ಅಪ್ಸರಕೊಂಡ ಸಮೀಪ ಕೆಳಗಿನೂರು ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ :ಅಪಘಾತದಲ್ಲಿ ಬೈಕ್ ಸವಾರ ಗಂಭೀರ

ಹೊನ್ನಾವರ : ತಾಲೂಕಿನ ದುರ್ಗಂಬಾ ಹೋಟೆಲ್ ಬಳಿ ಶನಿವಾರ ಮುಂಜಾನೆ ಲಾರಿ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆಂದು ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ದುರ್ಗಂಬಾ ಹೋಟೆಲ್ ಬಳಿ ಬೈಕ್ ಸವಾರ ತನ್ನ ಮಾರ್ಗದಲ್ಲಿ ಹೊನ್ನಾವರ ಕಡೆ ಹೋಗುತ್ತಿರುವಾಗ ಕಾಸರಕೋಡ ಪೆಟ್ರೋಲ್ ಪಂಪ್ ಕಡೆಯಿಂದ ಮುರ್ಡೇಶ್ವರ ಮಾರ್ಗವಾಗಿ ರಾಂಗ್ ರೂಟ್ ಅಲ್ಲಿ ಬಂದ ಲಾರಿ ಚಾಲಕ ಬೈಕ್ ಗೆ ಗುದ್ದಿ ಅಪಘಾತಪಡಿಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದ ತಕ್ಷಣ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ. ಗಾಯಳುವನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.

WhatsApp
Facebook
Telegram
error: Content is protected !!
Scroll to Top