ಬಂದರು ನಿರ್ಮಾಣದ ನಂತರ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯಲಿದೆ : ಸಂಸದ ಅನಂತಕುಮಾರ ಹೆಗಡೆ

ಹೊನ್ನಾವರ: ಜಿಲ್ಲೆಯಲ್ಲಿ ಬಂದರು ನಿರ್ಮಾಣದ ಬಳಿಕ ಉತ್ತರ ಕರ್ನಾಟಕದ ಅಭಿವೃದ್ಧಿಯ ಹೆಬ್ಬಾಗಿಲು ಆಗಿ ಜಿಲ್ಲೆಯ ಕರಾವಳಿ ಗುರುತಿಸಿಕೊಳ್ಳಲಿದೆ ಎಂದು ಸಂಸದ ಅನಂತಕುಮಾರ ಹೆಗಡೆ ತಾಲೂಕಿನಲ್ಲಿ ರಸ್ತೆ ಕಾಮಗಾರಿ ಶಂಕುಸ್ಥಾಪನೆಯ ಬಳಿಕ ಅಭಿಪ್ರಾಯಪಟ್ಟರು. 6.35 ಕೋಟಿ ವೆಚ್ಚದ ಬಜ್ಜಿಗೇರಿಯಿಂದ ಆಶಿಕೇರಿಯವರೆಗಿನ ರಸ್ತೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಯ ಬಳಿಕ ಮಾತನಾಡಿದ ಅವರು ಒಂದು ಕಡೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಇನ್ನೊಂದಡೆ ಆರ್ಥಿಕ ಅಭಿವೃದ್ದಿಕಾರ್ಯವಾಗಬೇಕಿದೆ. ಕರ್ನಾಟಕದ ಅಭಿವೃದ್ಧಿಯ ಮತ್ತೊಂದು ಬಾಗಿಲು ಹೊನ್ನಾವರದ ಬಂದರಿನ ಮೂಲಕ ತೆರೆಯುತ್ತಿದೆ. ಬದಲಾವಣೆಗೆ ಜನರು ಒಪ್ಪಿಕೊಳ್ಳುವವರೆಗೆ ಜನರು ವಿರೋಧಿಸುವುದು ಸಹಜ ಎಂದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಆರಂಭವಾಗಿದ್ದು, ಜಿಲ್ಲೆಯವರು ಇದರ ಲಾಭ ಪಡೆಯಬೇಕು. ಇಲ್ಲದೆ ಹೋದರೆ ಬೇರೆ ರಾಜ್ಯದವರು ಇದರ ಲಾಭ ತೆಗೆದುಕೊಳ್ಳುತ್ತಾರೆ. ಕೃಷಿ ನಮಗೆ ಅನ್ನ ನೀಡುತ್ತಾ ಬದುಕು ಕೊಟ್ಟಿದೆ. ಆದರೆ ದೊಡ್ಡ ಪ್ರಮಾಣದ ಉದ್ಯಮ ಬರದೆ ಆರ್ಥಿಕ ಅಭಿವೃದ್ಧಿ ಸಾಧ್ಯವಿಲ್ಲ. ದೇಶದಲ್ಲಿ 130 ಕೋಟಿ ಜನರಿದ್ದಾರೆ. ಆದರೆ 2 ಕೋಟಿ ಜನರು ನೀಡುವ ಟ್ಯಾಕ್ಸ್ ಹಣದಿಂದ ಎಲ್ಲಾ ವ್ಯವಹಾರ ನಡೆಯುತ್ತಿದೆ. ಕಳೆದ 75 ವರ್ಷದಿಂದ ಭಾಷಣ ಮಾಡುವುದು ಅಭಿವೃದ್ಧಿ ಎಂದು ಅಂದಕೊಂಡಿದ್ದರು. ಇತ್ತಿಚೀನ ವರ್ಷದಲ್ಲಿ ಕೇಂದ್ರ ಸರ್ಕಾರದ ಕಾರ್ಯವೈಖರಿ ಗಮನಿಸಿದರೆ ಅಭಿವೃದ್ಧಿಯ ಪರಿಕಲ್ಪನೆ ಮೂಡುತ್ತಿದೆ ಎಂದರು.

.

ಈ ವೇಳೆ ಶಾಸಕ ಸುನೀಲ ನಾಯ್ಕ ತಹಸೀಲ್ದಾರ ನಾಗರಾಜ ನಾಯ್ಡ್, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮುಖಂಡರಾದ ಗೋವಿಂದ ನಾಯ್ಕ, ಉಮೇಶ ನಾಯ್ಕ, ಗ್ರಾ.ಪಂ. ಅಧ್ಯಕ್ಷ ಶಿವರಾಮ ಹೆಗಡೆ, ಚೇತನಾ ಮಡಿವಾಳ, ಬಿಜೆಪಿ ತಾಲೂಕು ಅಧ್ಯಕ್ಷ ರಾಜು ಭಂಡಾರಿ, ಗಣಪತಿ ನಾಯ್ಕ ಬಿಟಿ, ಪಕ್ಷದ ಕಾರ್ಯಕರ್ತರು, ಸಾರ್ವಜಕರು ಅಧಿಕಾರಿಗಳು ಹಾಜರಿದ್ದರು.

WhatsApp
Facebook
Telegram
error: Content is protected !!
Scroll to Top