ಶಿರಾಲಿ ಶಾರದಾಹೊಳೆ ಹಳೆಕೋಟೆ ಶ್ರೀ ಹನುಮಂತ ದೇವರ ಪುನರ್ ಪ್ರತಿಷ್ಠಾಪನೆ ಎಪ್ರೀಲ್ 13 ರಿಂದ ಪ್ರಾರಂಬ: ಅಧ್ಯಕ್ಷ ಸುಬ್ರಾಯ ನಾಯ್ಕ ಹೇಳಿಕೆ

ಭಟ್ಕಳ:ಕೋವಿಡ ಮಾರ್ಗಸೂಚಿಯ ಪಾಲನೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ತಾಲೂಕಿನ ಪ್ರಸಿದ್ಧ ಶಿರಾಲಿ ಶಾರದಾಹೊಳೆ ಹಳೆಕೋಟೆ ಶ್ರೀ ಹನುಮಂತ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯವು ಎಪ್ರಿಲ್ 13 ರಿಂದ 19ರವರೆಗೆ ವಿದ್ಯುಕ್ತವಾಗಿ ನೆರವೇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸುಬ್ರಾಯ ನಾಯ್ಕ ಹೇಳಿದ್ದಾರು

ಅವರು ದೇವಾಲಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ
ಶ್ರೀ ದೇವರ ಪ್ರತಿಷ್ಠಾಪನಾ ಕಾರ್ಯವನ್ನು ಫೆ. 8ರಿಂದ 14ರವರೆಗೆ ನಡೆಸಲು ತೀರ್ಮಾನಿಸಿ ಸಿದ್ಧತೆಯನ್ನು ಕೈಗೊಳ್ಳಲಾಗಿತ್ತು. ಆದರೆ ಸರಕಾರ ಹೊರಡಿಸಿದ ಮಾರ್ಗಸೂಚಿಯ ಕಾರಣ ಕಾರ್ಯಕ್ರಮವನ್ನು ಮುಂದೂಡುವುದು ಅನಿವಾರ್ಯ ವಾಯಿತು.ಇದೀಗ ತಂತ್ರಿಗಳ ನಿರ್ದೇಶನದ ಪ್ರಕಾರ 3-4 ದಿನಾಂಕಗಳನ್ನು ಆಯ್ಕೆ ಮಾಡಿಕೊಂಡು, ಅಂತಿಮವಾಗಿ ಶ್ರೀ ಗುರುಗಳ ಹಾಗೂ ಶ್ರೀ ದೇವರ ಆಶೀರ್ವಾದದಂತೆ ಏ. 15ರಂದು ಮಿಥುನ ಲಗ್ನ ಮುಹೂರ್ತದಲ್ಲಿ ಶ್ರೀದೇವರ ಪ್ರತಿಷ್ಠಾನಾ ಕಾರ್ಯವನ್ನು ಕಾರ್ಯವನ್ನು ನಡೆಸಲು ನಿಶ್ಚಯಿಸಲಾಗಿದೆ. ಉಳಿದಂತೆ ಶ್ರೀ ದೇವರ ಕಾರ್ಯಕ್ಕೆ ಆಗಮಿಸುವ ಗಣ್ಯರು, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಾಗಿದ್ದು, ಮುಂದಿನ 1 ತಿಂಗಳ ಒಳಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ, ಏಪ್ರಿಲ್ ಮಾಸದಲ್ಲಿ ಕೆಲವೊಂದು ಮದುವೆ ಕಾರ್ಯಕ್ರಮಗಳು
ನಿಗದಿಯಾಗಿದ್ದು, ಸಾರ್ವಜನಿಕರು ತಮ್ಮ ವೈಯಕ್ತಿಯ ಕೆಲಸ ಕಾರ್ಯಗಳಿಗೆ ಹೊಂದಾಣಿಕೆ ಮಾಡಿಕೊಂಡು ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿ ಕೊಂಡರು.ದೇವಸ್ಥಾನದ ಮೊಕ್ತೇಸರು ಸುಬ್ರಾಯ ನಾಯ್ಕ ತೆರ್ನಮಕ್ಕಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ, ಜೆ.ಜೆ.ನಾಯ್ಕ, ವೆಂಕಟೇಶ ನಾಯ್ಕ ಶಿರಾಲಿ, ಗೌರೀಶ ನಾಯ್ಕ, ಮಂಜುನಾಥ ನಾಯ್ಕ ಬೈಲೂರು ಮೊದಲಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top