ಭಟ್ಕಳ ಸಿದ್ದಾರ್ಥ ಎಜ್ಯುಕೇಶನ್‌ ಸಂಸ್ಥೆಗೆ ದಶಮಾನೋತ್ಸವ ಸಂಭ್ರಮ: ಪ್ರಸ್ತುತ ಕಾಲಮಾನದಲ್ಲಿ ಹೆಣ್ಣು ಮಕ್ಕಳ ವಿಧ್ಯಾಭ್ಯಾಸಕ್ಕೆ ಒತ್ತು ನೀಡಬೇಕು : ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಭಟ್ಕಳ : ತನ್ನ ಹತ್ತನೆ ವರ್ಷದ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿರುವ ಭಟ್ಕಳ ತಾಲೂಕಿನ ಪ್ರತಿಷ್ಟೀತ ವಿಧ್ಯಾಸಂಸ್ಥೆಯಾದ ಸಿದ್ದಾರ್ಥ ಏಜ್ಯುಕೇಶನ್‌ ಟ್ರಷ್ಟಗೆ ಹಾರ್ಧಿಕ ಅಭಿನಂದನೆಗಳು ಒಂದು ಈ ವಿಧ್ಯಾ ಸಂಸ್ಥೆಯು ಇನ್ನು ಹೆಚ್ಚಿನ ಅಭಿವೃದ್ದಿಯನ್ನು ಸಾಧಿಕಸುವಂತಾಗಲಿ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು

ಅವರು ತಾಲೂಕಿನ ಸಿದ್ದಾರ್ಥ ಎಜ್ಯುಕೇಶನ್‌ ಟ್ರಷ್ಟಿನ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ಈ ವಿಧ್ಯಾ ಸಂಸ್ಥೆಯು ಉತ್ತಮವಾದ ಕಾರ್ಯಗಳನ್ನು ಮಾಡುತ್ತಲೆ ಬಂದಿದೆ ಈಗಿನ ಕಾಲದಲ್ಲಿ ಮಹಿಳಾ ವಿಧ್ಯಾಭ್ಯಾಸಕ್ಕೆ ಒತ್ತು ಕೊಡಲಾಗುತ್ತಿದೆ ನಮ್ಮ ಸರಕಾರ ಕೆಣ್ಣು ಮಕ್ಕಳ ವಿಧ್ಯಾಭ್ಯಾಕ್ಕೆ ಮಹತ್ವವನ್ನು ಕೊಡುತ್ತಲೆ ಬಂದಿದೆ ಕಾರಣ ಹಲವಾರು ಯೊಜನೆಗಳನ್ನು ಹಾಕಿಕೊಳ್ಳುತ್ತಲೆ ಬಂದಿದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಶಾಸಕ ಸುನಿಲ್‌ ನಾಯ್ಕ ಸಂಸ್ಥೆಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ತಾಲೂಕಿನಲ್ಲಿ ಸಿದ್ದಾರ್ಥ ವಿಧ್ಯಾ ಸಂಸ್ಥೆಯು ಉತ್ತಮವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಈ ಸಂಸ್ಥೆಯಿಂದ ಅನೇಕ ವಿಧ್ಯಾರ್ಥಿಗಳು ಹೈಯರ್‌ ಎಜ್ಯುಕೇಷನ್‌ ಮುಗಿಸಿದ್ದಾರೆ ಹಾಗು ಉತ್ತಮ ಸ್ಥಾನವನ್ನು ತಲುಪಿದ್ದಾರೆ ಕಾರಣ ನಾನು ಈ ವಿಧ್ಯಾ ಸಂಸ್ಥೆಯನ್ನು ಅಭಿನಂದಿಸುತ್ತೆನೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಆರೋಗ್ಯ ಸಹಾಯಕ ಈರಯ್ಯ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು ಹಾಗು ಸಾದನೆ ಗೈದ ವಿಧ್ಯಾರ್ಥಿಗಳಿಗೆ ಹಾಗು ಉತ್ತಮ ಶಿಕ್ಷಕರಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೆಜರ್ ಹಾಗು ದಶಮಾನೊತ್ಸವ ಸಮಿತಿ ಅಧ್ಯಕ್ಷರಾದ ಎಂ ಆರ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು

ಸಂಸ್ಥೆಯ ಮುಖ್ಯಸ್ಥರಾದ ಅರ್ಚನಾ ಯು ಅವರು ಕಾರ್ಯಕ್ರಮಕ್ಕೆ ಗಣ್ಯತಿಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು.

ಈ ಸಂದರ್ಬದಲ್ಲಿ ಮಾಜಿ ಶಾಸಕ ಜೇ ಡಿ ನಾಯ್ಕ, ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ , ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇವತಿ ನಾಯ್ಕ, ಹೊನ್ನಾವರ ಅರ್ಬನ್ ಕೊ ಆಪರೇಟಿವ್ ಭ್ಯಾಂಕ್ ಮ್ಯಾನೆಜರ್ ರಾಜೀವ್ ಶಾನಬಾಗ್ , ಹಳೆಕೋಟೆ ಹನುಮಂತ ದೇವಸ್ಥಾನ ಅಧ್ಯಕ್ಷರಾದ ಸುಬ್ರಾಯ ನಾಯ್ಕ, ಸಿದ್ದಾರ್ಥ ಸಂಸ್ಥೆಯ ಟ್ರಸ್ಟಿ ಶ್ರೀದರ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top