ಬಾರ್ಡರ್‌ ಕ್ರಾಸ್‌ ಮಾಡಿದ ಕೋಳಿ: ಮಾರ್ನಿಂಗ್ ವಾಕ್ಗೆ ಹೋಗಿ ಲಾಕ್! ಬಾರ್ಡರ್ ಕ್ರಾಸ್ ಮಾಡಿ ಕೋಳಿ ಚಿಕನ್‌ ಲಾಲಿ ಪಾಪ್‌ ಆಯಿತೆ ?

ವಿದೇಶದ ಕೆಲವು ನಿಯಮಗಳು ವಿಚಿತ್ರವಾಗಿರುತ್ತವೆ. ವಿಶ್ವಾದ್ಯಂತ ರಾಷ್ಟ್ರಗಳು ಅನುಸರಿಸೋ ರೂಲ್ಸ್(Rules) ಬಹಳಷ್ಟು ಭಿನ್ನವಾಗಿವೆ. ಕೆಲವು ಭೀಕರ, ಕೆಲವು ಕ್ರೂರ, ಇನ್ನೂ ಕೆಲವು ಫನ್ನಿ. ಹೌದು. ಇದು ತುಂಬಾ ಕಾಮನ್. ಆದರೆ ನಿಯಮಗಳನ್ನು ಫಾಲೋ ಮಾಡುವಾಗ ಬಹಳಷ್ಟು ಸಲ ಇದು ಹೊಂದಿಕೊಳ್ಳುವುದಿಲ್ಲ, ಆದರೆ ನಿಯಮಗಳನ್ನು ಮಾಡಿರುವುದೇ ಅನುಸರಿಸುವುದಕ್ಕಲ್ಲವೇ ? ಹಾಗಾಗಿ ರೂಲ್ಸ್ ಬ್ರೇಕ್ ಮಾಡುವ ಹಾಗಿಲ್ಲ. ಆದರೆ ನಾಯಿ ಬೆಕ್ಕು ಕೋಳಿಗೆ ರೂಲ್ಸ್ ಗೊತ್ತೇ ? ನಮ್ಮನೆಯಲ್ಲಿರು ಎಂದರೆ ಚಂಗನೆ ಜಿಗಿದು ಪಕ್ಕದ ಮನೆ ಕಂಪೌಂಡ್ ಸೇರುವ ಇವುಗಳು ದೊಡ್ಡ ದೊಡ್ಡ ರೂಲ್ಸ್ ಫಾಲೋ ಮಾಡಬೇಕೆಂದು ನಿರೀಕ್ಷಿಸಲು ಸಾಧ್ಯವೇ ? ಇಲ್ಲೊಂದು ಕೋಳಿ ಹೇಗೆ ಸಿಕ್ಕಾಕೊಂಡಿದೆ ನೋಡಿ. ಇಲ್ಲಿದೆ ಕೋಳಿ ಹಾಗೂ ರಕ್ಷಣಾ ವಲಯದ(Security Area) ಇಂಟ್ರೆಸ್ಟಿಂಗ್ ಸ್ಟೋರಿ.

ಭದ್ರತಾ ವಲಯ ಅಂದರೆ ಅಲ್ಲಿನ ನಿಯಮಗಳ ಕುರಿತು ಪ್ರತ್ಯೇಕ ಹೇಳಬೇಕಿಲ್ಲ. ಸ್ವತಃ ಅಲ್ಲಿನ ಸಿಬ್ಬಂದಿಗಳೇ ಒಳಗೆ ಸೇರುವುದು ಕಷ್ಟ, ಅದು ಯಾವುದೇ ದೇಶವಿರಲಿ, ಭದ್ರತಾ ವಲಯಗಳಲ್ಲಿ ವಿಶೇಷ ನಿಯಮಗಳಿರುತ್ತವೆ. ಅಲ್ಲಿನ ಆಸುಪಾಸಿನಲ್ಲಿ ಅನುಸರಿಸಲೇಬೇಕಾದ ರೂಲ್ಸ್‌ಗಳಿರುತ್ತವೆ. ಇದೀಗ ಅಮೆರಿಕದ(America) ಪೆಂಟಗಾನ್‌ನ(Pentagon) ತುಂಟ ಕೋಳಿ ಸರಿಯಾಗಿ ಸಿಕ್ಕಿ ಹಾಕಿಕೊಂಡಿದೆ. ಪಾಪ ಅದಕ್ಕಂತೂ ಭದ್ರತಾ ವಲಯ, ರೂಲ್ಸ್ ಗೊತ್ತಿರುತ್ತಾ ಎಂದು ಕೇಳಬೇಡಿ, ರೂಲ್ ಈಸ್‌ ಎ ಈವನ್ ಫಾರ್ ಏನ್ ಫೂಲ್ ಅಂತಾರೆ ಅಲ್ಲಿನ ಅಧಿಕಾರಿಗಳು.
ಕೋಳಿಯ ಜಾಲಿ ಮಾರ್ನಿಂಗ್ ವಾಕ್

