ಭಾರತದಲ್ಲಿ ಕೊವಿಡ್ 4ನೇ ಅಲೆಯ ಭೀತಿ; ಎಚ್ಚರ ವಹಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ಹಿಂದಿನ ಕೊರೊನಾ ಅಲೆಗಳ ಸಮಯದಲ್ಲಿ ಹೆಚ್ಚು ಪೀಡಿತ ರಾಜ್ಯವಾಗಿದ್ದ ಮಹಾರಾಷ್ಟ್ರವು ಈಗಾಗಲೇ ಕೊವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಜನರನ್ನು ಒತ್ತಾಯಿಸುವ ಮೂಲಕ ಮಹಾರಾಷ್ಟ್ರದ ಸರ್ಕಾರವು ಎಚ್ಚರಿಕೆಯನ್ನು ನೀಡಿದೆ.

ನವದೆಹಲಿ: ಏಷ್ಯಾ ಮತ್ತು ಯುರೋಪಿಯನ್ ದೇಶಗಳಲ್ಲಿ ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳ (Covid-19 Cases) ಮಧ್ಯೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೆಲವು ದಿನಗಳ ಹಿಂದೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಚೀನಾ, ಸಿಂಗಾಪುರ್, ಹಾಂಗ್ ಕಾಂಗ್, ವಿಯೆಟ್ನಾಂ, ದಕ್ಷಿಣ ಕೊರಿಯಾ ಮುಂತಾದ ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೊವಿಡ್ ಪ್ರಕರಣಗಳ (Coronavirus) ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕೆಂದ್ರ ಸರಕಾರ ದಿಂದ ಎಲ್ಲ ರಾಜ್ಯಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

ಮಾರ್ಚ್ 27ರಿಂದ ಅಂತಾರಾಷ್ಟ್ರೀಯ ವಿಮಾನಯಾನವನ್ನು ಪುನರಾರಂಭಿಸುವ ನಿರ್ಧಾರದ ಪರಿಶೀಲನೆಯೊಂದಿಗೆ ಭಾರತದ ಕೊವಿಡ್ ಲಸಿಕೆಯನ್ನು ಸಹ ಪರಿಶೀಲಿಸಲಾಗಿದೆ. Omicron BA.2 ಯುರೋಪ್ ಮತ್ತು ಏಷ್ಯಾದ ಭಾಗಗಳಲ್ಲಿ ಭಾರಿ ಕೋವಿಡ್ ಉಲ್ಬಣಕ್ಕೆ ಕಾರಣವಾಗುತ್ತಿದೆ. ಈ ರೂಪಾಂತರವು ಭಾರತದಲ್ಲಿ 4 ನೇ ಕೊವಿಡ್ ಅಲೆಯನ್ನು ಉಂಟುಮಾಡಬಹುದೇ ಎಂಬ ಕುರಿತು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಹಿಂದಿನ ಕೊರೊನಾ ಅಲೆಗಳ ಸಮಯದಲ್ಲಿ ಹೆಚ್ಚು ಪೀಡಿತ ರಾಜ್ಯವಾಗಿದ್ದ ಮಹಾರಾಷ್ಟ್ರವು ಈಗಾಗಲೇ ಕೊವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಜನರನ್ನು ಒತ್ತಾಯಿಸುವ ಮೂಲಕ ಮಹಾರಾಷ್ಟ್ರದ ಸರ್ಕಾರವು ಎಚ್ಚರಿಕೆಯನ್ನು ನೀಡಿದೆ.

WhatsApp
Facebook
Telegram
error: Content is protected !!
Scroll to Top