ಆನ್ ಲೈನ್ ವಿಡಿಯೋ ಚಾಟಿಂಗ್ ಮೋಹಕ್ಕೆ ಲಕ್ಷ ಲಕ್ಷ ಕಳಕೊಂಡ ಚಿಕ್ಕಮಗಳೂರು ಟೆಕ್ಕಿ..!

ರಾಜ್ಯ(ಚಿಕ್ಕಮಗಳೂರು)ಪ್ರೀತಿ ಕುರುಡು, ಪ್ರೇಮಕ್ಕೆ ಕಣ್ಣಿಲ್ಲ ಅಂತಾರೆ… ಪ್ರೀತಿಹುಟ್ಬೇಕಾದ್ರೆ ಯಾವ್ದೇ ಜಾತಿ, ಧರ್ಮ, ವಯಸ್ಸನ್ನ ನೋಡಲ್ಲ ಅನ್ನೋ ಮಾತು ಸಹಜ. ಆದ್ರೆ ಒಬ್ಬರ ಮುಖ ಒಬ್ಬರು ನೇರವಾಗಿ ನೋಡದೆ ಆನ್ ಲೈನ್ ನಲ್ಲಿ ಹುಟ್ಟಿದ ಪ್ರೀತಿಯಿಂದ ಯುವಕನೊಬ್ಬ ಲಕ್ಷಾಂತರ ರೂ. ಕಳೆದುಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.. ಅರೇ ಇದೇನಿದು ಎಲ್ಲಾ ಗೊತ್ತಿದ್ರೂ ಕೂಡಾ 10 ರೂ. ಕೊಡದ ಈ ಕಾಲದಲ್ಲಿ ಮುಖ ನೋಡದೇ ಲಕ್ಷಾಂತರ ರೂ. ಕಳೆದುಕೊಂಡಿದ್ದಾದ್ರೂ ಹೇಗೆ ಅಂತೀರಾ ಹಾಗಾದ್ರೆ ಈ ಕುರಿತು ಒಂದು ವರದಿ ಇಲ್ಲಿದೆ.

ಆನ್ಲೈನ್ ಪ್ರೀತಿಯ ಜಾಲಕ್ಕೆ ಬಿದ್ದ ಯುವಕನೋರ್ವ ಹುಡುಗಿಯ ಮುಖವನ್ನೂ ನೋಡದೆ ಕೇಳಿ ಕೇಳಿದಷ್ಟು ಹಣವನ್ನು ಹಾಕಿ ಈಗ ಹಿಂಗು ತಿಂದ ಮಂಗನಂತಾಗಿ ನ್ಯಾಯಕ್ಕಾಗಿ ಪೊಲೀಸರ ಬಳಿ ಮೊರೆಯಿಟ್ಟಿರೋ ಘಟನೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ. ತಂತ್ರಜ್ಞಾನ ಬೆಳಿಯೋ ವೇಗಕ್ಕಿಂತ ಡಬ್ಬಲ್ ಸ್ಪೀಡ್ ನಲ್ಲಿ ಸೈಬರ್ ಅಪರಾಧಗಳೂ ಕೂಡಾ ಹೆಚ್ಚಾಗ್ತಾನೆ ಇವೆ. ಇವನ್ನ ತಡೆಯೋಕೆ ಅಂತಾ ಪೊಲೀಸ್ ಇಲಾಖೆ ಎಷ್ಟೆಲ್ಲ ಕಷ್ಟ ಪಡ್ತಿದೆ ಆದ್ರೂ ಕೂಡಾ ಇಂತಾ ಎಜುಕೇಟೆಡ್ ಫೂಲ್ ಗಳು ಸ್ಮಾರ್ಟ್ ವರ್ಕ್ ನೆಪದಲ್ಲಿ ಮೋಸ ಹೋಗ್ತಿದ್ದಾರೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ.. ಫೇಸ್ ಬುಕ್ ನೊಡುವಾಗ ಅಲ್ಲಿ ಬರುವ ಶೈನಿ ಆಫ್ ಕ್ವೀನ್ ಆನ್ ಲೈನ್ ಡೇಟ್ ಅಪ್ಲಿಕೇಷನ್ ನಿಂದರ್ ಪರಿಚಯವಾದ ಹುಡುಗಿ ಯುವಕನ ಬಳಿ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಹಣ ಪೀಕಿದ್ದಾಳೆಂದು ಯುವಕ ನಗರದ ಸೈಬರ್ ಠಾಣೆಯ ಕದ ತಟ್ಟಿದ್ದಾನೆ.

ಚಿಕ್ಕಮಗಳೂರು ಮೂಲದ ಯುವಕ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲ್ಸ ಮಾಡ್ತಿದ್ದ. ಈ ಯುವಕ ಸದ್ಯ ವರ್ಕ್ ಫ್ರಮ್ ಹೋಮ್ ನಲ್ಲಿದ್ದಾನೆ..ಫೇಸ್ ಬುಕ್ ನಲ್ಲಿ ಸಿಕ್ಕಿದ ಶೈನಿ ಅಪ್ಲಿಕೇಷನ್‌ ಲಿಂಕ್‌ನಿಂದ ಯುವತಿಯೊಬ್ಬಳ ಪರಿಚಯವಾಗಿದೆ, ಕ್ರಮೇಣ ಸ್ನೇಹ ಪ್ರೀತಿಯಾಗಿ ಬದಲಾಗಿದೆ.

ಇದನ್ನೇ ಬಂಡವಾಳ ಮಾಡಿಕೊಂಡಿರೋ ಚಾಲಾಕಿ ಐನಾತಿ ಹುಡುಗಿ ಮನಸೋ ಇಚ್ಛೆ ಹಣ ಕಿತ್ತಿದ್ದಾಳೆ. ಕೊನೆಗೆ ಈ ಯುವಕನ ಅಕೌಂಟ್ ಬ್ಲಾಕ್ ಮಾಡಿರೋದು ಕನ್ಫರ್ಮ್ ಆಗ್ತಿದ್ದಂತೆ ಯುವಕ ದಾರಿ ಕಾಣದೆ ಚಿಕ್ಕಮಗಳೂರಿನ ಸೈಬರ್ ಅಪರಾಧ ವಿಭಾಗದ ಪೊಲೀಸರ ಬಳಿ ಬಂದು ನ್ಯಾಯ ಕೊಡಿಸಿ ನ್ಯಾಯದ ಜೊತೆ ಕಳೆದುಕೊಂಡಿರೋ ಹಣವನ್ನೂ ವಾಪಸ್ ಕೊಡ್ಸಿ ಎಂದು ದುಂಬಾಲು ಬಿದ್ದಿದ್ದಾನೆ.

WhatsApp
Facebook
Telegram
error: Content is protected !!
Scroll to Top