ಉತ್ತರಾಖಂಡ್‌ನಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ..?!

ಡೆಹ್ರಾಡೂನ್: ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ನಿಚ್ಚಳವಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಅನೇಕ ಕಾರಣಗಳಿವೆ.

ಬಿಜೆಪಿ ಗೆಲುವಿಗೆ ಕಾರಣಗಳೇನು?
ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಪ್ರಮುಖ ಕಾರಣವಾಗಿದೆ. ಮೂವರು ಸಿಎಂ ಬದಲಾವಣೆಯಿಂದ ಬಿಜೆಪಿಗೆ ಗೆಲುವು ಕಷ್ಟ ಎನ್ನಲಾಗಿತ್ತು. ಈ ವೇಳೆ ಕೇದಾರಾಬಾಬಾ ಎನ್ನುವ ಜನಪ್ರಿಯತೆ ಹೆಸರಿನ ಮೇಲೆ ಬಿಜೆಪಿ ಮತಯಾಚಿಸಿತ್ತು.

ಗುಡ್ಡಗಾಡು ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ, ರಸ್ತೆ, ರೈಲು ಸೇರಿದಂತೆ ಮೂಲ ಸೌಕರ್ಯಗಳನ್ನು ಹೆಚ್ಚಳ ಮಾಡಲಾಯಿತು. ಪ್ರತಿ ಬೂತ್ ಮಟ್ಟದಲ್ಲಿ ಹತ್ತು ಸಭೆಗಳನ್ನು ನಡೆಸಿ ತಳ ಹಂತದಲ್ಲಿ ಪಕ್ಷ ಸಂಘಟಿಸಲಾಯಿತು. ಕೇದಾರನಾಥ, ಬದರಿನಾಥ ಸೇರಿ ಚಾರ್ ಧಾಮಗಳ ಅಭಿವೃದ್ಧಿ, ಅತಿದೊಡ್ಡ ಸಮಸ್ಯೆಯಾಗಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ತಳಮಟ್ಟದಲ್ಲಿ ಮತಾಂತರ ವಿಚಾರಗಳ ಪ್ರಸ್ತಾಪಿಸುವ ಮೂಲಕ ಹಿಂದೂ ಮತಗಳ ಕ್ರೋಢೀಕರಣ ಮಾಡಿದ್ದು ಬಿಜೆಪಿ ಗೆಲುವಿಗೆ ಪ್ರಮುಖ ಕಾರಣಗಳಾಗಿವೆ.

ಕಾಂಗ್ರೆಸ್ ಸೋಲಿಗೆ ಕಾರಣಗಳು?


ಪಕ್ಷ ಸಂಘಟನೆಯಲ್ಲಿ ವಿಫಲ, ಹರೀಶ್ ರಾವತ್ ವಿಚಾರದಲ್ಲಿ ಗೊಂದಲ, ನಾಯಕರ ನಡುವೆ ಆತಂರಿಕ ಕಿತ್ತಾಟ, ಮೋದಿ ಜನಪ್ರಿಯತೆ ಹಂತಕ್ಕೆ ಕಾಂಗ್ರೆಸ್ ನಾಯಕರು ಜನರನ್ನು ತಲುಪುವಲ್ಲಿ ವಿಫಲವಾಗಿದ್ದು ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ.

WhatsApp
Facebook
Telegram
error: Content is protected !!
Scroll to Top