ಕ್ಷಮಿಸಿ ಬಿಡಿ ಅಪ್ಪ.. ಸೆಲ್ಫಿ ವಿಡಿಯೋ ಮಾಡಿ 23ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ.!

ಬೆಂಗಳೂರು: ಪೋಷಕರು (Parents) ಹಾಗೂ ಸ್ನೇಹಿತರಿಗೆ (Friends) ವಿಡಿಯೋ ಸಂದೇಶ (Video Message) ಕಳುಹಿಸಿ ಅಪಾರ್ಟ್ ಮೆಂಟ್ ನ 23ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಕ್ರಾಸ್ (Koonanakunte) ನಲ್ಲಿ ನಡೆದಿದೆ. ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ಪಿಯು (2nd PUC) ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಅಂಜನ್ ಮೃತ ವಿದ್ಯಾರ್ಥಿ. ಸಾಕಷ್ಟು ದಿನಗಳಿಂದ ಮಾನಸಿಕ ಖಿನ್ನತೆಯಿಂದ (Mental Depression) ಬಳಲುತ್ತಿದ್ದ ಅಂಜನ್​ ಇಂದು ಮುಂಜಾನೆ 3.15ರ ಸುಮಾರಿಗೆ ಕೋಣನುಕುಂಟೆ ವ್ಯಾಪ್ತಿಯ ಪಾಲ್ಕನ್ ಸಿಟಿ ಅಪಾರ್ಟ್ ಮೆಂಟ್ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೆ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಅಂಜನ್, ‘ಕ್ಷಮಿಸಿ ಅಪ್ಪ. ನಾನು ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ’ ಎಂದು ಹೇಳಿದ್ದಾನೆ. ಬಳಿಕ ವಿಡಿಯೋವನ್ನ ತಂದೆ, ಸಂಬಂಧಿಕರಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂಜಯ್ ಪೋಷಕರು ಸ್ಥಳಕ್ಕೆ ಬರುವಷ್ಟರಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮುಂಜಾನೆ 3.15ರ ಸುಮಾರಿಗೆ 23ನೇ ಮಹಡಿಯಿಂದ ಅಂಜನ್ ಜಿಗಿದಿದ್ದಾನೆ, ಈ ವೇಳೆ ನಾವು ಮಲಗಿದ್ದು ಮೇಲಿನಿಂದ ಬಿದ್ದ ಶಬ್ದ ಕೇಳಿ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಆತ ರಕ್ತದ ಮಡುವಿನಲ್ಲಿ ಬಿದಿದ್ದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅಷ್ಟರಲ್ಲಾಗಲೆ ಮಗ ಮೃತಪಟ್ಟಿದ್ದಾಗಿ ಅಂಜಯ್ ಪೋಷಕರು ತಿಳಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top