ಬಿಜೆಪಿ ಶಾಶ್ವತವಲ್ಲ, ಮೋದಿ ನಿರ್ಗಮನದ ಬಳಿಕ ಅದು ಉಳಿಯಲು ಸಾಧ್ಯವಿಲ್ಲ: ವೀರಪ್ಪ ಮೊಯ್ಲಿ

ಕಾಂಗ್ರೆಸ್‌ಗೆ ತೀವ್ರ ತಲೆನೋವಾಗಿ ಪರಿಣಮಿಸಿರುವ ಜಿ-23ರ ಭಿನ್ನಮತೀಯ ಮುಖಂಡರ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ ಎಂ ವೀರಪ್ಪ ಮೊಯ್ಲಿ, ಈ ಮುಖಂಡರು ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಮತ್ತು ಸೋನಿಯಾ ಗಾಂಧಿ ಅವರನ್ನು ಗುರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೆಯೇ ಬಿಜೆಪಿಯು ಮೋದಿ ಅವರ ಬಳಿಕದ ರಾಜಕೀಯ ಕೋಲಾಹಲದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದಿದ್ದಾರೆ

ಹೊಸದಿಲ್ಲಿ: ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಜಿ ೨೩ ಗುಂಪಿನ ಸದಸ್ಯರ ವಿರುದ್ಧ ಹಿರಿಯ ಕಾಂಗ್ರೇಸ್‌  ನಾಯಕ ವಿರಪ್ಪ ಮೊಯ್ಲಿ ವಾಗಾಳಿ ನಡೆಸಿದ್ದಾರೆ. ಈ ಮುಖಂಡರು ಸೀನಿಯಾ ಗಾಂದಿಯವರನ್ನು ಗುರಿ ಮಾಡುತ್ತಿದ್ದಾರೆ ಮತ್ತು ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಒಳಗೆ ಸುಧಾರಣೆಯನ್ನು ಬಯಸಿದ್ದಾರೆ. ಆದರೆ ಅವರ ಸುತ್ತಲಿನ ಜನರು ಅದನ್ನು ಹಾಳು ಮಾಡುತ್ತಿದ್ದಾರೆ. ಜಿ-23 ಮುಖಂಡರು ಹಿರಿಯ ನಾಯಕಿಯನ್ನು ಗುರಿ ಮಾಡುತ್ತಿದ್ದಾರೆ ಹಾಗೂ ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ. ಬಿಜೆಪಿ ಚಿರಸ್ಥಾಯಿ ಪಕ್ಷವೇನಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಉಂಟಾಗುವ ರಾಜಕೀಯ ಕೋಲಾಹಲದಲ್ಲಿ ಅದು ಉಳಿಯಲು ಸಾಧ್ಯವಿಲ್ಲ” ಎಂದು ಮೊಯ್ಲಿ ಹೇಳಿದ್ದಾರೆ.

“ನಾವು ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಅಥವಾ ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ಬಿಜೆಪಿ ಮತ್ತು ಇತರೆ ಪಕ್ಷಗಳು ನಡುವೆ ಬರುವ ಪ್ರಯಾಣಿಕರಂತೆ. ಅವರು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ಇಲ್ಲಿ ಕೊನೆಯವರೆಗೂ ಉಳಿಯುವುದು ಕಾಂಗ್ರೆಸ್ ಮಾತ್ರ. ನಾವು ದೀನರಿಗೆ ಬದ್ಧರಾಗಿರಬೇಕು ಮತ್ತು ಭರವಸೆ ಕಳೆದುಕೊಳ್ಳಬಾರದು” ಎಂದು ಅವರು ತಿಳಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top