ಭಟ್ಕಳ ತಾಲೂಕಿನಲ್ಲಿ ಸರಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿ: ಭಟ್ಕಳ ಪೋಲಿಸ್ ತಂಡ ಚಾಂಪಿಯನ್

ಭಟ್ಕಳ ತಾಲೂಕಿನ ಪೋಲಿಸ್ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಭಟ್ಕಳ ತಾಲೂಕಿನ ವಿವಿಧ ಇಲಾಖೆಗಳ ಸರಕಾರಿ ನೌಕರರಿಗಾಗಿ ಕ್ರಿಕೆಟ್ ಪಂದ್ಯಾವಳಿಯು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ ದ ವತಿಯಿಂದ ನಡೆಯಿತು

ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಒಟ್ಟೂ 6 ತಂಡಗಳು ಭಾಗವಿಸಿದ್ದವು… ಅಂತಿಮ ಪಂದ್ಯದಲ್ಲಿ ಮುರ್ಡೇಶ್ವರ ಪೋಲೀಸ್ ತಂಡವನ್ನು ಭಟ್ಕಳ ಪೋಲೀಸ್ ತಂಡ ಸೋಲಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು…. ಎಲ್ಲಾ ತಂಡಗಳ ನೌಕರ ಕ್ರೀಡಾಪಟುಗಳು ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ಸೌಹಾರ್ದಯುತವಾಗಿ ಆಡುವ ಮೂಲಕ ಕ್ರೀಡಾ ಸ್ಪೂರ್ತಿಗೆ ಮಾದರಿಯಾದದ್ದು ವಿಶೇಷವಾಗಿತ್ತು… ಮುರ್ಡೇಶ್ವರ ಪೋಲೀಸ್ ತಂಡವು ರನ್ನರ್ಸ್ ಅಪ್ ತಂಡವಾಗಿ ಹೊರಹೊಮ್ಮಿತು..
ಚಾಂಪಿಯನ್ ತಂಡಕ್ಕೆ ಹಾಗೂ ರನ್ನರ್ಸ್ ಅಪ್ ಆದ ತಂಡಕ್ಕೆ ಹಾಗೂ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಕ್ಕೆ ಭಟ್ಕಳ ತಾಲೂಕು ಸರಕಾರಿ ನೌಕರರ ಸಂಘವು ಶುಭಾಶಯಗಳನ್ನು ಸಲ್ಲಿಸಿದೆ

WhatsApp
Facebook
Telegram
error: Content is protected !!
Scroll to Top