ಬೀನಾ ವೈದ್ಯ ಸಂಸ್ಥೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ : ಹೆಣ್ಣು ಮಕ್ಕಳಲ್ಲಿ ಮುಖ್ಯವಾಗಿ ಆತ್ಮ ವಿಶ್ವಾಸವಿರಬೇಕು ವಲಯ ಅರಣ್ಯ ಅಧಿಕಾರಿ ಸವಿತಾ ದೇವಾಡಿಗ

ಭಟ್ಕಳ ಹೆಣ್ಣು ಮಕ್ಕಳು ತಮ್ಮಲ್ಲಿ ಮೊದಲು ಆತ್ಮವಿಶ್ವಾಸ ಬೆಳೆಸಿಕೊಳ್ಳ ಬೇಕು ಸಿಕ್ಕ ಅವಕಾಶವನ್ನು ಬಳಕೆ ಮಾಡಿಕೊಳ್ಳ ಬೇಕು ಎಂದು ವಲಯ ಅರಣ್ಯ ಅಧಿಕಾರಿ ಸವಿತಾ ದೇವಾಡಿಗ ಹೇಳಿದರು

ಅವರು ಬೀನಾ ವೈದ್ಯ ಸಂಸ್ಥೆಯಯಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ಹೆಣ್ಣು ಒಂದು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾಳೆ ಹೆಣ್ಣು ಮಕ್ಕಳು ಕಿಳರಿಮೆಯನ್ನು ಬೇಳೆಸಿಕೊಳ್ಳಬಾರದು ಎಂದು ಹೇಳಿದರು

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಪುಷ್ಪಲತಾ ಮಾತನಾಡಿ ಹಲವಾರು ಸಾದಕಿಯರ ಸಾದನೆಯ ಹಾದಿಯ ಬಗ್ಗೆ ವಿವರಿಸಿದರು ಹಾಗು ಶಾಂತಿ ತಾಳ್ಮೆ ಸಹನೆ ಪ್ರೀತಿ ಸಮರ್ಪಣೆ ಭರವಸೆ ಪ್ರೋತ್ಸಾಹಿಸುವಿಕೆ ಕಾಳಜಿ ಮಮತೆ ತಾಯಿತನ ಇವೇಲ್ಲವು ಹೆಣ್ಣಿನ ಮೂಲ ಸ್ವರೂಪ ಎಂದು ಹೇಳಿದರು ಪ್ರತಿಯೋಂದು ಹೆಣ್ಣಿನಲ್ಲಿಯೂ ವಿಶಿಷಟವಾದ ಶಕ್ತಿಯೋಂದು ಅಡಗಿರುತ್ತದೆ ಅದನ್ನು ಗುರುತಿಸುವಿಕೆ ನಮ್ಮ ಸಮಾಜದಿಂದ ಆಗ ಬೇಕಾಗಿದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಹೆಣ್ಣುಮಕ್ಕಳ ಸಾದನೆಗೆ ಸಂಬಂದಿಸಿದಂತೆ ಹಲವಾರು ಸಾಕ್ಯ ಚಿತ್ರಗಳನ್ನು ತೋರಿಸಿದರು ಉಪನ್ಯಾಸಕಿ ಉಷಾ ನಾಯ್ಕ ಮತ್ತು ದ್ವೀತಿಯ ಪಿಯಿಸಿ ವಿಧ್ಯಾರ್ಥಿನಿ ಸಂಜನಾ ನಾಯ್ಕ ಪ್ರಾರ್ಥಿಸಿದರು ಕನ್ನಡ ಉಪನ್ಯಾಸಕಿ ಹೇಮಾವತಿ ನಾಯ್ಕ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರೆ ಹಿಂದಿ ಉಪನ್ಯಾಸಕಿ ಸಂಗೀತ ನಾಯ್ಕ ಅವರು ಅಥಿತಿಗಳಿಗೆ ವಂದನಾರ್ಪಣೆ ಸಲ್ಲಿಸಿದರು

WhatsApp
Facebook
Telegram
error: Content is protected !!
Scroll to Top