ವೋಟ್ ಬ್ಯಾಂಕ್​ಗಾಗಿ ಸಿದ್ದರಾಮಯ್ಯ ಸುಳ್ಳು ಹರಡುತ್ತಿದ್ದಾರೆ: ಸಚಿವ ನಾಗೇಶ್​ ಕಿಡಿ ಹಿಜಾಬ್‌ ಈಗ ರಾಜಕಿಯ ಚದುರಂಗದಾಟದಲ್ಲಿ ಅಸ್ತ್ರವೆ?

ವೋಟ್ ಬ್ಯಾಂಕ್ ಗಾಗಿ ಹೀಗೆ ಮಾತಾಡಿದ್ರಾ ಅಥವಾ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೀಗೆ ಹೇಳಿದರ ಅವರೇ ಹೇಳಬೇಕು. ಅವರು ಒಮ್ಮೆ ಶಿಕ್ಷಣ ನಿಯಮಗಳನ್ನು ಓದಿಕೊಳ್ಳಲಿ ಎಂದು ತಿರುಗೇಟು ನೀಡಿದರು.

 ಬೆಂಗಳೂರು (ಫೆ. 4):  ರಾಜ್ಯದಲ್ಲಿ ಜೋರಾಗಿರುವ ಹಿಜಾಬ್ ವಿವಾದವನ್ನು (Hijab Controversy) ಸಿದ್ದರಾಮಯ್ಯ (Siddaramaiah) ವೋಟ್​ ಬ್ಯಾಂಕ್​ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹಿರಿಯ ರಾಜಕೀಯ ನಾಯಕರಾಗಿರುವ ಅವರು ಮತಗಳಿಗಾಗಿ ಈ ರೀತಿ ಜನರನ್ನು ದಾರಿತಪ್ಪಿಸುವುದ ಸರಿಯಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh)​ ಕಿಡಿಕಾರಿದರು. ಸಿದ್ದರಾಮಯ್ಯ ಹಿರಿಯ ಮುದ್ಸದ್ದಿ . ಕಾನೂನು ಗೊತ್ತಿರುವವರು. ಅವರು ಈ ರೀತಿ ಸುಳ್ಳು ಹೇಳಿದರೆ ದುಃಖವಾಗುತ್ತದೆ. ವೋಟ್ ಬ್ಯಾಂಕ್ ಗಾಗಿ ಹೀಗೆ ಮಾತಾಡಿದ್ರಾ ಅಥವಾ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೀಗೆ ಹೇಳಿದರ ಅವರೇ ಹೇಳಬೇಕು. ಅವರು ಒಮ್ಮೆ ಶಿಕ್ಷಣ ನಿಯಮಗಳನ್ನು ಓದಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಕೆಲವು ಪಕ್ಷಗಳಳಿಗೆ ರಾಷ್ಟ್ರದ ಪ್ರಗತಿ, ಏಕತೆಯ ಬಗ್ಗೆ ಕಾಳಜಿ ಇಲ್ಲ. ಮತಗಳೆ ಅವರಿಗೆ ಮುಖ್ಯ. ಸ್ವ ಹಿತಕ್ಕಾಗಿ ಯಾರು ಹೇಗೆ ಬೇಕಾದರೂ ಇರಲು ಬಿಡುತ್ತಾರೆ. ಹಲವು ವರ್ಷಗಳಿಂದ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಕಾನೂನು ಓದಿರುವ ಸಿದ್ದರಾಮಯ್ಯ ದಿಕ್ಕು ತಪ್ಪಿಸುತ್ತಿದ್ದಾರೆ. 2018ರಲ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಈ ಸಂಬಂಧ ನಿಯಮ ರೂಪಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದಮೇಲೆ ಸಮವಸ್ತ್ರ ತಂದಿದ್ದಲ್ಲ ಎಂದು ಇದೇ ವೇಳೆ ಕುಟುಕಿದರು

