ಒಂದೇ ದಿನ ಮೂವರನ್ನು ಮದುವೆಯಾದ ಕಾಂಗೋ ಯುವಕ..!

ಕಾಂಗೋ ಯುವಕನೋರ್ವ ತ್ರಿವಳಿ ಸಹೋದರಿಯರನ್ನು ಮದುವೆಯಾಗಿದ್ದು, ಮೂವರೊಂದಿಗೆ ಸಹಬಾಳ್ವೆಯಿಂದ ಜೀವಿಸುವುದಾಗಿ ಹೇಳಿದ್ದಾನೆ. ತ್ರಿವಳಿ ಸಹೋದರಿಯರು ಏಕಕಾಲದಲ್ಲಿ ಇವನಿಗೆ ಪ್ರೇಮ ನಿವೇದನೆಯನ್ನು ಮಾಡಿದ್ದಾರೆ. ಇದರಿಂದ ಗೊಂದಲಕ್ಕೊಳಗಾದರೂ ಸವರಿಸಿಕೊಂಡ ಆತ ಮೂವರನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದು, ಒಂದೇ ದಿನ ಮೂವರನ್ನು ಮದುವೆಯಾಗಿ ಬಹುಪತ್ನಿತ್ವಕ್ಕೆ ಜೈ ಎಂದಿದ್ದಾನೆ. ಆದರೆ ಆತನ ಪೋಷಕರು ಈ ತ್ರಿವಳಿ ಸಹೋದರಿಯರನ್ನು ಮದುವೆಯಾಗುವ ಈತನ ನಿರ್ಧಾರವನ್ನು ಬೆಂಬಲಿಸದೇ ಮದುವೆಯಿಂದ ದೂರ ಉಳಿದಿದ್ದಾರೆ ಎಂದು ತಿಳಿದು ಬಂದಿದೆ. 

ಮೂವರು ಸಹೋದರಿಯರನ್ನು ಮದುವೆಯಾದ ಈ ಅದೃಷ್ಟವಂತನ ಹೆಸರು ಲುವಿಜೊ (Luwizo) ಈ ಲುವಿಜೊ  ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ (Democratic Republic of Congo) ಪೂರ್ವ ಭಾಗದಲ್ಲಿರುವ ಸೌತ್‌ ಕಿವುವಿನಲ್ಲಿರುವ (South Kivu) ಕಲೇಹೆಯಲ್ಲಿ (Kalehe) ಮೂವರು ಸಹೋದರಿಯರನ್ನು ವಿವಾಹವಾಗಿದ್ದಾನೆ. ಅಲ್ಲಿ ಜನರು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಮದುವೆಯಾಗಲು ಕಾನೂನುಬದ್ಧ ಸಮ್ಮತಿ ಇದೆ.
 

ಈ ಮೂವರು ಸಹೋದರಿಯರಾದ ನತಾಶಾ(Natasha), ನಟಾಲಿಯಾ(Natalie) ಮತ್ತು ನಡೆಗೆ(Nadege) ಒಮ್ಮೆಲೆ ವಿವಾಹ ನಿವೇದನೆ ಮಾಡಿದಾಗ ಮೂವರಿಗೂ ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ ಎಂದು ಲುವಿಜೊ ಹೇಳಿದರು. ಮೂವರು ತ್ರಿವಳಿಗಳಾಗಿರುವುದರಿಂದ ಒಬ್ಬನನ್ನೇ ಮದುವೆಯಾಗಲು ಅವರು ಅರ್ಹರು ಎಂದು ಅವರು ಹೇಳಿದರು. ಅಲ್ಲದೇ ಈ ಮೂವರು ಸಹೋದರಿಯರಲ್ಲಿ ನಟಾಲಿಯಾಳನ್ನು ತಾನು ಮೊದಲು ಪ್ರೀತಿಸುತ್ತಿದ್ದೆ ಎಂದು ಲುವಿಜೊ ಹೇಳಿದರು.

ಈ ಮದುವೆ (wedding) ಸಮಾರಂಭದಲ್ಲಿ ಆಪ್ತರು ಹಾಗೂ ಕುಟುಂಬದವರು ಪಾಲ್ಗೊಂಡಿದ್ದರು. ಆದರೆ ಈ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ವರನ ಪೋಷಕರು ನಿರಾಕರಿಸಿದ್ದರು ಎಂದು ತಿಳಿದು ಬಂದಿದೆ. ಅವರು ತ್ರಿವಳಿಗಳಾಗಿರುವ ಕಾರಣ ನಾನು ಅವರೆಲ್ಲರನ್ನು ಮದುವೆಯಾಗಲು ನಿರ್ಬಂಧವನ್ನು ಹೊಂದಿದ್ದೇನೆ. ಇದು ಸುಲಭದ ನಿರ್ಧಾರವಾಗಿರಲಿಲ್ಲ ಏಕೆಂದರೆ ಇಲ್ಲಿಯವರೆಗೆ, ನನ್ನ ಹೆತ್ತವರಿಗೆ ನಾನು ಏನು ಮಾಡುತ್ತಿದ್ದೇನೆಂಬುದೇ ಅರ್ಥವಾಗುತ್ತಿಲ್ಲ” ಎಂದು ವರ ಲುವಿಜೋ ಹೇಳಿರುವುದನ್ನು ಉಲ್ಲೇಖಿಸಿ ಮಿರರ್ ವರದಿ ಮಾಡಿದೆ.

