶ್ರೀ ದತ್ತಾತ್ರೇಯ ದೇವಸ್ಥಾನ ಟ್ರಷ್ಟ ಕಮೀಟಿ ಕೇಣಿ ಅಂಕೋಲಾ ಹಾಗು ವರ್ದಂತಿ ಉತ್ಸವ ಸಮೀತಿಯ ಅಧ್ಯಕ್ಷರು ಪಧಾದಿಕಾರಿಗಳು ಸದಸ್ಯರು ಕೇಳಿಕೊಂಡಿದ್ದಾರೆ

WhatsApp
Facebook
Telegram
error: Content is protected !!
Scroll to Top