ಜನವರಿಯಿಂದ ಶುರುವಾದ ಗೊಂದಲ
ಶಿಕ್ಷಣ ಸಂಸ್ಥೆಗಳು ಅಂತಿಮಗೊಳಿಸಿರುವ ಸಮವಸ್ತ್ರವನ್ನಷ್ಟೇ ಧರಿಸಿ ಬರಲು ಅವಕಾಶವಿದೆ ಎನ್ನುವುದು ಸರ್ಕಾರದ ನಿರ್ಣಯ. ಇದನ್ನೇ ಶಾಲೆಯ ಪ್ರಾಂಶುಪಾಲರು ಕೂಡ ತಿಳಿಸಿದ್ದಾರೆ. ಲಿಖಿತರೂಪದಲ್ಲೇ ಅವರೆಲ್ಲ ಇದನ್ನು ಒಪ್ಪಿಕೊಂಡಿದ್ದರು. ಶಿಕ್ಷಣ ಸಂಸ್ಥೆಗಳು ಸಮನ್ವಯ ಕಾಪಾಡಲು ಇರುವುದು. ಕಳೆದ ಒಂದೂವರೆ ವರ್ಷದಿಂದ ಆ ಮಕ್ಕಳು ಯುನಿಫಾರ್ಮ್ ಹಾಕಿಕೊಂಡು ಬರುತ್ತಿದ್ದರು. ಆದರೆ, ಇದೀಗ ಜನವರಿಯಿಂದ ಯಾರದ್ದೋ ಪ್ರೇರಣೆಯಿಂದ ಹೀಗೆ ಮಾಡಿದ್ದಾರೆ. ಆ ವಿದ್ಯಾರ್ಥಿಗಳ ಮನವೊಲಿಸಲು ರಘುಪತಿ ಭಟ್ ಅವರು ಪ್ರಯತ್ನ ಮಾಡುತ್ತಿದ್ದಾರೆ. ಅವರ ಪೋಷಕರಿಗೂ ಕೂಡ ಈ ಕುರಿತು ಮನವೊಲಿಸಲಾಗಿದೆ. ಅದರಲ್ಲಿ ಕೆಲವು ಮಕ್ಕಳು ಕೂಡ ಒಪ್ಪಿ ಬಂದಿದ್ದಾರೆ ಎಂದರು.

ಕೋರ್ಟ್​ ತೀರ್ಪಿನ ಬಳಿಕ ವಿಚಾರ
ಕೋರ್ಟ್ ನಲ್ಲಿ ಈ ವಿಚಾರ ಇದೆ. ಆ ವಿಚಾರದ ಬಗ್ಗೆ ಲೀಗಲ್ ಹಾಗೂ ನಮ್ಮ ವಿಭಾಗ ದವರನ್ನು ಕರೆದು ಸಭೆ ಮಾಡಿದ್ದಾರೆ. ಕೋರ್ಟ್ ನಲ್ಲಿ ಸರ್ಕಾರದ ಪರವಾಗಿ ಮಾತನಾಡುವ ಬಗ್ಗೆ ಹೇಳಿದ್ದಾರೆ. ನಿಯಮ ಏನು ಹೇಳತ್ತೆ ಎನ್ನುವುದನ್ನು ನಮಗೆ ತಿಳಿಸಿದ್ದಾರೆ. 2013, 2018. ರಲ್ಲಿ ನಿಯಮ ಮಾಡಲಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಯುನಿಫಾರ್ಮ್ ಮಾಡುವ ಅಧಿಕಾರ ಕೊಡಲಾಗಿದೆ. ಈ ತೀರ್ಪು ಬರುವರೆಗೆ ಈಗ ಇರುವ ಸಮವಸ್ತ್ರ ವನ್ನು ಮಕ್ಕಳು ಮುಂದುವರೆಸಬೇಕು ಎಂದರು.

ಕೋರ್ಟ್​ ಮೆಟ್ಟಿಲೇರಿದ ವಿದ್ಯಾರ್ಥಿನಿ

ಹಿಜಾಬ್ ಧರಿಸಿ ತರಗತಿಗೆ ಬರುವುದಕ್ಕೆ ಅವಕಾಶ ನೀಡುವಂತೆ  ರೇಶಮ್ ಎಂಬ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಭಾರತೀಯ ಸಂವಿಧಾನದ 14 ಮತ್ತು 25 ನೇ ವಿಧಿ ಅಡಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡುವಂತೆ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಸಿಎಂ ಮೌನ
ಇನ್ನು ದೇಶದಲ್ಲಿ ಸುದ್ದಿಯಾಗುತ್ತಿರುವ ಈ ಹಿಜಾಬ್​ ವಿಚಾರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಮುಂದಾಗಿಲ್ಲ. ಇದು ಧರ್ಮದ ಸೂಕ್ಷ್ಮತೆ ವಿಚಾರವಾಗಿರುವ ಹಿನ್ನಲೆ ಈ ವಿಚಾರದ ಕುರಿತು ಮಾಧ್ಯಮ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ಸಂಬಂಧ ಇಂದು ಅವರು ಶಿಕ್ಷಣ ಸಚಿವ ಬಿಸಿ ನಾಗೇಶ್​ ಪಿಯು ಮಂಡಳಿ ನಿರ್ದೇಶಕಿ ಸ್ನೇಹಲ್, ಶಿಕ್ಷಣ ಇಲಾಖೆ ಆಯುಕ್ತರು, ಕಾನೂನು ಸಲಹೆಗಾರರರೊಂದಿಗೆ ಸಭೆ ನಡೆಸಿದರು. ಈ ವೇಳೆ ಈ ಕುರಿತು ವಿವರಣೆ ಪಡೆದರು

WhatsApp
Facebook
Telegram
error: Content is protected !!
Scroll to Top