ನೀವು ಒಂದನ್ನು  ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕು, ಜೊತೆಗೆ, ಪ್ರತಿಯೊಬ್ಬರಿಗೂ ಅವರವರ ಆದ್ಯತೆಗಳು ಮತ್ತು ಅವರದೇ ಆದ ಕೆಲಸಗಳಿವೆ. ಆದ್ದರಿಂದ ಇತರರು ಏನು ಯೋಚಿಸಿದರೂ ನಾನು ತ್ರಿವಳಿಗಳನ್ನು ಮದುವೆಯಾಗಲು ಇಷ್ಟಪಡುತ್ತೇನೆ. ನನ್ನ ಪೋಷಕರು ನನ್ನ ನಿರ್ಧಾರವನ್ನು ತಿರಸ್ಕರಿಸಿದರು. ಅದಕ್ಕಾಗಿಯೇ ಅವರು ನನ್ನ ಮದುವೆಗೆ ಹಾಜರಾಗಲಿಲ್ಲ, ಆದರೆ ಪ್ರೀತಿಗೆ ಮಿತಿಯಿಲ್ಲ ಎಂದು ನಾನು ಹೇಳಬಲ್ಲೆ ಎಂದು ಲುವಿಜೋ ಹೇಳಿದ್ದಾಗಿ ವರದಿಯಾಗಿದೆ.

ಈ ಮೂವರು ಸಹೋದರಿಯರು ಬಾಲ್ಯದಿಂದಲೂ ಎಲ್ಲವನ್ನೂ ಪರಸ್ಪರ ಹಂಚಿಕೊಂಡಿದ್ದು, ಈಗ ಗಂಡನನ್ನು ಹಂಚಿಕೊಳ್ಳುವುದು ಕಷ್ಟಕರವಾದ ಆಯ್ಕೆ ಅಲ್ಲ ಎಂದು ಈ ಮೂವರು ಸಹೋದರಿಯರಲ್ಲಿ ಒಬ್ಬರು ಮಾಧ್ಯಮಕ್ಕೆ ಹೇಳಿದ್ದು, ಹೀಗೆ ಹೇಳಿದ ಓರ್ವ ಸಹೋದರಿ ಯಾರು ಎಂಬ ಬಗ್ಗೆ ಉಲ್ಲೇಖವಿಲ್ಲ. 

ಅವನು ನಮ್ಮೆಲ್ಲರನ್ನು ಮದುವೆಯಾಗಬೇಕು ಎಂದು ನಾವು ಅವನಿಗೆ ಹೇಳಿದಾಗ, ಅವನು ಆಘಾತಕ್ಕೊಳಗಾದನು. ಆದರೆ ಅವನು ಈಗಾಗಲೇ ನಮ್ಮೆಲ್ಲರನ್ನೂ ಪ್ರೀತಿಸುತ್ತಿದ್ದ ಕಾರಣ, ಯಾವುದೂ ಕೂಡ ನಮ್ಮ ಪ್ರೀತಿಗೆ ಅಡ್ಡಿಯಾಗಲಿಲ್ಲ. ಮೂವರು ಹೆಂಗಸರು ಒಬ್ಬ ಗಂಡನನ್ನು ಹಂಚಿಕೊಳ್ಳುವುದು ಅಸಾಧ್ಯವೆಂದು ಜನರು ಭಾವಿಸಿದ್ದರೂ, ನಮಗೆ, ಎಲ್ಲವನ್ನೂ ಹಂಚಿಕೊಳ್ಳುವುದು ಬಾಲ್ಯದಿಂದಲೇ ಅಭ್ಯಾಸವಾಗಿದೆ ಎಂದು ಸಹೋದರಿಯರು ಹೇಳಿದ್ದಾರೆ. ಹಲವು ದೇಶಗಳಲ್ಲಿ ಬಹುಪತ್ನಿತ್ವಕ್ಕೆ ಮಾನ್ಯತೆ ಇಲ್ಲ, ಕೆಲವು ದೇಶಗಳಲ್ಲಿ ಮಾತ್ರ ಬಹುಪತ್ನಿತ್ವಕ್ಕೆ ಅವಕಾಶವಿದೆ.

WhatsApp
Facebook
Telegram
error: Content is protected !!
Scroll to Top