ಅಮೆರಿಕಾದ ಪೆಂಟಗಾನ್‌ನಲ್ಲಿ ತುಂಟ ಕೋಳಿಯೊಂದು ಭದ್ರತಾ ವಲಯದಲ್ಲಿ ಜಾಲಿಯಾಗಿ ಸುತ್ತುತ್ತಿತ್ತು. ಭದ್ರತಾ ವಲಯ ಅಂದ ಮೇಲೆ ಕೇಳಬೇಕಾ ? ಫುಲ್‌ಟೈಂ ಸರ್ವೈಲೆನ್ಸ್, ಕೋಳಿ ಸಿಕ್ಕಿಹಾಕಿಕೊಂಡಿದೆ. ಪೆಂಟಗಾನ್‌ನಲ್ಲಿರುವ ಅಮೆರಿಕಾದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯ ಸುತ್ತಮುತ್ತ ಬೆಳ್ಳಂಬೆಳಗ್ಗೆ ಸುತ್ತುತ್ತಿದ್ದ ಕೋಳಿಯನ್ನು ಅಧಿಕಾರಿಗಳು ಕಂಡಿದ್ದಾರೆ. ಏರ್‌ಲಿಂಗ್ಟನ್ ವರ್ಜಿನಿಯಾದ ಪ್ರಾಣಿ ಸಂರಕ್ಷಣಾ ಸಂಘ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ(Social Media) ಶೇರ್ ಮಾಡಿದೆ.

ಸೆಕ್ಯುರಿಟಿ ಚೆಕ್ ಪಾಯಿಂಟ್ನಲ್ಲಿ ಕೋಳಿಗೇನು ಕೆಲಸ ?

ಅಂದ ಹಾಗೆ ಕೋಳಿ ರೋಡ್ ಕ್ರಾಸ್ ಮಾಡಿದ್ದು ಪೆಂಟಗಾನ್‌ಗೆ ಬರುವುದಕ್ಕಂತೆ. ನಂತರ ಸಂಘದ ವ್ಯಕ್ತಿಯೊಬ್ಬರು ಕೋಳಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸಂಘಟನೆಯ ವಕ್ತಾರ ಚೆಸ್ಲಿಯಾ ಜೋನ್ಸ್ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಕೋಳಿ ಸಿಕ್ಕಿಕೊಂಡಿರುವ ಸ್ಥಳದ ಮಾಹಿತಿಯನ್ನು ರಿವೀಲ್ ಮಾಡಲು ಸಾಧ್ಯವಿಲ್ಲ. ಇದು ಈ ಮೇಲ್ ಮೂಲಕ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಕೋಳಿ ಎಲ್ಲಿ ಸಿಕ್ಕಿತು ಎಂಬುದನ್ನು ನಿಖರವಾಗಿ ರಿವೀಲ್ ಮಾಡಲು ಅನುಮತಿ ಇಲ್ಲ, ಇದು ಸೆಕ್ಯುರಿಟಿ ಚೆಕ್ ಪಾಯಿಂಟ್‌ನಲ್ಲಿತ್ತು ಎಂದಷ್ಟೇ ಹೇಳಬಲ್ಲೆವು ಎಂದಿದ್ದಾರೆ. ಕೋಳಿ ಎಲ್ಲಿಂದ ಬಂತು, ಪೆಂಟಗಾನ್ಗೆ ಹೇಗೆ ಬಂತು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಬ್ರೌನ್ ಕಲರ್ ಗರಿಗಳನ್ನು ಹೊಂದಿದ್ದ, ಕೆಂಬಣ್ಣದ ಜುಟ್ಟಿನ ಚಂದದ ಕೋಳಿಯ ಬಣ್ಣ ರೋಡ್ ಐಲ್ಯಾಂಡ್ ರೆಡ್. ಮುದ್ದಾಗಿದ್ದ ಕೋಳಿ ಬಹಳ ಹೆದರಿಕೊಂಡಿತ್ತು, ಆದರೂ ಒಂದಷ್ಟು ಜನರಿಗೆ ಅದನ್ನು ಮುದ್ದು ಮಾಡುವುದಕ್ಕೆ ಅವಕಾಶ ಕೊಟ್ಟಿತ್ತು ಎಂದಿದ್ದಾರೆ ಜೋನ್ಸ್. ಇದೀಗ ಕೋಳಿಗೆ ಹೆನ್ನಿ ಪೆನ್ನಿ ಎಂದು ಹೆಸರಿಡಲಾಗಿದ್ದು, ಈ ಹೆಸರು ಸ್ಕೈ ಈಸ್ ಫಾಲಿಂಗ್ ಜನಪದ ಕಥೆಯಲ್ಲಿ ಬರುವಂತಹ ಒಂದು ಹೆಸರಾಗಿದೆ. ಕೋಳಿ ಸದ್ಯ ಎಲ್ಲೆಡೆ ಖ್ಯಾತಿಯನ್ನು ಗಳಿಸಿದೆ. ಜಿಮ್ಮಿ ಫಾಲನ್ ಕೋಳಿ ಬಗ್ಗೆ ‘ದಿ ಟುನೈಟ್ ಶೋ’ ನಲ್ಲಿ ಒಂದು ಸಾಂಗ್ ಪ್ರೆಸಂಟ್ ಮಾಡಿದ್ದಾರೆ. ಪಶ್ಚಿಮ ವರ್ಜೀನಿಯಾದಲ್ಲಿ ಸಣ್ಣ ಫಾರ್ಮ್ ಹೊಂದಿರುವ ಸಿಬ್ಬಂದಿಯೊಬ್ಬರು ಹೆನ್ನಿ ಪೆನ್ನಿಯನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ ಎಂದು ಜೋನ್ಸ್ ಹೇಳಿದ್ದಾರೆ.

WhatsApp
Facebook
Telegram
error: Content is protected !!
Scroll to Top