ಬೆಳ್ತಂಗಡಿ:ವಾಹನದಲ್ಲಿ ಹಿಂಸಾತ್ಮಕವಾಗಿ ಅಕ್ರಮ ಗೋ ಸಾಗಾಟ;ವಾಹನ ಸಹಿತ ಆರೋಪಿಗಳು ಪೊಲೀಸರ ವಶಕ್ಕೆ..!

ಬೆಳ್ತಂಗಡಿ: ಪಿಕ್ ಅಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ ನಡೆಸುತ್ತಿದ್ದ ವಾಹನ ಸಹಿತ ಇಬ್ಬರನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ವಾಹನದಲ್ಲಿ ಎರಡು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸುತ್ತಿರುವ ದೃಶ್ಯ ಕಂಡುಬಂದಿದೆ. ಕೊಡಲೇ ವಾಹನ ಸಹಿತ ಇಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

WhatsApp
Facebook
Telegram
error: Content is protected !!
Scroll to Top