ತಲ್ವಾರ್ ಹಿಡಿದು ಗೋ ಕಳ್ಳತನಕ್ಕೆ ಯತ್ನ;ನಾಲ್ಕು ಆರೋಪಿ ಪೊಲೀಸ್‌ ವಶಕ್ಕೆ..!

ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋ ಕಳ್ಳತನದಲ್ಲಿ ತೊಡಗಿದ್ದ ‘ಟೀಂ ಗರುಡಾ’ ತಂಡದ ನಾಲ್ವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಪುವಿನ ಮಹಮ್ಮದ್ ಶರೀಪ್ ಯಾನೆ ಸ್ಕೊರ್ಪಿಯೊ ಶರೀಪ್(34), ಅಬ್ದುಲ್ ಮಜೀದ್ ಯಾನೆ ಮಜ್ಜಿಮಜ್ಜಿ(22), ಸಯ್ಯದ್ ಅಕ್ರಮ್ ಯಾನೆ ಅಕ್ಕು ಸಯ್ಯದ್ (22), ಮುಜಾಹೀದ್ ರೆಹಮಾನ್ ಯಾನೆ ಸಲ್ಮಾನ್ (22) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ, ಕಾರು, 4 ತಲವಾರು ಸೇರಿದಂತೆ 3, 20,000 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬ್ರಹ್ಮಾವರದ ದನ ಕಳ್ಳತನ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಬ್ರಹ್ಮಾವರ ವೃತ್ತನೀರಿಕ್ಷಕರಾದ ಅನಂತ ಪದ್ಮನಾಭರವರು ಬ್ರಹ್ಮಾವರ ಠಾಣಾ ಪಿಎಸ್‌ಐ ಗುರುನಾಥ ಹಾದಿಮನಿ ಹಾಗೂ ಕೋಟ ಪಿಎಸ್‌ಐ ಮಧು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಿದ್ದರು.

ಅದರಂತೆ ಈ ತಂಡ ವಿಶೇಷ ಗಸ್ತಿನಲ್ಲಿ ಇದ್ದ ವೇಳೆ ಇಂದು ಬ್ರಹ್ಮಾವರ ಠಾಣಾ ವ್ಯಾಪ್ತಿಯ ಬಾರ್ಕೂರು ರಸ್ತೆ ಸಮೀಪ ಅನುಮಾನಮಾಸ್ಪದವಾಗಿ ನಿಂತಿದ್ದಸ್ಕೂಟಿ ಹಾಗೂ ಕಾರನ್ನು ಪರಿಶೀಲಿಸಿದಾಗ ನಾಲ್ವರು ಆರೋಪಿತರುತಲವಾರ್‌ನೊಂದಿಗೆ ದನ ಕಳ್ಳತನಕ್ಕೆ ಹೊಂಚುಹಾಕುತ್ತಿದ್ದುದು ತಿಳಿದು ಬಂದಿದೆ. ಈ ವೇಳೆ ಆರೋಪಿಗಳನ್ನು ಬಂಧಿಸಿದ ಪೊಲೀಸರು ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ಉಡುಪಿ, ಕಾಪು, ದ.ಕ ಜಿಲ್ಲೆ, ಶಿವಮೊಗ್ಗ ಠಾಣೆ ಸೇರಿದಂತೆ ವಿವಿಧ ಠಾಣೆಯಲ್ಲಿ ಕಳ್ಳತನ, ಕೊಲೆ ಯತ್ನ, ಸುಲಿಗೆ, ಢಕಾಯಿತಿ ಯತ್ನ ಪ್ರಕರಣಗಳು ದಾಖಲಾಗಿದ್ದು, ಬಂಧಿತ ಆರೋಪಿಗಳು ‘ಟೀಂ ಗರುಡಾ’ ಎಂಬ ಇನ್ಸ್ಟಾಗ್ರಾಂ ಖಾತೆಯನ್ನು ತೆರೆದುಕೊಂಡಿದ್ದು, ಪರಸ್ಪರ ಸಂಪರ್ಕಕ್ಕಾಗಿ ಇದೇ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದುದಾಗಿ ತನಿಖೆಯಿಂದ ಬಯಲಾಗಿದೆ. ಇದರೊಂದಿಗೆ ಬ್ರಹ್ಮಾವರ ಪೊಲೀಸ್ ಠಾಣೆಯ ದನ ಕಳವು ಪ್ರಕರಣ, ಕೋಟಾ ಪೊಲೀಸ್ ಠಾಣೆಯ ಜೀವ ಬೆದರಿಕೆ ಪ್ರಕರಣ, ಬೈಂದೂರು ಠಾಣೆಯ ಬ್ಯಾಟರಿ ಕಳವು ಪ್ರಕರಣ ಭೇದಿಸಿದಂತಾಗಿದೆ.

ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್ ವಿಷ್ಣುವರ್ಧನ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ರವರ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ ಹಾಗೂ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಧು ಅವರೊಂದಿಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ ಪ್ರವೀಣ್ ಶೆಟ್ಟಿಗಾರ್, ಹೆಚ್.ಸಿ ರಾಘವೇಂದ್ರ, ಹೆಚ್.ಸಿ ಸಂತೋಷ ಶೆಟ್ಟಿ, ಹೆಚ್.ಸಿ ಉದಯ ಅಮೀನ್, ಪಿ.ಸಿ ದಿಲೀಪ್, ಪಿ.ಸಿ ಅಜ್ಜಲ್, ಪಿ.ಸಿ ಬಶೀರ್ ಹಾಗೂ ಕೋಟ ಠಾಣೆಯ ಪಿ.ಸಿ ಪ್ರಸನ್ನ, ಪಿ.ಸಿ ರಾಘವೇಂದ್ರ ಚಾಲಕ ಅಣ್ಣಪ್ಪ ಮತ್ತು ಮಂಜುನಾಥ ಇವರು ಭಾಗವಹಿಸಿದ್ದರು.

WhatsApp
Facebook
Telegram
error: Content is protected !!
Scroll to Top